
ನವದೆಹಲಿ/ಅಹಮದಾಬಾದ್(ಡಿ.3): ಕೇಂದ್ರ ಸರಕಾರದ ಆದಾಯ ಘೋಷಣೆ ಯೋಜನೆ - ಐಡಿಎಸ್ - ಅಡಿ, ಯೋಜನೆಯ ಕೊನೇ ದಿನವಾಗಿದ್ದ ಸೆ.30ರಂದು, 13,860 ಕೋಟಿ ರೂ.ಗಳ ಭಾರೀ ಪ್ರಮಾಣದ, ದಾಖಲೆಗಳಿಲ್ಲದ ಆದಾಯವನ್ನು ಘೋಷಿಸಿಕೊಂಡು ಕಳೆದ 10 ದಿನಗಳಿಂದ ನಾಪತ್ತೆಯಾಗಿದ್ದ ಅಹಮದಾಬಾದಿನ ಉದ್ಯಮಿ ಮಹೇಶ್ ಶಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಸಂದರ್ಶನ ನೀಡುವ ಸಲುವಾಗಿ ಸ್ಥಳೀಯ ಚಾನಲ್'ಗೆ ಆಗಮಿಸಿದ್ದಾಗ ಪೊಲೀಸರು ಹಾಗೂ ಐಟಿ ಅಧಿಕಾರಿಗಳು ಈತನನ್ನು ಬಂಧಿಸಿದರು.
'ಸಾವಿರಾರು ಕೋಟಿ ಹಣವು ಖ್ಯಾತ ರಾಜಕಾರಣಿಗಳು ಹಾಗೂ ಉದ್ಯಮಿಗಳದ್ದು, ಅವರ ಹೆಸರುಗಳನ್ನು ಐಟಿ ಅಧಿಕಾರಿಗಳ ಮುಂದೆ ಬಹಿರಂಗ ಪಡಿಸುವೆ. ನಾನು ಎಲ್ಲೂ ಓಡಿ ಹೋಗಲು ಯತ್ನಿಸುತ್ತಿಲಿಲ್ಲ. ಮಾಧ್ಯಮಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಈ ರೀತಿ ಮಾಡಿದೆ ಎಂದು ತಿಳಿಸಿದ್ದಾನೆ.
ಹಣ ಯಾರ್ಯಾರದ್ದು,ಎಲ್ಲಿಯದ್ದು ಎಂಬುದನ್ನು ಪರಿಪೂರ್ಣವಾಗಿ ತೆರೆದಿಡುತ್ತೇನೆ. ಅಂತಿಮವಾಗಿ ಸತ್ಯವೇ ಮೇಲುಗೈ ಸಾಧಿಸಲಿದೆ ಎಂದು ತಿಳಿಸಿದ್ದಾನೆ.
ಮುಂಬಯಿ ಹಾಗೂ ದೇಶದ ಇತರ ಭಾಗಗಳಲ್ಲಿ ಉದ್ಯಮ ನಡೆಸಿಕೊಂಡಿರುವ ಮಹೇಶ್ ಶಾ, 13,860 ಕೋಟಿ ರೂ.ಗಳ ತನ್ನ ಘೋಷಿತ ಕಾಳಧನದ ಮೇಲೆ ಸರಕಾರಕ್ಕೆ ನ.30ರಂದು ಮೊದಲ ಕಂತಿನ ತೆರಿಗೆಯಾಗಿ 975 ಕೋಟಿ ರೂ. ಗಳನ್ನು ಪಾವತಿಸಲು ವಿಫಲರಾಗಿದ್ದನು. ಆ ಕಾರಣಕ್ಕಾಗಿ ಶಾ ಘೋಷಿಸಿಕೊಂಡಿದ್ದ ಸಂಪೂರ್ಣ 13,860 ಕೋಟಿ ರೂ.ಗಳನ್ನು ಸರಕಾರ ಕಾಳಧನವೆಂದು ಪರಿಗಣಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.