ಪೇದೆ ಸಾವಿಗೆ ರೂ.1 ಕೋಟಿ ಪರಿಹಾರ ಕೇಳಿದ ಪತ್ನಿ

By ವೆಂಕಟೇಶ್ ಕಲಿಪಿFirst Published Sep 11, 2017, 4:42 PM IST
Highlights

ಪೊಲೀಸ್ ಇಲಾಖೆಯ  ನಿರ್ಲಕ್ಷ್ಯದಿಂದ ಮೃತಪಟ್ಟ ಪೇದೆಯೊಬ್ಬರ ಪತ್ನಿ ತನ್ನ ಪತಿಯ ಸಾವಿಗೆ 1 ಕೋಟಿ ರು. ಪರಿಹಾರ ನೀಡುವಂತೆ ರಾಜ್ಯ ಸರ್ಕಾರದ ವಿರುದ್ಧ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಭಟ್ಕಳದ ಸಮುದ್ರದಲ್ಲಿ ಪೊಲೀಸ್ ಇಲಾಖೆ ಆಯೋಜಿಸಿದ ಸ್ಕೂಬಾ ಡೈವಿಂಗ್ ತರಬೇತಿ ವೇಳೆ ಕರಾವಳಿ ಭದ್ರತಾ ಪಡೆಯ ಪೇದೆಯೊಬ್ಬರು ಮೃತಪಟ್ಟಿದರು. ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಸುಸ್ತಾಗಿದ್ದ ಪತಿಗೆ ಸುಧಾರಿಸಿಕೊಳ್ಳಲು ಕಾಲಾವಕಾಶ ನೀಡದೆ ಮತ್ತೆ ನೀರಿನಲ್ಲಿ ಡೈವಿಂಗ್ ಮಾಡಿಸಿ ಆತನ ಸಾವಿಗೆ ಕರಾವಳಿ ಭದ್ರತಾ ಪಡೆಯೇ ಕಾರಣವಾಗಿದೆ ಎಂಬುದು ಪತ್ನಿಯ ಆರೋಪ.

ಬೆಂಗಳೂರು: ಪೊಲೀಸ್ ಇಲಾಖೆಯ  ನಿರ್ಲಕ್ಷ್ಯದಿಂದ ಮೃತಪಟ್ಟ ಪೇದೆಯೊಬ್ಬರ ಪತ್ನಿ ತನ್ನ ಪತಿಯ ಸಾವಿಗೆ 1 ಕೋಟಿ ರು. ಪರಿಹಾರ ನೀಡುವಂತೆ ರಾಜ್ಯ ಸರ್ಕಾರದ ವಿರುದ್ಧ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಭಟ್ಕಳದ ಸಮುದ್ರದಲ್ಲಿ ಪೊಲೀಸ್ ಇಲಾಖೆ ಆಯೋಜಿಸಿದ ಸ್ಕೂಬಾ ಡೈವಿಂಗ್ ತರಬೇತಿ ವೇಳೆ ಕರಾವಳಿ ಭದ್ರತಾ ಪಡೆಯ ಪೇದೆಯೊಬ್ಬರು ಮೃತಪಟ್ಟಿದರು. ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಸುಸ್ತಾಗಿದ್ದ ಪತಿಗೆ ಸುಧಾರಿಸಿಕೊಳ್ಳಲು ಕಾಲಾವಕಾಶ ನೀಡದೆ ಮತ್ತೆ ನೀರಿನಲ್ಲಿ ಡೈವಿಂಗ್ ಮಾಡಿಸಿ ಆತನ ಸಾವಿಗೆ ಕರಾವಳಿ ಭದ್ರತಾ ಪಡೆಯೇ ಕಾರಣವಾಗಿದೆ ಎಂಬುದು ಪತ್ನಿಯ ಆರೋಪ.

ಈ ಹಿನ್ನೆಲೆಯಲ್ಲಿ ಶೇ.12ರಷ್ಟು ಬಡ್ಡಿ ದರದಲ್ಲಿ ಒಂದು ಕೋಟಿ ರು. ಮತ್ತು ಪತಿಯ ಸಾವಿನಿಂದ ಉಂಟಾದ ಮಾನಸಿಕ ಹಿಂಸೆಗೆ ಐದು ಲಕ್ಷ ರು. ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕು ಎಂದು ಮೃತ ಪೇದೆಯ ಪತ್ನಿ ಹಾಗೂ ಇಬ್ಬರು ಪುತ್ರರು ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿ ಈಚೆಗೆ ಆಯೋಗದ ಎದುರು ವಿಚಾರಣೆಗೆ ಬಂದಿತ್ತು. ಅರ್ಜಿ ಕುರಿತು ಆಕ್ಷೇಪಣೆ ಸಲ್ಲಿಸುವಂತೆ ಉಡುಪಿ ಜಿಲ್ಲೆಯ ಮಲ್ಪೆಯ ಕರಾವಳಿ ಭದ್ರತಾ ಪೊಲೀಸ್ ಘಟಕದ ಅಧೀಕ್ಷಕರು, ಪ್ಲಾನೆಟ್ ಸ್ಕೂಬಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಮಾಧವ ರೆಡ್ಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಗೃಹ ಇಲಾಖೆ ಹೆಚ್ಚುವರಿ ಕಾರ್ಯದರ್ಶಿಗೆ ಆಯೋಗನಿರ್ದೇಶಿಸಿದೆ. ಕರಾವಳಿ ಭದ್ರತಾ ಪೊಲೀಸ್ ಘಟಕದ ಅಧೀಕ್ಷಕರ ಪರವಾಗಿ ಹೈಕೋರ್ಟ್ ಹೆಚ್ಚುವರಿ ಸರ್ಕಾರಿ ವಕೀಲ ಮುನಿ ಗಂಗಪ್ಪ ವಕಾಲತ್ತು ಹಾಕಿದ್ದಾರೆ.

ಭಾಸ್ಕರ ಕುಲಾಲ್ ಎಂಬುವರು 2002ರ ಡಿ.7ರಂ ದು ರೈಲ್ವೇ ಇಲಾಖೆಯಲ್ಲಿ ಪೇದೆಯಾಗಿ ನೇಮಕ ಗೊಂಡ್ಡಿದ್ದರು.2013ರ ಫೆ.28ರಂದು ಸ್ಕೂಬಾ ಡೈವಿಂಗ್ ತರಬೇತಿ ವೇಳೆ ಸಾವನ್ನಪ್ಪಿದರು. ಈ ಹಿನ್ನೆಲೆಯಲ್ಲಿ ಮೃತನ ಪತ್ನಿ ವಿ.ಎನ್. ಪೂರ್ಣಿಮಾ ಮತ್ತು ಪುತ್ರರಾದಬುವನ್ (6) ಮತ್ತು ಪ್ರಕುಲ್ (3) ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದಾರೆ.

1 ಕೋಟಿ ರು. ಪರಿಹಾರ ಏಕೆ?

ಮೃತಪಟ್ಟ ಸಮಯದಲ್ಲಿ ಭಾಸ್ಕರ್ 33 ವರ್ಷದವರಾಗಿದ್ದು, ಮಾಸಿಕ 17,557 ರು. ವೇತನ ಪಡೆದಿದ್ದರು. ಇನ್ನು 27 ವರ್ಷ ಸೇವಾವಧಿ ಬಾಕಿಯಿತ್ತು. ನಿವೃತ್ತಿಯ ವೇಳೆಗೆ ಒಟ್ಟು 54,77,784 ರು. ಸಂಪಾದಿಸುತ್ತಿದ್ದರು. ಹಲವು ಸೇವಾ ಬಡ್ತಿಯಿಂದ ಒಂದು ಕೋಟಿ ರು.ಗಿಂತ ಹೆಚ್ಚು ಸಂಪಾದಿಸುತ್ತಿದ್ದರು. ಪತಿಯ ಸಾವಿಗೆ ಪರಿಹಾರ ಕಲ್ಪಿಸುವಂತೆ ಕೋರಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಕರಾವಳಿ ಭದ್ರತಾ ಪೊಲೀಸ್ ಘಟಕದ ಅಧೀಕ್ಷಕರಿಗೆ ಲೀಗಲ್ ನೋಟಿಸ್ ಜಾರಿ ಮಾಡಿದರೂ ಪ್ರಯೋಜನವಾಗಿಲ್ಲ. ಆಧ್ದರಿಂದ ವಾರ್ಷಿಕ ಶೆ.12 ಬಡ್ಡಿ ದರದಲ್ಲಿ ಒಂದು ಕೋಟಿ ರು. ಮತ್ತು ಮಾನಸಿಕ ಕಿರುಕುಳ ಅನುಭವಿಸಿರುವುದಕ್ಕೆ 5 ಲಕ್ಷ ರು. ಪರಿಹಾರ ಕೊಡಲು ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಪೂರ್ಣಿಮಾ ಆಯೋಗವನ್ನು ಕೋರಿದ್ದಾರೆ.

click me!