ಈ ಜನರ ಬದುಕಾಗಿದೆ ದುಸ್ತರ: ಶಾಸಕ ನಿಂಗಯ್ಯ, ಸಂಸದೆ ಶೋಭಾ ಮನಸ್ಸು ಕರಗುತ್ತಿಲ್ಲ ಯಾಕೆ?

Published : Oct 12, 2017, 09:07 AM ISTUpdated : Apr 11, 2018, 12:56 PM IST
ಈ ಜನರ ಬದುಕಾಗಿದೆ ದುಸ್ತರ: ಶಾಸಕ ನಿಂಗಯ್ಯ, ಸಂಸದೆ ಶೋಭಾ ಮನಸ್ಸು ಕರಗುತ್ತಿಲ್ಲ ಯಾಕೆ?

ಸಾರಾಂಶ

ಸುಮಾರು 40 ವರ್ಷದ ಹಿಂದೆ ಸರ್ಕಾರದಿಂದ ಜಮೀನು ಸಿಗುತ್ತಿದ್ದಂತೆ ಈ ಕುಟುಂಬದಲ್ಲಿ ಸಂಭ್ರಮವೇ ಸಂಭ್ರಮ. ಸರ್ಕಾರದಿಂದ ನೀಡಿರೋ ಕೊಂಚ ಜಮೀನಿನಲ್ಲಿ ಕಾಫಿ ತೋಟ ಅಡಿಕೆ ಬೆಳೆದು ಬದುಕು ಕಟ್ಟಿಕೊಂಡರು, ಆದರೆ ಅತ್ಯವಶ್ಯವಾಗಿ ಬೇಕಿರುವ ರಸ್ತೆ ಮಾತ್ರ ಇನ್ನೂ ಸಿಕ್ಕಿಲ್ಲ.

ಚಿಕ್ಕಮಗಳೂರು(ಅ.12): ಸುಮಾರು 40 ವರ್ಷದ ಹಿಂದೆ ಸರ್ಕಾರದಿಂದ ಜಮೀನು ಸಿಗುತ್ತಿದ್ದಂತೆ ಈ ಕುಟುಂಬದಲ್ಲಿ ಸಂಭ್ರಮವೇ ಸಂಭ್ರಮ. ಸರ್ಕಾರದಿಂದ ನೀಡಿರೋ ಕೊಂಚ ಜಮೀನಿನಲ್ಲಿ ಕಾಫಿ ತೋಟ ಅಡಿಕೆ ಬೆಳೆದು ಬದುಕು ಕಟ್ಟಿಕೊಂಡರು, ಆದರೆ ಅತ್ಯವಶ್ಯವಾಗಿ ಬೇಕಿರುವ ರಸ್ತೆ ಮಾತ್ರ ಇನ್ನೂ ಸಿಕ್ಕಿಲ್ಲ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ  ಅವಂತಿ ಗ್ರಾಮದ ಜನರ ದುಸ್ಥಿತಿಗೀಡಾಗಿದೆ. ಸರ್ಕಾರವೇ ಇವರಿಗೆ ಭೂಮಿ ಕೊಟ್ಟು 40 ವರ್ಷ ಕಳೆದ್ರೂ ಇನ್ನೂ ಇವರಿಗೆ ರಸ್ತೆ ಭಾಗ್ಯ ಮಾತ್ರ ಸಿಕ್ಕೇ ಇಲ್ಲ. ಹಾಗಾಗಿಯೇ ಇವರಿಗೆ ಭದ್ರಾ ನದಿಯಲ್ಲಿ ಜೀವವನ್ನ ಪಣಕ್ಕಿಟ್ಟು ನಿತ್ಯ ತೆಪ್ಪದಲ್ಲಿಯೇ ಓಡಾಡಬೇಕಾದ ದೌಭಾಗ್ಯ ಒದಗಿದೆ.

40 ವರ್ಷದ ಹಿಂದೆಯೇ ಆದಿವಾಸಿಗಳಿಗೆ ಸರ್ಕಾರ ಜಮೀನು ನೀಡಿದೆ. ಇಲ್ಲಿ  ಅವರು ಬದುಕು ಕಟ್ಟಿಕೊಳ್ಳಲು ಕಾಫಿ ತೋಟ , ಅಡಿಕೆ ತೋಟಗಳಲ್ಲಿ  ಕೃಷಿ ಮಾಡಿಕೊಂಡು ಬದುಕುತ್ತಿರೋ ಇವರಿಗೆ  ಭದ್ರಾ ನದಿಯ ತೆಪ್ಪವೇ ಗತಿ. ಮಕ್ಕಳು ಶಾಲೆಗೆ ಹೋಗೋಕೂ ಸಹ ನಿತ್ಯ ತೆಪ್ಪವನ್ನೇ ಅವಲಂಭಿಸುವಂತಾಗಿದೆ. ಆದ್ರೆ ನೀರಿನ ಹರಿವು ಹೆಚ್ಚಾದಾಗ ಮಾತ್ರ ಪಟ್ಟಣಕ್ಕೂ ಹೋಗುವಂತಿಲ್ಲ. ವಾರಗಟ್ಟಲೇ ಮಕ್ಕಳು ಶಾಲೆಗೂ ಹೋಗುವಂತಿಲ್ಲ.

ಇವರು ಇಷ್ಟು ಕಷ್ಟ ಪಡುತ್ತಿದ್ರೂ ಇವರ ನೋವಿಗೆ ಜನಪ್ರತಿನಿಧಿಗಳು ಮಾತ್ರ ಸ್ಪಂದಿಸುತ್ತಿಲ್ಲ ಒಟ್ಟಾರೆ ರಸ್ತೆಯಿಲ್ಲದೇ ನಿತ್ಯ ನರಕದಿಂದಲೇ ಬದುಕು ಸಾಗಿಸ್ತಾ ಇರೋ ಕುಟುಂಬಕ್ಕೆ ರಸ್ತೆ ಬೇಕಾಗಿದ್ದು, ಅಧಿಕಾರಿಗಳು ಮಾತ್ರ ಸರ್ಕಾರಿ ನಕ್ಷೆಯಲ್ಲಿ  ಇದ್ರೂ ರಸ್ತೆ ಕಲ್ಪಿಸುತ್ತಿಲ್ಲ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!