ವಿದೇಶದಿಂದ ಹಿಂದಿರುಗಿದ ಕುಮಾರಸ್ವಾಮಿಗೆ ಬಿಜೆಪಿ 'ಗ್ರ್ಯಾಂಡ್' ವೆಲ್ ಕಮ್

Published : Jan 03, 2019, 02:47 PM ISTUpdated : Jan 03, 2019, 02:48 PM IST
ವಿದೇಶದಿಂದ ಹಿಂದಿರುಗಿದ ಕುಮಾರಸ್ವಾಮಿಗೆ ಬಿಜೆಪಿ 'ಗ್ರ್ಯಾಂಡ್' ವೆಲ್ ಕಮ್

ಸಾರಾಂಶ

ಕುಟುಂಬದೊಂದಿಗೆ ಸಿಂಗಾಪುರಕ್ಕೆ ತೆರಳಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ರಾಜ್ಯ ಬಿಜೆಪಿ  'ಗ್ರ್ಯಾಂಡ್' ವೆಲ್ ಕಮ್ ಮಾಡಿದೆ.

ಬೆಂಗಳೂರು, [ಜ.03]: ವರ್ಷಾಂತ್ಯದಲ್ಲಿ ಕುಟುಂಬ ಸಮೇತ ಐದು ದಿನಗಳ ಕಾಲ ವಿದೇಶಿ ಪ್ರವಾಸ ಕೈಗೊಂಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು [ಗುರುವಾರ] ಬೆಳಗ್ಗೆ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. 

ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್​ ಕುಮಾರಸ್ವಾಮಿ ಅವರೊಂದಿಗೆ ಸಿಂಗಾಪುರಕ್ಕೆ ತೆರಳಿದ್ದ ಕುಮಾರಸ್ವಾಮಿ ಅವರನ್ನು ರಾಜ್ಯ ಬಿಜೆಪಿ ವೆಲ್ ಕಮ್ ಮಾಡುವ ಮೂಲಕ ಕಾಲೆಳೆದಿದೆ. 

ಹೊಸ ವರ್ಷದ ಪಾರ್ಟಿ ಮುಗಿಸಿಕೊಂಡು ತವರಿಗೆ ಮರಳಿದ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರಿಗೆ ಸ್ವಾಗತ. ನಿಮ್ಮ ಹೊಸ ವರ್ಷಾಚರಣೆ ಚೆನ್ನಾಗಿತ್ತು ಎನಿಸುತ್ತದೆ ಎಂದು ಟ್ವೀಟ್​ ಮಾಡುವ ಮೂಲಕ ಎಚ್​ಡಿಕೆ ಅವರನ್ನು ಬಿಜೆಪಿ ಸ್ವಾಗತಿಸಿದೆ.

ತಮ್ಮ ಟ್ವೀಟ್​ನಲ್ಲಿ ನಿಮ್ಮ ಪ್ರವಾಸಗಳೆಲ್ಲವೂ ಮುಗಿದಿದ್ದರೆ, ನೀವು ಇನ್ನು ಮುಂದೆ ಮಾಡಬೇಕಾದ ಕೆಲಸಗಳು  ಹೀಗಿವೆ ಎಂದು ಸಾಲ ಮನ್ನಾ, ಸ್ಟೀಲ್ ಬ್ರಿಡ್ಜ್ ವಿವಾದ ಸೇರಿದಂತೆ ಹಲವು  ಪಟ್ಟಿ ಮಾಡಿ ಸಿಎಂ ಕರ್ತವ್ಯವನ್ನು ನೆನಪಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Davanagere South by election results 2026: ಇಂದು ಮತ ಎಣಿಕೆ ಹಿನ್ನೆಲೆ 'ಶುಷ್ಕ ದಿವಸ' ಘೋಷಣೆ, ಯಾವಕ್ಕೆಲ್ಲ ನಿರ್ಬಂಧ?
ದಕ್ಷಿಣಕ್ಕೆ ಸಮರ್ಥ ಆಯ್ಕೆಯೋ?, ಶ್ರೀನಿವಾಸ ಕಲ್ಯಾಣವೋ?! SDPI ಅಭ್ಯರ್ಥಿ ಅಫ್ಸರ್‌ ಸ್ಪರ್ಧೆಯಿಂದ 'ಕೊಡ್ಲಿ ಪೆಟ್ಟು' ಯಾರಿಗೆ?