ಕಾಂಗ್ರೆಸ್ ಹಿರಿಯ ಮುಖಂಡ ರಾಜೀನಾಮೆ

By Web DeskFirst Published Dec 18, 2018, 1:27 PM IST
Highlights

ಕಾಂಗ್ರೆಸ್ ಹಿರಿಯ ಮುಖಂಡ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ರವಾನಿಸಿದ್ದಾರೆ. ಸಿಖ್ ದಂಗೆಯ ತೀರ್ಪು ಪ್ರಕಟವಾಗುತ್ತಿದಂತೆ ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ಸಕ್ಕನ್ ಕುಮಾರ್ ರಾಜೀನಾಮೆ ನೀಡಿದ್ದಾರೆ. 

ನವದೆಹಲಿ :  1984 ರ ಸಿಖ್ ವಿರೋಧಿ ದಂಗೆಯಲ್ಲಿ ಭಾಗವಹಿಸಿದ್ದ ಆರೋಪ ಹೊತ್ತಿದ್ದ ಹಿರಿಯ ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್ ಅವರನ್ನು ಅಪರಾಧಿ ಎಂದು ಘೋಷಿಸಿರುವ ದಿಲ್ಲಿ ಹೈಕೋರ್ಟ್, ಅವರಿಗೆ ಆಜೀವ ಕಾರಾಗೃಹವಾಸ ಶಿಕ್ಷೆ ವಿಧಿಸಿದೆ. 

ಇದೇ ಬೆನ್ನಲ್ಲೇ ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ದಿಲ್ಲಿ ಹೈ ಕೋರ್ಟ್ ನಿಂದ ತಮ್ಮ ವಿರುದ್ಧ ತೀರ್ಪು ಪ್ರಕಟವಾಗಿದ್ದು,  ಈ ವಿಚಾರ ಪಕ್ಷದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದಂತೆ ತಮ್ಮ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ. ಅಲ್ಲದೇ ರಾಹುಲ್ ಗಾಂಧಿ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ರವಾನೆ ಮಾಡಿದ್ದಾಗಿ ತಿಳಿಸಿದ್ದಾರೆ. 

ಸಿಖ್ ದಂಗೆ : ಕಾಂಗ್ರೆಸ್ ಮುಖಂಡನಿಗೆ ಜೀವಾವಧಿ ಶಿಕ್ಷೆ

ದಿಲ್ಲಿ ಹೈ ಕೋರ್ಟ್ ಸೋಮವಾರ 1984 ರಲ್ಲಿ ನಡೆದ ಸಿಖ್ ದಂಗೆ ಪ್ರಕರಣದ ತೀರ್ಪನ್ನು 34 ವರ್ಷಗಳ ಬಳಿಕ ಪ್ರಕಟಿಸಿದ್ದು, ಸಜ್ಜನ್ ಕುಮಾರ್ ಗೆ ಜೀವಾಧಿ ಶಿಕ್ಷೆ ವಿಧಿಸಿದೆ.

ಸಜ್ಜನ್ ಕುಮಾರ್ ವಿರುದ್ಧ ಧ್ವೇಷ, ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ಸೇರಿದಂತೆ ವಿವಿಧ ಪ್ರಕರಣಗಳು ದಾಖಲಾಗಿದ್ದವು.  

ಪಂಚರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಸ್ವೀಕಾರ ಮಾಡಿದಂದೆ ಇತ್ತ ಸಜ್ಜನ್  ಕುಮಾರ್ ವಿರುದ್ಧ ದಿಲ್ಲಿ ಹೈ ಕೋರ್ಟ್ ತೀರ್ಪು ಪ್ರಕಟಿಸಿದೆ. 

click me!