
ಬೆಂಗಳೂರು (ಏ.03): ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಹೊಸದೊಂದು ದಾಖಲೆ ಮಾಡಲು ಚುನಾವಣಾ ಪ್ರಚಾರ ಸಜ್ಜಾಗಿದೆ. ಎಸ್.ಎಂ.ಕೃಷ್ಣರೊಂದಿಗೆ ಮಾಜಿ ಡಿಸಿಎಂ ಆರ್.ಅಶೋಕ್ ಸಾಥ್ ನಿಂದ ಎರಡು ದಿನಗಳ ಕಾಲ ಪ್ರಚಾರ ನಡೆಯಲಿದೆ.
ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ ಬೆಳಸಿದ ಎಸ್.ಎಂ.ಕೃಷ್ಣ ಉಪ-ಚುನಾವಣೆಯ ಪ್ರಚಾರಕ್ಕೆ ತೆರಳುತ್ತಿದ್ದಾರೆ. ಎಸ್.ಎಂ.ಕೃಷ್ಣ ರವರು ಸತತ ಎರಡು ದಿನಗಳ ಕಾಲ ನಂಜನಗೂಡು, ಗುಂಡ್ಲುಪೇಟೆಯಲ್ಲಿ ಪ್ರಚಾರ ನಡೆಸಲಿದ್ದಾರೆಂದು ಬಿಜೆಪಿ ಮುಖಂಡ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ. ಎಸ್.ಎಂ.ಕೃಷ್ಣ ಸೇರಿದಂತೆ ಅನೇಕರು ಬಿಜೆಪಿ ಕಡೆ ಒಲವು ತೋರುತ್ತಿದ್ದು ಜಾಫರ್ ಷರೀಫ್, ಎಂ.ವಿ.ರಾಜಶೇಖರನ್ ಎಲ್ಲರು ಬಿಜೆಪಿಗೆ ಶ್ಲಾಘನೆ ಹರಿಸಿದರು.
ಈ ಉಪ-ಚುನಾವಣೆ ಮುಂದಿನ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಅಲ್ಲ.ಇದೊಂದು ಸಾಮಾನ್ಯ ಚುನಾವಣ ನಾನು ಬಿಜೆಪಿಯಿಂದ ಪ್ರೇರಿತನಾಗಿ ಪಕ್ಷಕ್ಕೆ ಬಂದಿದ್ದೇನೆ.ಪ್ರಚಾರ ಮಾಡ್ತೀನಿ. ನನಗೆ ಪ್ರಚಾರ ಹೊಸದೇನು ಅಲ್ಲ.ಈಗ ಬಿಜೆಪಿ ಪರ ಪ್ರಚಾರ ಮಾಡಲು ಹೊರಟಿದ್ದೇನೆ ಎಂದು ಎಸ್.ಎಂ.ಕೃಷ್ಣ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.