
ಬೆಂಗಳೂರು(ಫೆ.10): ಆಸ್ಟ್ರೇಲಿಯಾದಲ್ಲಿ 2015 ರ ಮಾರ್ಚ್ 7 ರಂದು ನಡೆದ ಕರ್ನಾಟಕ ಮೂಲದ ಟೆಕ್ಕಿ ಪ್ರಭಾ ಹತ್ಯೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಸಿಡ್ನಿ ಪೊಲೀಸರು ಸಲ್ಲಿಸಿರುವ ತನಿಖಾ ವರದಿಯಲ್ಲಿ, ಮೈಂಡ್ ಟ್ರೀ ಕಂಪನಿಯ ಉದ್ಯೋಗಿಯಾಗಿದ್ದ ಪ್ರಭಾ ಅವರು ಕುಟುಂಬದ ಆಪ್ತರಿಂದಲೇ ಕೊಲೆಯಾಗಿರಬಹುದೆಂದು ಹೇಳಲಾಗಿದೆ. ಅಚ್ಚರಿ ಅಂದರೆ ಪ್ರಭಾ ಹತ್ಯೆಗೆ ಬೆಂಗಳೂರಿನಿಂದಲೇ ಸುಪಾರಿ ನೀಡಲಾಗಿದೆ ಎಂಬ ಅನುಮಾನದ ಮೇಲೆ ನ್ಯೂ ಸೌತ್ ವೇಲ್ಸ್ ಪೊಲೀಸರು ಹಲವರನ್ನು ವಿಚಾರಣೆ ನಡೆಸಿದ್ದಾರೆ.
ಪ್ರಭಾ ಅವರ ಪತಿ ಅರುಣ್ ಕುಮಾರ್, ಸಂಬಂಧಿಕರು, ಸೋದರರು, ಕಂಪನಿಯ ಅಧಿಕಾರಿಗಳು ಸೇರಿದಂತೆ ಹಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನುವ ಮಾಹಿತಿ ಬಯಲಾಗಿದ್ದು, ಪ್ರಭಾ ಹತ್ಯೆಗೆ ರಾಜ್ಯದಿಂದಲೇ ಸುಪಾರಿ ನೀಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಜ.14ರಂದು ಬೆಂಗಳೂರಿಗೆ ಬಂದಿದ್ದ ನ್ಯೂ ಸೌತ್ ವೇಲ್ಸ್ ಪೊಲೀಸರು, ಪ್ರಭಾ ಪತಿ ಅರುಣ್‌ಕುಮಾರ್, ಅತ್ತೆ ಮಾವ, ಬಾವಂದಿರು, ಬಂಟ್ವಾಳದ ಅಮ್ಟೂರಿನಲ್ಲಿರುವ ಪ್ರಭಾ ಪೋಷಕರು, ಸೋದರರು, ಪ್ರಭಾ ಕೆಲಸ ಮಾಡುತ್ತಿದ್ದ ‘ಮೈಂಡ್ ಟ್ರೀ’ ಕಂಪೆನಿಯ ಸಿಬ್ಬಂದಿ ಸೇರಿದಂತೆ ಹಲವರ ವಿಚಾರಣೆ ನಡೆಸಿದ್ದರು. ಎಲ್ಲರ ಹೇಳಿಕೆಗಳನ್ನು ದಾಖಲಿಸಿಕೊಂಡ ಬಳಿಕ ‘ಸುಪಾರಿ ಹತ್ಯೆ’ ಎಂಬ ತೀರ್ಮಾನಕ್ಕೆ ಬಂದ ಪೊಲೀಸರು, ಜ.28ರಂದು ಹಿಂತಿರುಗಿದ್ದಾರೆ.
2015ರ ಏಪ್ರಿಲ್'ನಲ್ಲಿ ಪ್ರಭಾ ಬೆಂಗಳೂರಿಗೆ ಬರಲು ಯೋಚನೆ ಮಾಡಿದ್ದರು. ಈ ವಿಚಾರ ತಿಳಿದು, ಅವರನ್ನು ಅಲ್ಲೇ ಮುಗಿಸಲು ಸಂಚು ರೂಪಿಸಿರಬಹುದು. ಆಸ್ಟ್ರೇಲಿಯಾದಲ್ಲಿ ಸಂಬಂಧಿಗಳನ್ನು ಹೊಂದಿರುವ ಆತ, ಸುಪಾರಿ ಕೊಟ್ಟು ಹಿಂದಿನ ತಿಂಗಳೇ ಹತ್ಯೆ ಮಾಡಿಸಿರಬಹುದು ಎಂಬ ಶಂಕೆ ಬಲವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.