ಜೇಮ್ಸ್ ಬಾಂಡ್ ಖ್ಯಾತಿಯ ನಟ ರೋಜರ್ ಮೋರೆ ನಿಧನ

By Suvarna Web DeskFirst Published May 23, 2017, 10:28 PM IST
Highlights

ಕ್ಯಾನ್ಸ್'ರ್'ನಿಂದ ಬಳಲುತ್ತಿದ್ದ ಅವರು  ಇಹಲೋಹ ತ್ಯಜಿಸಿದ್ದಾರೆ ಎಂದು ಅವರ ಟ್ವಿಟರ್ ಖಾತೆಯಲ್ಲಿ ಅವರ ಪತ್ರರು ಪ್ರಕಟಿಸಿದ್ದಾರೆ. ಬ್ರಿಟನ್'ನ ಸ್ಟಾಕ್'ವೆಲ್'ನಲ್ಲಿ 1927 ಅಕ್ಟೋಬರ್ 14ರಂದು ಜನಿಸಿದ್ದ ಇವರು 1973 ರಿಂದ 1985ರ ಅವಧಿಯಲ್ಲಿ ಬ್ರಿಟಿಷ್ ಸಿಕ್ರೇಟ್ ಏಜೆಂಟ್ ' ಜೇಮ್ಸ್ ಬಾಂಡ್' ಆಗಿ ಕಾಣಿಸಿಕೊಂಡು  ತಮ್ಮದೆ ಆದ ನಟನೆ ಹಾಗೂ ಸಂಭಾಷಣೆ ಮೂಲಕ ಖ್ಯಾತಿ ಗಳಿಸಿದ್ದರು. ಒಟ್ಟು 7 ಬಾರಿ ಜೇಮ್ಸ್ ಬಾಂಡ್ ಆಗಿ ನಟಿಸಿದ್ದಾರೆ.

ಹಾಲಿವುಡ್'ನ ಜೇಮ್ಸ್ ಬಾಂಡ್ ಖ್ಯಾತಿಯ ನಟ ರೋಜರ್ ಮೋರೆ (89) ಇಂದು ಸ್ವಟ್ಜ'ರ್'ಲ್ಯಾಂಡಿ'ನಲ್ಲಿ ನಿಧನರಾಗಿದ್ದಾರೆ.

ಕ್ಯಾನ್ಸ್'ರ್'ನಿಂದ ಬಳಲುತ್ತಿದ್ದ ಅವರು  ಇಹಲೋಹ ತ್ಯಜಿಸಿದ್ದಾರೆ ಎಂದು ಅವರ ಟ್ವಿಟರ್ ಖಾತೆಯಲ್ಲಿ ಅವರ ಪತ್ರರು ಪ್ರಕಟಿಸಿದ್ದಾರೆ. ಬ್ರಿಟನ್'ನ ಸ್ಟಾಕ್'ವೆಲ್'ನಲ್ಲಿ 1927 ಅಕ್ಟೋಬರ್ 14ರಂದು ಜನಿಸಿದ್ದ ಇವರು 1973 ರಿಂದ 1985ರ ಅವಧಿಯಲ್ಲಿ ಬ್ರಿಟಿಷ್ ಸಿಕ್ರೇಟ್ ಏಜೆಂಟ್ ' ಜೇಮ್ಸ್ ಬಾಂಡ್' ಆಗಿ ಕಾಣಿಸಿಕೊಂಡು  ತಮ್ಮದೆ ಆದ ನಟನೆ ಹಾಗೂ ಸಂಭಾಷಣೆ ಮೂಲಕ ಖ್ಯಾತಿ ಗಳಿಸಿದ್ದರು. ಒಟ್ಟು 7 ಬಾರಿ ಜೇಮ್ಸ್ ಬಾಂಡ್ ಆಗಿ ನಟಿಸಿದ್ದಾರೆ.

ದ ಸ್ಪೈ ಹೂ ಲವ್ಡ್ ಮಿ (1977), ಮೂನ್ ರೋಕರ್ (1979), ಫಾರ್ ಯುವರ್ ಅಯಿಸ್ ಓನ್ಲೀ (1981), ಅಕ್ಟೋಪಸಿ (1983), ಎ ವ್ಯೂ ಟು ಎ ಕಿಲ್ (1985 ) ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.  ಬ್ರಿಟಿಷ್ ಸರ್ಕಾರದ 'ಸರ್' ಪದವಿ  ಸೇರಿದಂತೆ ಹಲವು ಪ್ರಶಸ್ತಿಗಳು ಮೋರೆ ಅವರಿಗೆ ಲಭಿಸಿವೆ.

click me!