
ಸ್ಯಾಂಡಲ್‌ವುಡ್ ರೆಬೆಲ್ ಸ್ಟಾರ್, ಮಾಜಿ ಸಚಿವ ಅಂಬರೀಶ್ ಸಾವನ್ನಪ್ಪಿದ್ದಾರೆ. ಮಂಡ್ಯದ ಗಂಡು ಎಂದೇ ಖ್ಯಾತರಾಗಿದ್ದ ಅಂಬಿ ತಮ್ಮದೇ ಆದ ಅಪಾರ ಅಭಿಮಾನಿ ವರ್ಗ ಹೊಂದಿದ್ದರು. ಆದರೀಗ ಈ ಎಲ್ಲರನ್ನೂ ಬಿಟ್ಟು ಅವರು ಇಹಲೋಕ ತ್ಯಜಿಸಿದ್ದಾರೆ. ಇಡೀ ಕರುನಾಡೇ ಅಂಬಿಯನ್ನು ಕಳೆದುಕೊಂಡಿರುವ ದುಃಖದಲ್ಲಿದೆ. ಹೀಗಿರುವಾಗ ಅಂಬಿಯನ್ನು ಕಳೆದುಕೊಂಡ ನೋವು ತಡೆಯಲಾರದ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: ನಿನಗೆ ತುಂಬಾ ಕೊಬ್ಬು ಕಣೇ... ಅಂಬಿ ಪಂಚ್ ನೆನೆದು ಭಾವುಕರಾದ ನಟಿ
ಹೌದು ಅಂಬರೀಶ್ ಅಭಿಮಾನಿಯೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಡ್ಯ ಜಿಲ್ಲೆ, ಮದ್ದೂರು ತಾಲೂಕಿನ, ಹೊಟ್ಟೆ ಗೌಡನದೊಡ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಮ್ಮಯ್ಯ ಹೆಸರಿನ ಅಭಿಮಾನಿತಯೇ ರೈಲಿಗೆ ತಲೆಜಕೊಟ್ಟು ಮೃತ ಪಟ್ಟ ವ್ಯಕ್ತಿ. ಮೃತನಿಗೆ ಹೆಮಡತಿ ಸುಧಾ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.