ಕೊನೆಗೂ ಬಯಲಾಯ್ತು ಪ್ರಧಾನಿ ಮೋದಿಯ ಸಂಬಳ!

Published : Dec 03, 2018, 01:08 PM IST
ಕೊನೆಗೂ ಬಯಲಾಯ್ತು ಪ್ರಧಾನಿ ಮೋದಿಯ ಸಂಬಳ!

ಸಾರಾಂಶ

ಭಾರತದ ಪ್ರಧಾನಿ ನರೇಂದ್ರ ಮೋದಿ ವೇತನ ಎಷ್ಟಿರಬಹುದು? ಎಂಬುವುದು ಸಹಜವಾಗಿಯೇ ಕುತೂಹಲ ಮೂಡಿಸುವ ವಿಚಾರ. ಸದ್ಯ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ದೇಶದ ಪ್ರಧಾನಿಯ ವೇತನವೆಷ್ಟು ಎಂದು ತಿಳಿದರೆ ಅಚ್ಚರಿ ಆಗುವುದರಲ್ಲಿ ಅನುಮಾನವಿಲ್ಲ.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಸರಿ ಸುಮಾರು ನಾಲ್ಕೂವರೆ ವರ್ಷಗಳನ್ನು ಪೂರೈಸಿದೆ. ದೇಶದ ಪ್ರಧಾನಿಯಾಗಿ ಕಾರ್ಯ ನಿರ್ವಹಿಸುತ್ತಿರುವ ನರೇಂದ್ರ ಮೋದಿ ವಿಶ್ವದ ಅಗ್ರ ನಾಯಕರ ಸಾಲಿನಲ್ಲಿ ನಿಂತಿದ್ದಾರೆ.  ಹೀಗಿರುವಾಗ ಪ್ರಧಾನಿ ಮೋದಿ ತಿಂಗಳಿಗೆ ಎಷ್ಟು ಸಂಬಳ ಪಡೆಯುತ್ತಾರೆ ಎಂಬುವುದು ಸಹಜವಾಗಿಯೇ ಕುತೂಹಲ ಮೂಡಿಸುವ ಪ್ರಶ್ನೆ. ಕೊನೆಗೂ ಈ ಪ್ರಶ್ನೆಗೆ ಉತ್ತರ ಲಭಿಸಿದ್ದು, ಪ್ರಧಾನಿ ಮೋದಿಯ ವೇತನ ಎಷ್ಟು ಎಂಬುವುದು ಬಹಿರಂಗವಾಗಿದೆ.

'ಪತ್ರಿಕಾ' ಎಂಬ ಸುದ್ದಿ ಜಾಲತಾಣದಲ್ಲಿ ಲಭ್ಯವಾದ ಮಾಹಿತಿ ಅನ್ವಯ ಪ್ರಧಾನಿ ಮೋದಿ ಮಾಸಿಕ ವೇತನ 1 ಲಕ್ಷದ 65 ಸಾವಿರ ಎಂದು ಹೇಳಲಾಗಿದೆ. ಇದನ್ನು ಹೊರತುಪಡಿಸಿ ಇತರ ಸೌಲಭ್ಯಗಳನ್ನೂ ನೀಡಲಾಗುತ್ತದೆ. ಆದರೆ ಭಾರತದಲ್ಲಿ ಈ ಮೊದಲಿನಿಂದಲೂ ಪ್ರಧಾನ ಮಂತ್ರಿಯ ವೇತನ ಓರ್ವ ಕ್ಯಾಬಿನೆಟ್ ಸಚಿವರಿಗಿಂತಲೂ ಕಡಿಮೆ ಎಂಬುವುದು ಅಚ್ಚರಿ ಮುಡಿಸುವಂತಹ ವಿಚಾರ. ಕ್ಯಾಬಿನೆಟ್ ಸಚಿವರ ಪ್ರತಿ ತಿಂಗಳ ವೇತನ 2.50 ಲಕ್ಷ.  

ವಾರ್ಷಿಕ ವೇತನ 19 ಲಕ್ಷದ 80 ಸಾವಿರ ಹೊರತುಪಡಿಸಿ, ಪ್ರಧಾನಿ ಮೋದಿ ಓಡಾಡುವ ಬಿಎಂ ಡಬ್ಲ್ಯೂ ಕಾರು ಹಾಗೂ ವಿದೇಶೀ ಪ್ರವಾಸದ ಖರ್ಚು ಹಾಗೂ ದೆಹಲಿಯ ಹೃದಯ ಭಾಗದಲ್ಲಿರುವ ರೇಸ್ ಕೋರ್ಟ್ ರಸ್ತೆಯಲ್ಲಿರುವ ನಂಬರ್ 7[ಭಾರತದ ಪ್ರಧಾನ ಮಂತ್ರಿ ನಿವಾಸ] ಖರ್ಚು ಹಾಗೂ ಊಟಕ್ಕೆ ತಗಲುವ ವೆಚ್ಚವನ್ನು ಭತ್ಯೆಯ ರೂಪದಲ್ಲಿ ಸರ್ಕಾರವೇ ಭರಿಸುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು