‘ಆರ್‌ಎಸ್‌ಎಸ್‌ ಪ್ರತಿಕ್ರಿಯೆ ಹಿಂದೂಗಳ ಆತಂಕದ ಪ್ರತೀಕ’!

Published : Nov 03, 2018, 09:17 PM ISTUpdated : Nov 03, 2018, 09:18 PM IST
‘ಆರ್‌ಎಸ್‌ಎಸ್‌ ಪ್ರತಿಕ್ರಿಯೆ ಹಿಂದೂಗಳ ಆತಂಕದ ಪ್ರತೀಕ’!

ಸಾರಾಂಶ

ರಾಮ ಮಂದಿರ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್! ‘ಆರ್‌ಎಸ್‌ಎಸ್ ಪ್ರತಿಕ್ರಿಯೆ ಹಿಂದೂಗಳ ಆತಂಕದ ಪ್ರತೀಕ’! ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅಭಿಮತ! ‘ನ್ಯಾಯಾಂಗ 1992 ರ ವಿಳಂಬವನ್ನೇ ಪುನರಾವರ್ತನೆ ಮಾಡುತ್ತಿದೆ’! ‘ಆರ್‌ಎಸ್ಎಸ್ ನ ಪ್ರಶ್ನೆ ಹಿಂದೂಗಳ ಆತಂಕವನ್ನು ಅಭಿವ್ಯಕ್ತಗೊಳಿಸುತ್ತಿದೆ’

ನವದೆಹಲಿ(ನ.3): ರಾಮಮಂದಿರ ವಿವಾದದ ವಿಚಾರಣೆಯನ್ನು ಮುಂದೂಡಿರುವ ಸುಪ್ರೀಂ ಕೋರ್ಟ್ ನಿರ್ಧಾರಕ್ಕೆ ಹಲವು ಸಂಘಟನೆಗಳು ಬೇಸರ ವ್ಯಕ್ತಪಡಿಸಿದ್ದು, ಮಂದಿರ ನಿರ್ಮಾಣಕ್ಕೆ ಕಾನೂನು ಜಾರಿಗೊಳಿಸಬೇಕೆಂದು ಪಟ್ಟು ಹಿಡಿದಿವೆ.

ಈ ನಡುವೆ ಬಿಜೆಪಿ ಮುಖಂಡ ರಾಮ್ ಮಾಧವ್ ಆರ್‌ಎಸ್ಎಸ್ ಈ ವಿಚಾರವಾಗಿ ತೆಗೆದುಕೊಂಡಿರುವ ನಿಲುವಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನ್ಯಾಯಾಂಗ 1992 ರ ವಿಳಂಬವನ್ನೇ ಪುನರಾವರ್ತನೆ ಮಾಡುತ್ತಿದೆ. ನ್ಯಾಯಾಂಗದ ತೀರ್ಪಿಗೆ ಇನ್ನೆಷ್ಟು ವರ್ಷ ಕಾಯಬೇಕು ಎಂಬ ಆರ್‌ಎಸ್ಎಸ್ ಪ್ರಶ್ನೆ ಹಿಂದೂಗಳ ಆತಂಕವನ್ನು ಅಭಿವ್ಯಕ್ತಗೊಳಿಸುತ್ತಿದೆ ಎಂದು ಹೇಳಿದ್ದಾರೆ.

ರಾಮಮಂದಿರ ವಿಷಯಕ್ಕೆ ಸಂಬಂಧಿಸಿದಂತೆ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದ ಆರ್‌ಎಸ್ಎಸ್, ರಾಮಮಂದಿರ ನಿರ್ಮಾಣಕ್ಕಾಗಿ ಅಗತ್ಯವಿದ್ದರೆ ಚಳುವಳಿ ಪ್ರಾರಂಭಿಸುವುದಾಗಿಯೂ ಹೇಳಿತ್ತು. 

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ರಾಮ್ ಮಾಧವ್, ನ್ಯಾಯಾಂಗ 1992 ರಲ್ಲಿ ಯಾವ ರೀತಿಯಲ್ಲಿ ವಿಳಂಬವನ್ನೇ ಈಗಲೂ ಪುನರಾವರ್ತನೆ ಮಾಡುತ್ತಿದೆ, ಈ ಹಿನ್ನೆಲೆಯಲ್ಲಿ ಆರ್‌ಎಸ್ಎಸ್ ಹೇಳಿಕೆ ಹಿಂದೂಗಳ ಆತಂಕವನ್ನು ಅಭಿವ್ಯಕ್ತಿಗೊಳಿಸುವ ರೀತಿಯಲ್ಲಿದೆ ಎಂದಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಹಸ್ಯ ಡಿನ್ನರ್ ಮೀಟಿಂಗ್‌ನಲ್ಲಿ 'ಅಹಿಂದ' ಮಾಸ್ಟರ್ ಪ್ಲಾನ್! ಸಿಎಂ ಕುರ್ಚಿ ಉಳಿಸಿಕೊಳ್ಳಲು ಬೆಳಗಾವಿಯಲ್ಲಿ ಹೊಸ ರಣತಂತ್ರ?
India News Live: ಅಣುವಲಯ ಇನ್ನು ಖಾಸಗಿಗೂ ಮುಕ್ತ : ‘ಶಾಂತಿ’ ಮಸೂದೆಗೆ ಅನುಮೋದನೆ