ರೋಹಿಣಿ Vs ಸರಕಾರ: ವರ್ಗಾವಣೆ ರದ್ದುಗೊಳಿಸಲು ಹೈ ಮೊರೆ ಹೋದ ಡಿಸಿ

By Suvarna Web DeskFirst Published Mar 24, 2018, 11:39 AM IST
Highlights

ಕಾಂಗ್ರೆಸ್ ರಾಜ್ಯ ಸರಕಾರ ಹಾಗೂ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ನಡುವಿನ ತಿಕ್ಕಾಟ ಮುಂದುವರಿಸಿದೆ. ಸಿಎಟಿ ಆದೇಶ ಪ್ರಶ್ನಿಸಿ ಇದೀಗ  ಹೈಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ.

ಬೆಂಗಳೂರು: ಕಾಂಗ್ರೆಸ್ ರಾಜ್ಯ ಸರಕಾರ ಹಾಗೂ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ನಡುವಿನ ತಿಕ್ಕಾಟ ಮುಂದುವರಿಸಿದೆ. ಸಿಎಟಿ ಆದೇಶ ಪ್ರಶ್ನಿಸಿ ಇದೀಗ  ಹೈಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ.

ಎರಡು ವರ್ಷ ಕಡ್ಡಾಯವಾಗಿ ಕಾರ್ಯನಿರ್ವಹಿಸಲು ಕಾನೂನಿದೆ, ಇದರಿಂದ ವರ್ಗಾವಣೆ ಆದೇಶ ರದ್ದು ಮಾಡ ಬೇಕೆಂದು ರೋಹಿಣಿ ಹೈ ಕೋರ್ಟ್ ಮೊರೆ ಹೋಗಿದ್ದಾರೆ. 

ರಾಜ್ಯ ಸರ್ಕಾರ ನಿಯಮ ಉಲ್ಲಂಘನೆ ಮಾಡಿದೆ. ಹಾಸನ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಬಯಲಿಗೆಳೆದಿರುವುದೇ ವರ್ಗಾವಣೆಗೆ ಕಾರಣ. ಹಾಸನ ರಾಜಕಾರಣಿಗಳ ಒತ್ತಡದಿಂದ ಈ ವರ್ಗಾವಣೆ ಮಾಡಲಾಗಿದೆ. CAT ಕೂಡ ನ್ಯಾಯ ಸಮ್ಮತವಾದ ತೀರ್ಪು ನೀಡಿಲ್ಲ. ಮತ್ತೆ ಸಿಎಸ್‌‌ಗೆ ಮನವಿ ಸಲ್ಲಿಸಲು ಸೂಚಿಸಿ ಅರ್ಜಿ ಇತ್ಯರ್ಥಪಡಿಸಿದೆ, ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಕೇಂದ್ರಿಯ ನ್ಯಾಯಮಂಡಳಿಯ ಕ್ರಮ ಸರಿಯಲ್ಲ. ಸರ್ಕಾರದ ಆದೇಶ ರದ್ದಿಗೆ ಹೈಕೋರ್ಟ್‌ನಲ್ಲಿ ರೋಹಿಣಿ ಮನವಿ ಸಲ್ಲಿಸಿದ್ದಾರೆ.
 

click me!