ಹೈಸ್ಕೂಲ್, ಶಿಶು ವಿಹಾರಕ್ಕೂ ಆರ್’ಟಿಇ ಶಿಫಾರಸು ಸಾಧ್ಯತೆ

By Suvarna Web DeskFirst Published Jan 8, 2018, 10:47 AM IST
Highlights

ಈಗ ರಿಂದ 8ನೇ ತರಗತಿವರೆಗೆ ಸೀಮಿತವಾದ ಶೈಕ್ಷಣಿಕ ಹಕ್ಕನ್ನು (ಆರ್ ಟಿಇ) ಶಿಶುವಿಹಾರ ಹಾಗೂ ಹೈಸ್ಕೂಲ್‌ಗೂ ಜಾರಿಗೆ ತರುವಂತೆ ಕೇಂದ್ರೀಯ ಶೈಕ್ಷಣಿಕ ಸಲಹಾ ಮಂಡಳಿಯ ಉಪಸಮಿತಿಯು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಸಾಧ್ಯತೆ ಇದೆ.

ನವದೆಹಲಿ (ಜ.08): ಈಗ ರಿಂದ 8ನೇ ತರಗತಿವರೆಗೆ ಸೀಮಿತವಾದ ಶೈಕ್ಷಣಿಕ ಹಕ್ಕನ್ನು (ಆರ್ ಟಿಇ) ಶಿಶುವಿಹಾರ ಹಾಗೂ ಹೈಸ್ಕೂಲ್‌ಗೂ ಜಾರಿಗೆ ತರುವಂತೆ ಕೇಂದ್ರೀಯ ಶೈಕ್ಷಣಿಕ ಸಲಹಾ ಮಂಡಳಿಯ ಉಪಸಮಿತಿಯು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಸಾಧ್ಯತೆ ಇದೆ.

ಮಂಡಳಿಯ ಉಪಸಮಿತಿ ಜ. 11ಕ್ಕೆ ಸಭೆ ಸೇರಿ ತನ್ನ ಶಿಫಾರಸು ವರದಿಗೆ ಅನುಮೋದನೆ ನೀಡುವ ನಿರೀಕ್ಷೆಯಿದೆ. ಬಳಿಕ ಜ. 11ರಂದು ಕೇಂದ್ರೀಯ ಶೈಕ್ಷಣಿಕ ಸಲಹಾ ಮಂಡಳಿಯು ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವಡೇಕರ್ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಲಿದೆ. ಇದರಲ್ಲಿ ಆರ್‌ಟಿಇನಲ್ಲಿ ತರಬೇಕಾದ ಬದಲಾವಣೆ ಬಗ್ಗೆ ಚರ್ಚೆ ನಡೆಯುವ ಸಂಭವವಿದೆ.

ಒಂದು ವೇಳೆ ಉಪಸಮಿತಿ ವರದಿಯನ್ನು ಸರ್ಕಾರ ಒಪ್ಪಿದರೆ ಶಿಶುವಿಹಾರ (ನರ್ಸರಿ) ಹಾಗೂ 9 ಮತ್ತು 10ನೇ ತರಗತಿಗೂ ಶೈಕ್ಷಣಿಕ ಹಕ್ಕು ಅನ್ವಯವಾಗಲಿದೆ. ರಾಜ್ಯಗಳ ಜತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಉಪಸಮಿತಿ ವರದಿಯ ಬಗ್ಗೆ ಇದೇ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

click me!