ಸರ್ದಾರ್ ಪಟೇಲ್ ಪ್ರತಿಮೆಯಂತೆ ಶ್ರೀರಾಮ ಪ್ರತಿಮೆ ನಿರ್ಮಾಣಕ್ಕೆ ಪ್ಲ್ಯಾನ್: ಎಲ್ಲಿ?

By Web DeskFirst Published Nov 3, 2018, 9:14 PM IST
Highlights

ಗುಜರಾತ್​ನಲ್ಲಿ ಭಾರತದ ಉಕ್ಕಿನ ಮನುಷ್ಯ ಸರದಾರ್ ವಲ್ಲಭಭಾಯಿ ಪಟೇಲ್  ಪ್ರತಿಮೆಯಂತೆ ಶ್ರೀರಾಮ ಪ್ರತಿಮೆ ನಿರ್ಮಾಣ ಮಾಡುವ ಪ್ಲ್ಯಾನ್ ಮಾಡಲಾಗಿದೆ: ಎಲ್ಲಿ? ಇಲ್ಲಿದೆ ಇದರ ಮಾಹಿತಿ.

ನವದೆಹಲಿ (ನ. 03): ವಿರೋಧ, ಪ್ರತಿರೋಧ, ಟೀಕೆಗಳ ನಡುವೆಯೂ ಕೇಂದ್ರ ಸರಕಾರವು ಗುಜರಾತ್​ನಲ್ಲಿ ಭಾರತದ ಉಕ್ಕಿನ ಮನುಷ್ಯ ಸರದಾರ್ ವಲ್ಲಭಭಾಯಿ ಪಟೇಲ್ ಅವರ ಬೃಹತ್ ಪ್ರತಿಮೆಯನ್ನ ಅನಾವರಣಗೊಳಿಸಿದೆ.

ಇದರ ಬೆನ್ನಲ್ಲೇ ಈಗ ಉತ್ತರ ಪ್ರದೇಶದಲ್ಲಿ ಶ್ರೀ ರಾಮನ ಪುತ್ಥಳಿಯನ್ನು ನಿರ್ಮಿಸಲು ಯೋಗಿ ಆದಿತ್ಯನಾಥ್ ಸರಕಾರ ಯೋಜಿಸಿದೆ. 

ಮಾಧ್ಯಮಗಳಿಗೆ ಸಿಕ್ಕಿರುವ ಮಾಹಿತಿಯಂತೆ ಸರಯೂ ನದಿ ದಂಡೆಯಲ್ಲಿ 100 ಮೀಟರ್​ಗೂ ಅಧಿಕ ಎತ್ತರದ ರಾಮನ ಪ್ರತಿಮೆ ನಿರ್ಮಾಣ ಮಾಡವ ಪ್ಲ್ಯಾನ್ ಇದೆ ಎಂದು ಹೇಳಲಾಗುತ್ತಿದೆ. 

ಅದರಲ್ಲೂ ಮುಖ್ಯವಾಗಿ ಶ್ರೀರಾಮನ ಪ್ರತಿಮೆಯನ್ನ ಅಯೊದ್ಯದಲ್ಲಿಯೇ ನಿರ್ಮಿಸಲು ಯೋಗಿ ಸರ್ಕಾರ ಪ್ಲ್ಯಾನ್ ಮಾಡಿದೆ ಎಂದು ಹೇಳಲಾಗುತ್ತಿದೆ.

click me!