ಕಾಂಗ್ರೆಸ್‌ ಸಂಸದ ರಾಜೀನಾಮೆ, ಬಿಜೆಪಿ ಕಡೆಗೆ ಅಧಿಕೃತ ಹೆಜ್ಜೆ

Published : Jul 30, 2019, 10:07 PM IST
ಕಾಂಗ್ರೆಸ್‌ ಸಂಸದ ರಾಜೀನಾಮೆ, ಬಿಜೆಪಿ ಕಡೆಗೆ ಅಧಿಕೃತ ಹೆಜ್ಜೆ

ಸಾರಾಂಶ

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಪ್ರತಿಷ್ಠಾಪನೆಯಾಗಿದೆ. ಪಕ್ಕದ ರಾಜ್ಯಗಳು ಮತ್ತು ಕೇಂದ್ರದಲ್ಲಿಯೂ ಈ ರಾಜಕೀಯ ಬದಲಾವಣೆಗಳು ಒಂದೆಲ್ಲಾ ಒಂದು ಪರಿಣಾಮ ಬೀರುತ್ತಿವೆ. ರಾಜ್ಯಸಭಾ ಸದಸ್ಯರೊಬ್ಬರು ಕಾಂಗ್ರೆಸ್ ತೊರೆದು ಕಮಲ ಹಿಡಿಯುವ ನಿರ್ಧಾರ ಮಾಡಿದ್ದಾರೆ.

ನವದೆಹಲಿ[ಜು. 30] ಕಾಂಗ್ರೆಸ್ ನಾಯಕ ಸಂಜಯ್ ಸಿಂಗ್ ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರುವ ನಿರ್ಧಾರ ಮಾಡಿದ್ದಾರೆ.

ಸಂಜಯ್ ಸಿಂಗ್ ಅಸ್ಸಾಂ ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದು, ರಾಜ್ಯಸಭೆಯ ಸಭಾಧ್ಯಕ್ಷ ವೆಂಕಯ್ಯ ನಾಯ್ಡು ರಾಜೀನಾಮೆ ನೀಡಿದ್ದು ಅಂಗೀಕಾರ ಆಗಿದೆ.  ಹಿಂದೆ ಬಿಜೆಪಿಯಲ್ಲಿದ್ದ ಸಂಜಯ್ ಸಿಂಗ್ ಉತ್ತರ ಪ್ರದೇಶದ ಅಮೇಥಿಯಿಂದ 90 ರ ದಶಕದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದರು.

ಸಂಪುಟ ವಿಸ್ತರಣೆಗೂ ಮುನ್ನ ಮೂವರ ಟೀಮ್ ರೆಡಿ ಮಾಡ್ಕೊಂಡ BSY

ಇನ್ನು ಸಂಜಯ್ ಸಿಂಗ್ ಅವರ ಪತ್ನಿ ಅಮಿತಾ ಕೂಡಾ ಕಾಂಗ್ರೆಸ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಸಂಜಯ್ ಸಿಂಗ್ ಮತ್ತು ಅಮಿತಾ ಇಬ್ಬರೂ ಬಿಜೆಪಿ ಸೇರುವ ಘೋಷಣೆ ಮಾಡಿದ್ದಾರೆ.

ನನಗೆ ಗಾಂಧಿ ಕುಟುಂಬದೊಂದಿಗೆ ನಿಕಟ ಸಂಬಂಧವಿದೆ, ಅದು ಮುಂದುವರಿಯಲಿದೆ. ಪ್ರಧಾನಿ ನರೇದ್ರ ಮೋದಿ ದೇಶದ ಅಭಿವೃದ್ಧಿ ಬಗ್ಗೆ ಹಲವಾರು ಕನಸುಗಳನ್ನು ಹೊಂದಿದ್ದು ಅವರ ಜತೆಯಾಗಲು ಬಯಸುತ್ತೇನೆ. ಕಾಂಗ್ರೆಸ್ ಪಕ್ಷದ ಸದ್ಯದ ವಾತಾವರಣ ಬದಲಾವಣೆಯಾಗಿವ ಲಕ್ಷಣ ಕಾಣುತ್ತಿಲ್ಲ ಹಾಗಾಗಿ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ