
ನವದೆಹಲಿ (ಡಿ.21): ಸಮಾಜವಾದಿ ಪಕ್ಷದ ( Samajwadi Party) ಸಂಸದೆ ಜಯಾ ಬಚ್ಛನ್ (Jaya Bachchan) ಸಂಸತ್ತಿನಲ್ಲಿ ಆಡಿದ ಮಾತುಗಳು, ಬಿಜೆಪಿ (BJP) ಸರ್ಕಾರಕ್ಕೆ ಕೊಟ್ಟ ಶಾಪ (Curse)ಸಾಕಷ್ಟು ಸುದ್ದಿಯಾಗಿವೆ. ಸೋಮವಾರ ಕೆಲ ವಿಧೇಯಕದ ಕುರಿತಾಗಿ ಚರ್ಚೆಯ ವೇಳೆ ಸರ್ಕಾರದ ಕೆಲವು ನಿರ್ಧಾರಗಳನ್ನು ಕಟುವಾಗಿ ಮಾಜಿ ಬಾಲಿವುಡ್ ನಟಿ ಕಟುವಾಗಿ ಟೀಕಿಸಿದರು. ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ (ತಿದ್ದುಪಡಿ) ಮಸೂದೆ, 2021 ರ (Narcotic Drugs and Psychotropic Substances (Amendment) Bill 2021) ಚರ್ಚೆಯಲ್ಲಿ ಭಾಗವಹಿಸಿದ್ದ ಅವರು, ಸರ್ಕಾರದ ಕೆಲವು ಟೀಕೆಗಳಿಂದ ಸಾಕಷ್ಟು ಬೇಸರಗೊಂಡರು. ಇದೇ ವೇಳೆ ಸಭಾಪತಿಯಿಂದ ರಕ್ಷಣೆಯನ್ನೂ ಕೋರಿದ ಅವರು, "ಶೀಘ್ರದಲ್ಲಿಯೇ ನಿಮ್ಮ ಸರ್ಕಾರಕ್ಕೂ ಕೆಟ್ಟ ದಿನಗಳು ಬರಲಿವೆ. ಇದು ನನ್ನ ಶಾಪ" ಎಂದು ಹೇಳಿದ್ದರು.
ಈ ಬಗ್ಗೆ ಮಂಗಳವಾರ ಪ್ರತಿಕ್ರಿಯೆ ನೀಡಿದ ಅವರು, ಆ ಕ್ಷಣದಲ್ಲಿ ನಾನು ಬಹಳ ಸಿಟ್ಟಿಗೆದ್ದಿದ್ದೆ ಎಂದಿದ್ದಾರೆ. ಮುಂಬರುವ ಉತ್ತರ ಪ್ರದೇಶ ಚುನಾವಣೆಯ ವೇಳೆ ಬಿಜೆಪಿಗೆ ಹಿನ್ನಡೆಯಾಗುವುದು ಗೊತ್ತಾಗಿದೆ ಹಾಗಾಗಿ ಪ್ರತಿಪಕ್ಷಗಳನ್ನು ಕಟ್ಟಿಹಾಕುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಇತ್ತೀಚೆಗೆ ಸಮಾಜವಾದಿ ಪಕ್ಷದ ಮುಖಂಡರ ಆದಾಯ ತೆರಿಗೆ ರೈಡ್ ಗಳ ಬಗ್ಗೆ ಮಾತನಾಡಿದರು. ಈವರೆಗೂ ಯಾವುದೇ ಬಿಜೆಪಿ ನಾಯಕರ ಮೇಲೆ ಆದಾಯ ತೆರಿಗೆ ರೈಡ್ ಆಗಿಲ್ಲ ಎನ್ನುವುದನ್ನು ತಿಳಿಸಿದ ಜಯಾ ಬಚ್ಚನ್, "ಇವರೆಲ್ಲರೂ ಗಂಗಾ ನದಿಯಲ್ಲಿ ಸ್ನಾನ ಮಾಡಿದವರಾಗಿದ್ದಾರೆ. ಇವರ ಪಾಪಗಳನ್ನೆಲ್ಲಾ ತೊಳೆದುಕೊಂಡಿದ್ದಾರೆ. ಆದರೆ, ಗಂಗೆ ಈಗ ಅಶುದ್ಧವಾಗಿದ್ದಾಳೆ' ಎಂದು ಟೀಕೆ ಮಾಡಿದರು.
ಕೇಂದ್ರದ ಸಂಸ್ಥೆಗಳು ಸ್ವತಂತ್ರವಾಗಿ ಕೆಲಸ ನಿರ್ವಹಿಸುತ್ತದೆ ಎಂದು ಸರ್ಕಾರ ಹೇಳಿರುವ ಕುರಿತಾಗಿ ಹೇಳಿದ ಜಯಾ ಬಚ್ಛನ್, ಇದನ್ನು ನಂಬಲು ನಾವು ಅನಕ್ಷರಸ್ಥರೇ, ಅವಿದ್ಯಾವಂತರೇ? ಎಂದು ಪ್ರಶ್ನೆ ಮಾಡಿದ್ದಾರೆ. ರಾಜ್ಯಸಭೆಯಲ್ಲಿ (Rajya Sabha) ಬಿಜೆಪಿ ಸಂಸದರು ವೈಯಕ್ತಿಕ ದಾಳಿಗಿಳಿದ ಬಳಿಕ, ರೌದ್ರಾವತಾರ ತಾಳಿದ್ದ ಜಯಾ ಬಚ್ಛನ್, ಹೀಗೆ ಮಾಡುವ ಬದಲು ಒಮ್ಮೆಯೇ ನಮ್ಮೆಲ್ಲರ ಕುತ್ತಿಗೆಯನ್ನು ಒತ್ತಿಬಿಡಿ ಎಂದು ಕಿಡಿಕಾರಿದ್ದರು.
Ramesh Kumar Controversy: ರಮೇಶ್ ಕುಮಾರ್ ರೇಪ್ ಹೇಳಿಕೆಗೆ ಮಹಿಳಾ ಆಯೋಗ ಸೇರಿ ದೇಶದಾದ್ಯಂತ ಖಂಡನೆ
ಈ ಕುರಿತಾಗಿ ಮಾತನಾಡಿದ ಅವರು, "ನಾನು ಬಹಳ ಸಿಟ್ಟಿನಲ್ಲಿದ್ದೆ ಆಗ ಈ ಮಾತನ್ನು ಹೇಳಿದ್ದೇನೆ. ಇದು ಆಗಬೇಕು ಎಂದು ನಾನು ಬಯಸುತ್ತೇನೆ. ಅವರ ಕೆಟ್ಟ ದಿನಗಳು ಶೀಘ್ರವೇ ಆರಂಭವಾಗಲಿದೆ. ರಾಜ್ಯಸಭೆಯಿಂದ ಅಮಾನತುಗೊಂಡ ನಮ್ಮ 12 ಸಂಸದರ ಕುರಿತಾಗಿ ನಾನು ಸಿಟ್ಟಾಗಿದ್ದೆ. ಇದು ನನಗೆ ಬಹಳ ಸಿಟ್ಟು ತರಿಸಿತ್ತು. ಇದು ನ್ಯಾಯವಲ್ಲ. ಈ ಸರ್ಕಾರದಿಂದ ನ್ಯಾಯವನ್ನು ಕೇಳುವುದರಲ್ಲಿ ಅರ್ಥವೇ ಇಲ್ಲ. ಹೇಗೆ ರೈತರಲ್ಲಿ ಅವರು ಕ್ಷಮೆ ಕೇಳಿದರೂ ಅದೇ ರೀತಿ ಮುಂದೊಂದು ದಿನ ಈ ಸಂಸದರಲ್ಲಿಯೂ ಅವರ ಕ್ಷಮೆ ಕೇಳುತ್ತಾರೆ ಎಂದರು.
War of Words in RS: ಸಂಸತ್‌ನಲ್ಲಿ ಜಯಾ ಬಚ್ಚನ್, ಸಚಿವ ಪಿಯೂಷ್ ಗೋಯಲ್ ಮಧ್ಯೆ ವಾಕ್ಸಮರ
ವಿದೇಶಿ ವಿನಿಯಮ ನೀತಿ ಉಲ್ಲಂಘನೆಯ ಆರೋಪಗಳನ್ನು ಒಳಗೊಂಡ 2016ರ ಪನಾಮ ಪೇಪರ್ಸ್ (Panama Papers) ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಯಾ ಅವರ ಸೊಸೆ ಐಶ್ವರ್ಯಾ ರೈ (Aishwarya Rai Bachchan) ಅವರನ್ನು ಜಾರಿ ನಿರ್ದೇಶನಾಲಯ (Enforcement Directorate) ವಿಚಾರಣೆ ನಡೆಸಿದ ಒಂದು ದಿನದ ಬಳಿಕ ಜಯಾ ಬಚ್ಛನ್ ಈ ಮಾತುಗಳನ್ನು ಸಂಸತ್ತಿನಲ್ಲಿ ಆಡಿದ್ದಾರೆ. ಆದರೆ, ತಮ್ಮ ಸೊಸೆಯನ್ನು ವಿಚಾರಣೆ ಮಾಡಿದ ಕುರಿತಾಗಿ ತಾವು ಆಕ್ರೋಶಗೊಂಡಿದ್ದಾಗಿ ಎಲ್ಲಿಯೂ ತೋರಿಸಲಿಲ್ಲ. ಅದರ ಬದಲು ತಮ್ಮ ಪಕ್ಷದ ನಾಯಕರ ವಿರುದ್ಧ ಕೇಂದ್ರೀಯ ಏಜೆನ್ಸಿಗಳ ಕ್ರಮದ ಕುರಿತಾಗಿ ಪ್ರಸ್ತಾಪ ಮಾಡಿದ ಅವರು, ಸರ್ಕಾರ ಸಂಪೂರ್ಣವಾಗಿ ಸೋತಿದೆ. ಅವರ ಬಳಿ ನಮ್ಮನ್ನು ಕಟ್ಟಿಹಾಕಲು ಹಲವು ಸಾಧನಗಳಿವೆ, ಅದನ್ನು ಅವರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹವಾ ಬಡಿ ಕರಾರಿ ಹೈ, ಲಾಲ್ ಟೋಪಿ ಸಬ್ ಪೇ ಭಾಡಿ ಹೇ (ಗಾಳಿ ಜೋರಾಗಿ ಬೀಸಿದಾಗ, ಕೆಂಪು ಟೋಪಿ ಎಲ್ಲರ ಮೇಲಿರುತ್ತದೆ) ಎಂದು ಹೇಳಿದ್ದಾರೆ. ಸಮಾಜವಾದಿ ಪಕ್ಷದ ಕಾರ್ಯಕರ್ತರು ಕೆಂಪು ಟೋಪಿಗಳನ್ನು ಧರಿಸಿ ಕಾರ್ಯಕ್ರಮಗಳಿಗೆ ಹಾಜರಾಗುತ್ತಾರೆ ಅದನ್ನು ಸೂಚ್ಯವಾಗಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.