
ನವದೆಹಲಿ (ಸೆ.11): ಗುರ್ಗಾಂವ್ ರ್ಯಾನ್ ಇಂಟರ್’ನ್ಯಾಷನಲ್ ಶಾಲೆಯಲ್ಲಿ ಮೃತಪಟ್ಟ 2 ನೇ ತರಗತಿ ಬಾಲಕನ ತಂದೆ ಸಲ್ಲಿಸಿದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಕೊಂಡಿದ್ದು, ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಲು ಕೇಂದ್ರ ಸರ್ಕಾರ, ಹರ್ಯಾಣ ಸರ್ಕಾರ ಹಾಗೂ ಸಂಬಂಧಿತ ಅಧಿಕಾರಿಗಳ ಪ್ರತಿಕ್ರಿಯೆಯನ್ನು ಕೋರಿದೆ. ಪ್ರತಿಕ್ರಿಯೆಗೆ 3 ವಾರಗಳ ಗಡುವು ನೀಡಲಾಗಿದೆ.
ಮೃತ ಬಾಲಕನ ತಂದೆ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಶಾಲೆಯ ಭದ್ರತಾ ಲೋಪವೇ ತನ್ನ ಮಗನ ಸಾವಿಗೆ ಕಾರಣವೆಂದು ಆರೋಪಿಸಿದ್ದಾರೆ. ಇಂತಹ ದುರ್ಘಟನೆ ಮತ್ತೆಂದೂ ಪುನರಾವರ್ತಿತವಾಗಬಾರದೆಂದು ಎಲ್ಲಾ ಶಾಲೆಗಳಿಗೂ ಮಾರ್ಗದರ್ಶನ ನೀಡಿ ಎಂದು ಅರ್ಜಿಯಲ್ಲಿ ಕೋರಿದ್ದಾರೆ.
ಶಾಲೆಯ ಕೋ ಆರ್ಡಿನೇಟರ್’ರನ್ನು ನಿನ್ನೆ ರಾತ್ರಿ ಬಂಧಿಸಲಾಗಿದೆ. ರ್ಯಾನ್ ಇಂಟರ್’ನ್ಯಾಷನಲ್ ಸಮೂಹದ ಮುಖ್ಯಸ್ಥನನ್ನು ವಿಚಾರಣೆ ಮಾಡಲು ಹರ್ಯಾಣ ಪೊಲೀಸರು ಮುಂಬೈಗೆ ತಂಡವೊಂದನ್ನು ಕಳುಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.