ಮೋದಿ ಫಿಟ್‌ನೆಸ್ ವಿಡಿಯೋಕ್ಕೆ 35 ಲಕ್ಷ ರೂ. ಖರ್ಚು..ನಿಜಾನಾ?

First Published Jul 2, 2018, 9:28 PM IST
Highlights

ಪ್ರಧಾನಿ ನರೇಂದ್ರ ಮೋದಿ ಯೋಗ ದಿನದ ಶೂಟಿಂಗ್ ಗಾಗಿ 35 ಲಕ್ಷ ರೂ। ಖಾಲಿಯಾಯಿತೆ? ಹೀಗೊಂದು ಪ್ರಶ್ನೆ ಮೂಡಿದ್ದು ಅದಕ್ಕೆ ಕೇಂದ್ರ ಸರಕಾರದಿಂದ ಅಧಿಕೃತ ಉತ್ತರವೂ ಬಂದಿದೆ. ಹಾಗಾದರೆ ಮೋದಿ ಫಿಟ್ ನೆಸ್ ವಿಚಾರದಲ್ಲಿ ಏನಿದು ಬಿಜೆಪಿ-ಕಾಂಗ್ರೆಸ್ ಕಿತ್ತಾಟ?

ನವದೆಹಲಿ[ಜು.2]  ಯೋಗ ದಿನಕ್ಕೂ ಮುನ್ನ ಉದ್ಯಾನವನವೊಂದರಲ್ಲಿ ಪ್ರಧಾನಿ ಮೋದಿ ಯೋಗಾಭ್ಯಾಸ ಮಾಡುವ ವಿಡಿಯೋವೊಂದನ್ನು ತಮ್ಮ ಟ್ವಿಟರ್ ಪೇಜ್ ಗೆ ಅಪ್ ಲೋಡ್ ಮಾಡಿದ್ದರು. ಈ ವಿಡಿಯೋ ವೈರಲ್  ಆಗಿತ್ತು. 

ಯೋಗ ದಿನಾಚರಣೆ ಜಾಹೀರಾತಿಗೆ ಕೇಂದ್ರ ಸರಕಾರ 20 ಕೋಟಿ ರೂ. ಖರ್ಚು ಮಾಡಿದ್ದರೆ, ಪ್ರಧಾನಿ ಫಿಟ್‌ನೆಸ್ ವೀಡಿಯೋಗೆ 35 ಲಕ್ಷ ರೂ. ವೆಚ್ಚಮಾಡಿದೆ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಆರೋಪ ಮಾಡಿದ್ದರು.

ಆದರೆ ಇದಕ್ಕೆ ಉತ್ತರ ನೀಡಿರುವ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್, ಪ್ರಧಾನಿ ಮೋದಿ ಫಿಟ್ ನೆಸ್ ವಿಡಿಯೋಕ್ಕೆ ಹಣ ವೆಚ್ಚ ಮಾಡಲಾಗಿಲ್ಲ. ವಿಡಿಯೋವನ್ನು ಅವರ ವಿಡಿಯೋಗ್ರಾಫರ್ ಚಿತ್ರೀಕರಣ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಮೋದಿ ಫಿಟ್ ನೆಸ್ ವಿಡಿಯೋ ವಿಚಾರ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಕಿತ್ತಾಟಕ್ಕೆ ಕಾರಣವಾಗಿದೆ.

20 crore rupees in ads for , 35 lambs for 's fitness video! Disgraceful. This government is all about smoke & mirrors. Hype is their substitute for hope -- the hopes they have destroyed.https://t.co/vmYZINkRD2

— Shashi Tharoor (@ShashiTharoor)

Not surprised Mr , falsehoods is ur substitute 4 facts

No money ws spent 4 PM’s fitness vid. It ws recorded by PMO videographer. This article is based on 'solid proof' of hearsay

And I assure you sir,not a single 'lamb' was sacrificed for the vid, let alone 35! 😃 https://t.co/xiC52ak7iw

— Rajyavardhan Rathore (@Ra_THORe)
click me!