ಚರ್ಮಕ್ಕೆ ಈ ಚಳಿ ತಾಗಿದರೆ 30 ನಿಮಿಷದಲ್ಲಿ ಹೆಪ್ಪುಗಟ್ಟುತ್ತೆ

By Suvarna Web DeskFirst Published Jan 8, 2018, 10:35 AM IST
Highlights

ಅಮೆರಿಕವು ಈಗ ‘ಬಾಂಬ್ ಸೈಕ್ಲೋನ್’ ವೈಪರೀತ್ಯಕ್ಕೆ ತುತ್ತಾಗಿದೆ. ದೇಶದ ಪೂರ್ವ ಕರಾವಳಿಯಲ್ಲಿ ಹಿಮ ಮಾರುತ, ಕಂಡು ಕೇಳರಿಯದ ಹಿಮಪಾತ ಉಂಟಾಗಿದ್ದು, -42 ಡಿಗ್ರಿವರೆಗೂ ತಾಪಮಾನ ಕುಸಿದಿದೆ.

ನ್ಯೂಯಾರ್ಕ್(ಜ.08): ಅಮೆರಿಕವು ಈಗ ‘ಬಾಂಬ್ ಸೈಕ್ಲೋನ್’ ವೈಪರೀತ್ಯಕ್ಕೆ ತುತ್ತಾಗಿದೆ. ದೇಶದ ಪೂರ್ವ ಕರಾವಳಿಯಲ್ಲಿ ಹಿಮ ಮಾರುತ, ಕಂಡು ಕೇಳರಿಯದ ಹಿಮಪಾತ ಉಂಟಾಗಿದ್ದು, -42 ಡಿಗ್ರಿವರೆಗೂ ತಾಪಮಾನ ಕುಸಿದಿದೆ.

ಸತತ ಹಿಮಪಾತದ, ಶೀತ ಮಾರುತದಿಂದ ಗೋಚರತೆ ಕುಸಿದಿದೆ. ಇದರಿಂದ ರಸ್ತೆ, ರೈಲು ಹಾಗೂ ವಿಮಾನ ಸಂಚಾರ ಬಾಧಿತವಾಗಿದೆ. ರಸ್ತೆಗಳು ಕಾಣದಂತಾಗಿ ಸಂಭವಿಸಿದ ವಾಹನ ಅಪಘಾತಗಳಿಂದ 18 ಮಂದಿ ಸಾವನ್ನಪ್ಪಿದ್ದಾರೆ.

ಶೀತ ಗಾಳಿ ಹಾಗೂ ಉಷ್ಣ ಗಾಳಿಯ ನಡುವೆ ಘರ್ಷಣೆ ಸಂಭವಿಸಿದಾಗ ಮಾರುತದ ವಾತಾವರಣ ಸೃಷ್ಟಿಯಾಗುತ್ತದೆ. ಒತ್ತಡವು 24 ತಾಸಿಗೆ 24 ಮಿಲಿಬಾರ್‌ನಷ್ಟು ಕನಿಷ್ಠಕ್ಕೆ ಕುಸಿತ ವಾದಾಗ ಇದಕ್ಕೆ ‘ಬಾಂಬ್ ಸೈಕ್ಲೋನ್’ ಎನ್ನುತ್ತಾರೆ. ಇದು ಅಮೆರಿಕದ ಪೂರ್ವ ಕರಾವಳಿಯಲ್ಲಿ ಹಿಮಮಿಶ್ರಿತ ಚಂಡಮಾರುತದ ಸೃಷ್ಟಿಗೆ ಕಾರಣವಾಗಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ಪರಿಣಾಮ ಏನು?

ಕನಿಷ್ಠ ತಾಪಮಾನ -42 ಡಿಗ್ರಿವರೆಗೂ ಕುಸಿದಿದ್ದು, ಚರ್ಮಕ್ಕೇನಾದರೂ ಈ ಚಳಿ ತಾಗಿದರೆ 30 ನಿಮಿಷದಲ್ಲಿ ಹೆಪ್ಪುಗಟ್ಟುತ್ತದೆ ಎಂದು ಜನರಿಗೆ ಎಚ್ಚರಿಕೆ ನೀಡಲಾಗಿದೆ.

click me!