
ಬೆಂಗಳೂರು(ಏ. 11): ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದ ಆರೋಪಿಗಳು ಈ ಹಿಂದೆ ಬಲಪಂಥೀಯ ಪತ್ರಕರ್ತರು, ಪತ್ರಿಕೋದ್ಯಮಿಗಳ ಹತ್ಯೆಗೆ ಸಂಚು ರೂಪಿಸಿರುವ ಸಂಗತಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಪ್ರತಾಪ್ ಸಿಂಹ, ವಿಶ್ವೇಶ್ವರ ಭಟ್, ವಿಜಯಸಂಕೇಶ್ವರ ಸೇರಿದಂತೆ ಐವರ ಮೇಲೆ ದಾಳಿ ಎಸಗಲು ಈ ಆರೋಪಿಗಳು ಯೋಜಿಸಿದ್ದರೆನ್ನಲಾಗಿದೆ. ಈ ಸಂಬಂಧ ಎನ್'ಐಎ ಅಧಿಕಾರಿಗಳು ಸದ್ಯದಲ್ಲೇ ಕೋರ್ಟ್'ನಲ್ಲಿ ಚಾರ್ಜ್'ಶೀಟ್ ಸಲ್ಲಿಸಲಿದ್ದಾರೆ.
ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾದ ಇರ್ಫಾನ್, ವಾಸೀಮ್, ನಜರ್ ಮುಸಿಬುಲ್ಲಾ, ಅಸೀಫ್ ಷರೀಫ್ ಅವರು ಬಂಧಿತರಾಗಿದ್ದಾರೆ. ಈ ಆರೋಪಿಗಳು ಇಂಡಿಯನ್ ಮುಜಾಹಿದೀನ್ ಮತ್ತು ಅಲ್ ಉಮ್ಮಾ ಮೊದಲಾದ ಉಗ್ರ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವುದೂ ತನಿಖೆ ವೇಳೆ ತಿಳಿದುಬಂದಿದೆ. ಪ್ರಮುಖ ಆರೋಪಿ ಅಸೀಫ್ ಷರೀಫ್ ಎಸ್'ಡಿಪಿಐ ಸಂಘಟನೆಯ ಅಧ್ಯಕ್ಷ ಕೂಡ ಹೌದು. ಅಲ್ಲದೆ, ಈ ಆರೋಪಿಗಳು ಬೆಂಗಳೂರು, ಮಂಗಳೂರು ಮತ್ತು ಕೇರಳದಲ್ಲಿ 6ಕ್ಕೂ ಹೆಚ್ಚು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ಇದೆ.
ಇದೀಗ ಸಂಸದರಾಗಿರುವ ಪ್ರತಾಪ್ ಸಿಂಹ ಅವರು ಈ ಮೊದಲು ವಿಜಯಕರ್ನಾಟಕ ಮತ್ತು ಕನ್ನಡಪ್ರಭದಲ್ಲಿ ಪ್ರಮುಖ ಅಂಕಣಕಾರರಾಗಿ ಬಲಪಂಥೀಯ ವಿಚಾರಗಳನ್ನು ಪ್ರಸ್ತುತಪಡಿಸುತ್ತಿದ್ದರು. ವಿಶ್ವೇಶ್ವರಭಟ್ ಕೂಡ ಬಲಪಂಥೀಯ ವಿಚಾರಧಾರೆಯ ಪತ್ರಕರ್ತರಾಗಿದ್ದಾರೆ.
ಇನ್ನು, ರುದ್ರೇಶ್ ಹತ್ಯೆ ಪ್ರಕರಣವು ಕರ್ನಾಟಕದ ಪೊಲೀಸರಿಂದ ಮತ್ತೊಮ್ಮೆ ಎನ್'ಐಎ ತನಿಖೆಗೆ ವರ್ಗವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.