
ನವದೆಹಲಿ(ಏ.30): ಬಾಹ್ಯಾಕಾಶ ಸಾಧನೆಯಲ್ಲಿ ವಿಶ್ವದ ಹುಬ್ಬೇರಿಸುತ್ತಿರುವ ಭಾರತ ಈ ಬಾರಿ ಮತ್ತೊಂದು ಮಹತ್ವದ ಹೆಜ್ಜೆ ಇಡಲು ಮುಂದಾಗಿದೆ. ನೈಸರ್ಗಿಕ ಸಂಪತ್ತು, ಶಿಕ್ಷಣ ಸೇರಿದಂತೆ ಹಲವು ಉಪಯೋಗಗಳನ್ನು ಸಾರ್ಕ್'ನ 7 ದೇಶಗಳಿಗೆ ಉಚಿತವಾಗಿ ನೀಡಬಲ್ಲ ಉಪಗ್ರಹವನ್ನು ಉಡಾವಣೆಗೆ ಮುಂದಾಗಿದೆ.
ಆದರೆ ನಿರೀಕ್ಷೆಯಂತೆ ಪಾಕಿಸ್ತಾನ ಇಲ್ಲೂ ಕೂಡ ಕ್ಯಾತೆ ತೆಗೆದಿದೆ. ಭಾರತ ಯಾವುದೇ ಉಪಗ್ರಹ ಉಡಾವಣೆ ಮಾಡುತ್ತೆ ಅಂದರೆ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತೆ. ಇದಕ್ಕೆ ಸಾಕ್ಷಿಯೆಂಬಂತೆ ಕಳೆದ ಬಾರಿ 110 ಉಪಗ್ರಹಗಳನ್ನು ಏಕಕಾಲಕ್ಕೆ ನಭಕ್ಕೆ ಹಾರಿಸಿದ ವಿಶ್ವದಾಖಲೆಯೇ ಸಾಕ್ಷಿ. ಅದೇ ರೀತಿ ಈ ಬಾರಿಯೂ ಭಾರತ ನೆರೆಯ ರಾಷ್ಟ್ರಗಳಾದ ಶ್ರೀಲಂಕಾ, ಭೂತಾನ್, ಅಫಘಾನಿಸ್ತಾನ, ನೇಪಾಳ, ಮಾಲ್ಡಿವ್ಸ್, ಪಾಕಿಸ್ತಾನ, ಬಾಂಗ್ಲಾದೇಶಗಳಿಗೆ ಉಚಿತವಾಗಿ ಸೇವೆ ಸಲ್ಲಿಸುವ ಉಪಗ್ರಹವನ್ನು ಕಕ್ಷೆಗೆ ಚಿಮ್ಮಿಸಲು ಸಿದ್ದವಾಗಿದೆ.
ಇದು ಅಂತಿಂಥಾ ಉಪಗ್ರಹ ಅಲ್ಲ ಸತತ 12 ವರ್ಷಗಳ ಕಾಲ ನೆರೆಯ ರಾಷ್ಟ್ರಗಳಿಗೆ ಉಚಿತವಾಗಿ ಸೇವೆ ನೀಡಬಲ್ಲ ಅತ್ಯುತ್ತಮ ತಂತ್ರಜ್ಞಾನ ಹೊಂದಿರೋ ಉಪಗ್ರಹ ಇದು. ಸೌತ್ ಏಷಿಯಾ ಸ್ಯಾಟಲೈಟ್ ಹೆಸರಿನ ಈ ಉಪಗ್ರಹಕ್ಕೆ ತಗುಲಿರೋ ವೆಚ್ಚ ಬರೋಬ್ಬರಿ 1.5 ಶತಕೋಟಿ ಡಾಲರ್. ನೈಸರ್ಗಿಕ ಸಂಪತ್ತು, ಶಿಕ್ಷಣ, ವಿಪತ್ತು ಮತ್ತು ಸವಂಹನ ನೆರವು ಸೇರಿದಂತೆ ಟೆಲಿಮೆಡಿಸಿನ್ ಬಗ್ಗೆ ಇದು ಮಾಹಿತಿ ಒದಗಿಸಲಿದೆ. ಆದರೆ ಈ ಉಪಗ್ರಹದ ಉಪಯೋಗ ನಮಗೆ ಮಾತ್ರ ಬೇಡ ಅಂತ ಪಾಕಿಸ್ತಾನ ಕ್ಯಾತೆ ತೆಗೆದಿದೆ. ಬದಲಿಗೆ ಇಸ್ಲಾಂ ಧರ್ಮ ಪ್ರಚಾರದ ಉಪಗ್ರಹವನ್ನು ಉಡಾವಣೆ ಮಾಡೋದಾಗಿ ಪಾಕಿಸ್ತಾನ ಹೇಳಿಕೊಂಡಿದೆ.
ದಕ್ಷಿಣ ಏಷ್ಯಾಕ್ಕೆ ಉಚಿತವಾಗಿ ಇಸ್ಲಾಂ ಧರ್ಮವನ್ನು ಪ್ರಚಾರಪಡಿಸುವ ದೃಷ್ಟಿಯಿಂದ ಉಪಗ್ರಹವನ್ನು ಉಡಾವಣೆ ಮಾಡೋದಾಗಿ ಪಾಕಿಸ್ತಾನ ಹೇಳಿದೆ. ಅಲ್ಲದೆ ಇದು ಡಿಟಿಹೆಚ್ ಮೂಲಕ ಉಚಿತವಾಗಿ ನೀಡುವುದಾಗಿ ಹೇಳಿಕೊಂಡಿದೆ. ಕಳೆದ ಡಿಸಂಬರ್‌ನಲ್ಲೇ ಈ ಉಪಗ್ರಹ ಉಡಾವಣೆಯಾಗಬೇಕಾಗಿತ್ತು. ಆದರೆ ಈವೆರೆಗೂ ಅದು ಸಾಧ್ಯವಾಗಿಲ್ಲ. ಒಟ್ಟಿನಲ್ಲಿ ಪಾಕಿಸ್ತಾನಕ್ಕೆ ಅಭಿವೃದ್ಧಿಗಿಂತ ಕುಯುಕ್ತಿಯಲ್ಲೇ ಹೆಚ್ಚು ಸಾಧನೆ ಇದೆ ಅನ್ನೋದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾಗಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.