ಇಂದಿನ ಯುವಕ ಯುವತಿಯರಿಗೆ ಅದು ಏನಾಗಿದೆಯೋ? ದೆಹಲಿ ಮೆಟ್ರೋ ನಿಲ್ದಾಣದಲ್ಲಿ ಮುಕ್ತವಾಗಿ ಸರಸ ಸಲ್ಲಾಪದಲ್ಲಿ ತೊಡಗಿಕೊಂಡಿದ್ದ ದೃಶ್ಯವೊಂದು ವೈರಲ್ ಆಗಿದೆ.
ನವದೆಹಲಿ[ಜು. 30] ಜೋಡಿಯೊಂದು ದೆಹಲಿ ಮೆಟ್ರೋ ನಿಲ್ದಾಣದಲ್ಲಿಯೇ ಸರಸ-ಸಲ್ಲಾಪದಲ್ಲಿ ತೊಡಗಿರುವ ದರಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಲ್ಲದೇ ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳು ಪೋರ್ಸ್ ಸೈಟ್ ವೊಂದಕ್ಕೂ ಅಪ್ ಲೋಡ್ ಆಗಿದೆ.
ಬಿಜೆಪಿ ನಾಯಕ-ನಾಯಕಿಯ 13 ನಿಮಿಷದ ಬಾತ್‌ರೂಂ ವಿಡಿಯೋ ವೈರಲ್!
ಜೋಡಿ ವಿರುದ್ಧ ಆಜಾದ್ ಪುರ್ ಠಾಣೆಯಲ್ಲಿ ಪಕ್ರಕರಣವೂ ದಾಖಲಾಗಿದೆ. ಮೆಟ್ರೋ ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಅದು ಹೇಗೆ ಪೋರ್ಸ್ ಸೈಟ್ ಸೇರಿತು ಎಂದು ಮೆಟ್ರೋ ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದಾರೆ. ನಿಲ್ದಾಣದ ಯಾವುದೋ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎಂಬ ಅನುಮಾನವೂ ವ್ಯಕ್ತವಾಗಿದೆ.
ಹಿಂದೊಮ್ಮೆ ಹೈದರಾಬಾದ್ ಮೆಟ್ರೋ ನಿಲ್ದಾಣದ ಲಿಫ್ಟ್ ನಲ್ಲಿ ಯುವ ಪ್ರೇಮಿಗಳು ಮುತ್ತಿನ ಮಳೆಗೈಯುತ್ತಿರುವ ವಿಡಿಯೋ ಸಹ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದಾದ ಮೇಲೆ ಹೈದರಾಬಾದ್ ಪೊಲೀಸರು ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡಿದ್ದರು.