ಕೇರಳ ಬಂದ್ ವೇಳೆ ಹಿಂಸಾಚಾರ, ಬಿಜೆಪಿ ಕಾರ್ಯಕರ್ತರಿಗೆ ಚಾಕು ಇರಿತ

By Web DeskFirst Published Jan 3, 2019, 4:18 PM IST
Highlights

ಮಹಿಳೆಯರಿಬ್ಬರು ಶಬರಿಮಲೆ ಅಯ್ಯಪ್ಪ ದೇವಾಲಯ ಪ್ರವೇಶ ಮಾಡಿದಾಗಿನಿಂದ ಕೇರಳದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಬಿಜೆಪಿ ಮತ್ತು ಹಿಂದು ಪರ ಸಂಘಟನೆಗಳು ಕರೆ ನೀಡಿದ್ದ ಬಂದ್ ಹಿಂಸಾಚಾರಕ್ಕೆ ತಿರುಗಿದೆ.

ತಿರುವನಂತಪುರ[ಜ.03]  ಕೇರಳ ಬಂದ್ ವೇಳೆ ಹಿಂಸಾಚಾರ ನಡೆದಿದ್ದು  ತ್ರಿಸ್ಸೂರ್ನಲ್ಲಿ ನಾಲ್ವರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲಾಗಿದೆ.

ಬಿಜೆಪಿ ಮತ್ತು ಸಿಪಿಎಂ ಕಾರ್ಯಕರ್ತರ ಘರ್ಷಣೆ ನಡೆದಿದ್ದು ಬಿಜೆಪಿ ಕಾರ್ಯಕರ್ತರನ್ನು ಚಾಕುವಿನಿಂದ ಇರಿಯಲಾಗಿದೆ. ಗಾಯಗೊಂಡಿರುವ ಮೂವರು ಬಿಜೆಪಿ ಕಾರ್ಯಕರ್ತರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

‘ಹೆಣ್ಮಕ್ಕಳು ಹೋದ್ರೆ ಏನೂ ಆಗೋದಿಲ್ಲ ಅಲ್ಲಿ’

ಕೋಜಿಕೋಡ್ ನಲ್ಲಿ ಅಂಗಡಿ ಮುಗ್ಗಟ್ಟುಗಳ ಮೇಲೆ ಬಿಜೆಪಿ ಮತ್ತು ಹಿಂದು ಕಾರ್ಯಕರ್ತರು ದಾಳಿ ಮಾಡಿದ್ದಾರೆ. ತಿರುವನಂತಪುರದಲ್ಲಿ ಸಿಎಂ ಕಾರಿಗೆ ಕಪ್ಪು ಪಟ್ಟಿ ತೋರಿಸುವ ವೇಳೆ ನಾಲ್ವರು ಕಾಂಗ್ರೆಸ್ ಕಾರ್ಯಕರ್ತರಿಗೆ ಗಾಯಗಳಾಗಿವೆ.

ಶಬರಿಮಲೆ ಪ್ರವೇಶಿಸಿದ ಬಿಂದು ಮತ್ತು ಕನಕದುರ್ಗ ಯಾರು? ಇಲ್ಲಿದೆ ಸ್ಫೋಟಕ ಮಾಹಿತಿ

ಸುಪ್ರೀಂ ತೀರ್ಪಿಗೆ ವಿರುದ್ಧವಾಗಿ ಸುಗ್ರೀವಾಜ್ಞೆ ಜಾರಿ ಮಾಡುವಂತೆ ಆರ್ ಎಸ್ ಎಸ್ ಕಾರ್ಯಕರ್ತರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಇಬ್ಬರು ಮಹಿಳೆಯರು ಪ್ರವೇಶಿಸಿದ್ದು ಸುದ್ದಿಯಾಗುತ್ತಿದ್ದಂತೆ ಇಡೀ ಕೇರಳ ಬೆಂಕಿಯುಂಡೆಯಾಗಿತ್ತು. ಹಿಂಸಾಚಾರ ನಡೆಯಬಹುದೆಂಬ ಗುಪ್ತಚರ ಮಾಹಿತಿ  ಆಧರಿಸಿ ಭದ್ರತೆ ಹೆಚ್ಚು ಮಾಡಲಾಗಿದ್ದರೂ ಕೆಲವು ಕಡೆ ಪರಿಸ್ಥಿತಿ ಕೈ ಮೀರಿದೆ.
 

 

 

click me!