ಮ. ಪ್ರ.ದಲ್ಲಿ ಜ್ಯೋತಿರಾದಿತ್ಯರನ್ನು ಬಿಟ್ಟು ಕಮಲ್‌ನಾಥ್‌ಗೆ ಮಣೆ ಹಾಕಿದ್ಯಾಕೆ?

By Web DeskFirst Published Dec 18, 2018, 12:37 PM IST
Highlights

ಮಧ್ಯ ಪ್ರದೇಶ ಸಿಎಂ ಆಗಿ ಕಮಲನಾಥ್ ಆಯ್ಕೆ | ಜ್ಯೋತಿರಾದಿತ್ಯರನ್ನು ಬಿಟ್ಟು ಕಮಲ್‌ನಾಥ್‌ರನ್ನು ಆಯ್ಕೆ ಮಾಡಲು ಕಾರಣವೇನು? ಲೋಕಸಭಾ ಚುನಾವಣೆ ಮುಂದಿಟ್ಟುಕೊಂಡು ಕಮಲ್‌ನಾಥ್ ಆಯ್ಕೆ ಮಾಡಿದ್ರಾ? 

ನವದೆಹಲಿ (ಡಿ. 18): ಮಧ್ಯಪ್ರದೇಶಕ್ಕೆ ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎನ್ನುವ ಬಗ್ಗೆ ರಾಹುಲ್‌ಗೆ ಹೆಚ್ಚು ಗೊಂದಲವಿದ್ದಂತೆ ಕಾಣಲಿಲ್ಲ. ಜ್ಯೋತಿರಾದಿತ್ಯ ಸಿಂಧಿಯಾ ಅವರು ಸೋನಿಯಾ ಮತ್ತು ಪ್ರಿಯಾಂಕಾ ಬಳಿ ಹೋಗಿ ಸ್ವಲ್ಪ ಲಾಬಿ ನಡೆಸಿದರಾದರೂ ಮಧ್ಯಪ್ರದೇಶದಲ್ಲಿ ದಿಗ್ವಿಜಯ್ ಸಿಂಗ್ ಮತ್ತು ದಿಲ್ಲಿಯಲ್ಲಿ ಅಹ್ಮದ್ ಪಟೇಲ್ ಆದಿಯಾಗಿ ಸೀನಿಯರ್ಸ್‌ಗಳು ‘ಕಮಲನಾಥ್‌ಗೆ ಒಂದು ಅವಕಾಶ ಸಿಗಬೇಕು. ಜ್ಯೋತಿರಾದಿತ್ಯ ಸಿಟ್ಟಿನ ಸ್ವಭಾವದವರು.

ಮಧ್ಯಪ್ರದೇಶದ ಸಿಎಂ ಇಂದಿರಾ ಗಾಂಧಿಯವರ 3 ನೇ ಪುತ್ರ!

ಲೋಕಸಭೆ ಚುನಾವಣೆಯೊಳಗೆ ಹೆಸರು ಕೆಡಿಸಿಕೊಂಡರೆ ಕಷ್ಟ ಎಂಬ’ ಎಂಬ ತರ್ಕ ಮುಂದಿಟ್ಟರು. ಆಗ ರಾಹುಲ್ ಕಮಲನಾಥ್ ಹೆಸರಿಗೆ ಓಕೆ ಅಂದು ಉಪ ಮುಖ್ಯಮಂತ್ರಿ ಆಗುತ್ತೀಯಾ ಎಂದು ಜ್ಯೋತಿರಾದಿತ್ಯಗೆ ಕೇಳಿದ್ದಾರೆ. ಗ್ವಾಲಿಯರ್ ಮಹಾರಾಜರು ಮತ್ತೊಬ್ಬರ ಕೈಕೆಳಗೆ ಕೆಲಸ ಮಾಡುವುದುಂಟೇ ಎಂದು ಜ್ಯೋತಿರಾದಿತ್ಯ ಒಲ್ಲೆ ಎಂದಿದ್ದಾರೆ. ಜ್ಯೋತಿರಾದಿತ್ಯ ಜನಸಾಮಾನ್ಯರಿಗೆ ಇಷ್ಟ, ಆದರೆ ಕಾರ್ಯಕರ್ತರಿಗೆ ಅಪಥ್ಯ. ಥೇಟ್ ರಾಜಸ್ಥಾನದ ಬಿಜೆಪಿ ನೊಗ ಹೊತ್ತಿರುವ ತನ್ನ ಸೋದರ ಅತ್ತೆಯಂತೆ.

- ಪ್ರಶಾಂತ್ ನಾತು, ಸುವರ್ಣನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣ ಸುದ್ದಿಗಾಗಿ  ಇಂಡಿಯಾ ಗೇಟ್  ಕ್ಲಿಕ್ ಮಾಡಿ 


 

click me!