ನೋಟು ನಿಷೇಧದ ಬಳಿಕ ಪ್ರಧಾನಿಯವರು ಮದ್ಯವನ್ನೂ ನಿಷೇಧಿಸಬೇಕು : ನಿತೀಶ್

By Suvarna Web DeskFirst Published Dec 3, 2016, 2:26 PM IST
Highlights

ಮೋದಿಯವರ ನೋಟು ಅಮಾನ್ಯ ಕ್ರಮವನ್ನು ಶ್ಲಾಘಿಸುತ್ತಾ, ಇದೇ ರೀತಿ ದೇಶಾದ್ಯಂತ ಮದ್ಯವನ್ನು ಕೂಡಾ ನಿಷೇಧಿಸಬೇಕು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

ನವದೆಹಲಿ (ಡಿ.03): ಮೋದಿಯವರ ನೋಟು ಅಮಾನ್ಯ ಕ್ರಮವನ್ನು ಶ್ಲಾಘಿಸುತ್ತಾ, ಇದೇ ರೀತಿ ದೇಶಾದ್ಯಂತ ಮದ್ಯವನ್ನು ಕೂಡಾ ನಿಷೇಧಿಸಬೇಕು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

ಮದ್ಯ ಉದ್ಯಮದಲ್ಲಿ ಅತೀ ಹೆಚ್ಚು ಭ್ರಷ್ಟಾಚಾರ ನಡೆಯುತ್ತದೆ. ಒಮ್ಮೆ ಮದ್ಯ ನಿಷೇಧ ಮಾಡಿದರೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದಂತೆ. ಕಪ್ಪುಹಣ ಸಂಗ್ರಹಕ್ಕೆ ಕಡಿವಾಣ ಹಾಕಿದಂತೆ. ಹಾಗಾಗಿ ಮದ್ಯ  

ನಿಷೇಧಕ್ಕೆ ಇದು ಸೂಕ್ತ ಸಮಯ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ಪ್ರಧಾನಿಯವರ ತವರು ಗುಜರಾತ್ ಹಾಗೂ ಬಿಹಾರದಲ್ಲಿ ಮದ್ಯ ನಿಷೇಧವಿದೆ. ಇಲ್ಲಿಯ ಮನೆಗಳನ್ನು ಸಂತೋಷ ಮನೆಮಾಡಿದೆ. ಇದೊಂದು ಉತ್ತಮ ಕ್ರಮ ಎಂದು ಮೋದಿಯವರಿಗೆ ಗೊತ್ತಿದೆ. ಮಹಾತ್ಮ ಗಾಂಧಿ ಸಹ

ಮದ್ಯ ಮುಕ್ತ ಸಮಾಜವನ್ನು ಬಯಸಿದ್ದರು ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

click me!