ಪ್ರಧಾನಿ ಮೋದಿಯ ವೇತನವೆಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗುತ್ತೆ!

Published : Nov 28, 2016, 07:07 PM ISTUpdated : Apr 11, 2018, 01:09 PM IST
ಪ್ರಧಾನಿ ಮೋದಿಯ ವೇತನವೆಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗುತ್ತೆ!

ಸಾರಾಂಶ

ಪ್ರಧಾನಿ ಮೋದಿ ಕೆಲಸವಿದ್ದಾಗ ಸಮಯದ ಕಡೆ ಗಮನ ಹರಿಸುವುದಿಲ್ಲ. ಇವರು ದಿನದ 12 ರಿಂದ 18 ಗಂಟೆಯಷ್ಟು ಹೊತ್ತು ಕೆಲಸ ಮಾಡುತ್ತಾರೆ ಎಂಬ ಮಾತಿದೆ. ಆದರೆ ಇದೀಗ ಅವರ ವೇತನದ ವಿಚಾರ ಬಹಿರಂಗಗೊಂಡಿದ್ದು, ಇದನ್ನು ಕೇಳಿದರೆ ನಿಜಕ್ಕೂ ನಿಮಗೆ ಅಚ್ಚರಿಯಾಗುತ್ತದೆ.

ನವದೆಹಲಿ(ನ.29): ಪ್ರಧಾನಿ ಮೋದಿ ಕೆಲಸವಿದ್ದಾಗ ಸಮಯದ ಕಡೆ ಗಮನ ಹರಿಸುವುದಿಲ್ಲ. ಇವರು ದಿನದ 12 ರಿಂದ 18 ಗಂಟೆಯಷ್ಟು ಹೊತ್ತು ಕೆಲಸ ಮಾಡುತ್ತಾರೆ ಎಂಬ ಮಾತಿದೆ. ಆದರೆ ಇದೀಗ ಅವರ ವೇತನದ ವಿಚಾರ ಬಹಿರಂಗಗೊಂಡಿದ್ದು, ಇದನ್ನು ಕೇಳಿದರೆ ನಿಜಕ್ಕೂ ನಿಮಗೆ ಅಚ್ಚರಿಯಾಗುತ್ತದೆ.

ನರೇಂದ್ರ ಮೋದಿ ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ 2 ವರ್ಷಕ್ಕಿಂತಲೂ ಹೆಚ್ಚು ಸಮಯವಾಗಿದೆ. ಇವರನ್ನು ಹತ್ತಿರದಿಂದ ಬಲ್ಲವರು 'ಮೋದಿ ನಿರಂತರ ಕೆಲಸ ಮಾಡುವುದರಲ್ಲಿ ನಂಬಿಕೆ ಇಡುತ್ತಾರೆ' ಎನ್ನುತ್ತಾರೆ. ಮೋದಿಯ ಉತ್ಸಾಹ ಹಾಗೂ ನಿರಂತರ ಕೆಲಸ ಮಾಡುವ ಗುಣವನ್ನು ಪ್ರತಿಪಕ್ಷಗಳೂ ಕೊಂಡಾಡುತ್ತವೆ.

ಇನ್ನು PMO ನಲ್ಲಿ ಮೋದಿ ಎಷ್ಟು ಸಮಯ ಕಳೆಯುತ್ತಾರೆ ಎಂಬ ವಿಚಾರವನ್ನು ನೋಡುವುದಾದರೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 05.30 ರವರೆಗೆ ಇವರು ತಮ್ಮ ಕಚೇರಿಯಲ್ಲಿರುತ್ತಾರೆ.  12 ರಿಂದ 18 ಗಂಟೆ ಕೆಲಸ ಮಾಡುವ ಪ್ರಧಾನಿ ಮೋದಿ ಕೇವಲ 3 ಗಂಟೆ ನಿದ್ದೆ ಮಾಡುತ್ತಾರೆ ಎಂಬ ಸುದ್ದಿಗಳೂ ಕೇಳಿ ಬಂದಿವೆ. ಇಷ್ಟೆಲ್ಲಾ ಇದ್ದರೂ ಇವರ ವೇತನ ಎಷ್ಟೆಂದು ತಿಳಿದರೆ ನಿಜಕ್ಕೂ ಶಾಕ್ ಆಗುತ್ತದೆ.

ಮೋದಿಯ ವಾರ್ಷಿಕ ವೇತನ 19.2 ಲಕ್ಷ ರೂ. ಅಂದರೆ ಪ್ರತಿ ತಿಂಗಳು ಸುಮಾರು 1 ಲಕ್ಷ 60 ಸಾವಿರ ರೂ ಇವರಿಗೆ ಸಿಗುವ ವೇತನ. ಈ ವೇತನದಲ್ಲೇ ಇವರ ಪರ್ಸನಲ್ ಸ್ಟಾಫ್, ಮನೆ ಹಾಗೂ ಇತರ ವಸ್ತುಗಳ ಖರೀದಿಗೆ ತಗುಲುವ ಖರ್ಚೂ ಸೇರಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು