ಬೇಲೂರು ಶಾಸಕ ರುದ್ರೇಶ್ ಗೌಡ ಇನ್ನಿಲ್ಲ

By Suvarna Web DeskFirst Published Mar 24, 2018, 11:26 AM IST
Highlights

ಬೇಲೂರು ಶಾಸಕ ರುದ್ರೇಶ್ ಗೌಡ ಹೃದಯಾಘತದಿಂದ ವಿಧಿವಶರಾಗಿದ್ದಾರೆ.  

ಬೆಂಗಳೂರು (ಮಾ.24): ಬೇಲೂರು ಶಾಸಕ ರುದ್ರೇಶ್ ಗೌಡ ಹೃದಯಾಘತದಿಂದ ವಿಧಿವಶರಾಗಿದ್ದಾರೆ.  

ರಾಜ್ಯಸಭಾ  ಚುನಾವಣೆಗೆಂದು ಬೆಂಗಳೂರಿಗೆ ಬಂದಿದ್ದ ಶಾಸಕ ರುದ್ರೇಶ್  ಗೌಡರಿಗೆ ನಿನ್ನೆ ನಂದಿನಿ ಬಡಾವಣೆಯ ನಿವಾಸದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು . 24 ಗಂಟೆ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು.  ಎರಡು ಬಾರಿ ಬೇಲೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.  3-4 ವರ್ಷದ ಹಿಂದೆ ಅಂಗವೈಕಲ್ಯತೆಗೆ ಒಳಗಾಗಿದ್ದ ಇವರು, ವಿದೇಶದಲ್ಲೂ ಕೂಡ ಚಿಕಿತ್ಸೆ ಪಡೆದು ಬಂದಿದ್ದರು. 

ರುದ್ರೇಶ್  ಗೌಡರು ಪತ್ನಿ ಕೀರ್ತನ ಹಾಗೂ ಮಗಳನ್ನು ಅಗಲಿದ್ದಾರೆ. 

1982 ರಲ್ಲಿ ರುದ್ರೇಶ್  ಗೌಡರು ಜೆಡಿಎಸ್  ಸೇರ್ಪಡೆಗೊಂಡರು.  ಅಲ್ಲಿಂದ ರಾಜಕೀಯ ಆರಂಭಿಸಿದರು.  ಹೆಚ್ ಡಿ ದೇವೇಗೌಡರು 1985 ರಲ್ಲಿ ರುದ್ರೇಶ್ ಗೌಡರಿಗೆ ಜಿಲ್ಲಾ ಪಂಚಾಯ್ತಿ ಟಿಕೆಟ್ ನೀಡಿದರು.  ರಾಜಕೀಯ ಪ್ರವೇಶದ ನಂತರ ಮೊದಲ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಬೇಲೂರಿನಿಂದ ಸದಸ್ಯರಾಗಿ ಗೆಲುವು ಸಾಧಿಸಿದರು.  1985 ರಿಂದ 1996 ರವರೆಗೆ ಜಿಲ್ಲಾ ಪಂಚಾಯತ್’ನಲ್ಲಿದ್ದರು. ಅಧ್ಯಕ್ಷರಾಗಿದ್ದ ಸಮಯದಲ್ಲೇ  ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ರುದ್ರೇಶ್ ಗೌಡರಿಗೆ ಅವಕಾಶ ಸಿಕ್ಕಿತು.

ವೈ ಎನ್ ರುದ್ರೇಶ್  ಗೌಡರ ಮೇಲೆ ನಂಬಿಕೆ ಇಟ್ಟ ದೇವೇಗೌಡರು 1996 ರಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದರು. ಜಿಲ್ಲೆಯ ಜನರು ರುದ್ರೇಶ್ ಗೌಡರನ್ನು ಗೆಲ್ಲಿಸಿದರು. ಜನತಾ ದಳದ ಎಂಪಿಯಾಗಿ ರುದ್ರೇಶ್ ಗೌಡರು ಲೋಕಸಭೆ ಪ್ರವೇಶಿಸಿದರು. 1996 ರಿಂದ 1997 ರವರೆಗೆ ಎಂಪಿಯಾಗಿದ್ದರು. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ 2004 ರಲ್ಲಿ ಜೆಡಿಎಸ್ ತೊರೆದ ವೈಎನ್ ಆರ್ ,ಕಾಂಗ್ರೆಸ್ ಸೇರ್ಪಡೆ ಗೊಂಡರು. 2008 ರಲ್ಲಿ ಬೇಲೂರು ಕ್ಷೇತ್ರದಿಂದ ಕೈ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದರು.  2013 ರಲ್ಲೂ ಸಹ ಕೈ ಅಭ್ಯರ್ಥಿ ಯಾಗಿ ಮುಂದುವರಿದು ಸದ್ಯ ಬೇಲೂರು ಕ್ಷೇತ್ರದ ಶಾಸಕರಾಗಿದ್ದರು.

4 ವರ್ಷಗಳಿಂದ ಅಂಗಾಂಗ ವೈಫಲ್ಯದಿಂದ ಅನಾರೋಗ್ಯಕ್ಕೀಡಾಗಿದ್ದರು. ನಿನ್ನೆ ಬೆಂಗಳೂರಿನಲ್ಲಿ ಹೃದಯಾಘಾತ ಉಂಟಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.

click me!