ರಾಜ್ಯದ ನೂತನ ಪೊಲೀಸ್ ಮುಖ್ಯಸ್ಥರಾಗಿ ಆರ್.ಕೆ.ದತ್ತಾ ನೇಮಕ

Published : Jan 27, 2017, 01:52 AM ISTUpdated : Apr 11, 2018, 01:04 PM IST
ರಾಜ್ಯದ ನೂತನ ಪೊಲೀಸ್ ಮುಖ್ಯಸ್ಥರಾಗಿ ಆರ್.ಕೆ.ದತ್ತಾ ನೇಮಕ

ಸಾರಾಂಶ

ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಓಂ ಪ್ರಕಾಶ್‌ ಅವರು ಜನವರಿ 31ಕ್ಕೆ ನಿವೃತ್ತಿ ಹೊಂದಲಿದ್ದಾರೆ.

ಬೆಂಗಳೂರು (ಜ. 27): ನಿರೀಕ್ಷೆಯಂತೆ ಕೇಂದ್ರ ಸೇವೆಯಲ್ಲಿರುವ ಕರ್ನಾಟಕ ಕೇಡರ್‌ನ ಹಿರಿಯ ಐಪಿಎಸ್‌ ಅಧಿಕಾರಿ ರೂಪಕ್‌ ಕುಮಾರ್‌ ದತ್ತಾ ಅವರನ್ನು ರಾಜ್ಯದ ನೂತನ ಪೊಲೀಸ್‌ ಮಹಾನಿರ್ದೇಶಕ (ಡಿಜಿಪಿ)ರಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರೂಪಕ್‌ ಕುಮಾರ್‌ ದತ್ತಾ ಆಯ್ಕೆಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಸಕ್ತಿ ವಹಿಸಿದ್ದರು. ಹಾಗಾಗಿ ಕೇಂದ್ರ ಸೇವೆಯಲ್ಲಿರುವ ದತ್ತಾ ಅವರನ್ನು ರಾಜ್ಯ ಸೇವೆಗೆ ಕಳುಹಿಸಿಕೊಡುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದರು ಎಂದು ಮೂಲಗಳು ತಿಳಿಸಿದ್ದವು. ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಓಂ ಪ್ರಕಾಶ್‌ ಅವರು ಜನವರಿ 31ಕ್ಕೆ ನಿವೃತ್ತಿ ಹೊಂದಲಿದ್ದಾರೆ.

ಆರ್.ಕೆ.ದತ್ತಾ ಯಾರು ?
ಉತ್ತರ ಪ್ರದೇಶದ ಕಾನ್ಪುರ ಮೂಲದ ಆರ್.ಕೆ.ದತ್ತಾ ಅವರು 1981  ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿದ್ದು, ಇದೇ ಅಕ್ಟೋಬರ್‌ನಲ್ಲಿ ನಿವೃತ್ತಿ ಹೊಂದಲಿದ್ದಾರೆ. ಓಂಪ್ರಕಾಶ್ ಅವರಿಗಿಂತ ಸೇವಾವಧಿಯಲ್ಲಿ ಹಿರಿಯರಾಗಿರುವ ಆರ್.ಕೆ.ದತ್ತಾ ಅವರನ್ನು ಈ ಹಿಂದೆಯೇ ಡಿಜಿ-ಐಜಿಪಿಯಾಗಿ ಆಯ್ಕೆ ಮಾಡಲು ಸರ್ಕಾರ ಉತ್ಸುಕವಾಗಿತ್ತು. ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಹಾಗಾಗಿ ಓಂಪ್ರಕಾಶ್ ಅವರು ಆಯ್ಕೆಯಾದರು.
ಕರ್ನಾಟಕ ಕೇಡರ್ ಅಧಿಕಾರಿಯಾಗಿರುವ ರೂಪಕ್ ಕುಮಾರ್ ದತ್ತಾ ಅವರು, ರಾಜ್ಯದ ಕಾರವಾರ, ದಾವಣಗೆರೆಯಲ್ಲಿ ಎಸ್ಪಿಯಾಗಿ, ಗುಪ್ತದಳ, ಭದ್ರತಾ, ಜಾಗೃತ ದಳದ ಡಿಐಜಿಯಾಗಿ ಹಾಗೂ ವಿವಿಧ ವಲಯಗಳ ಐಜಿಪಿಯಾಗಿ, ಲೋಕಾಯುಕ್ತ ಎಡಿಜಿಪಿಯಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಸಿಐಡಿ ಪೊಲೀಸ್ ಮಹಾನಿರ್ದೇಶಕಾಗಿ ಸೇವೆ ಸಲ್ಲಿಸಿದ್ದರು. ನಂತರ ಕೇಂದ್ರ ಸೇವೆಗೆ ತೆರಳಿದ ಅವರು ಹೈದ್ರಾಬಾದ್, ಚೆನ್ನೈ, ಪಾಟ್ನಾ ವಲಯದ ಸಿಬಿಐ ನಿರ್ದೇಶಕರಾಗಿ ಮೂರು ವರ್ಷಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಾಮರಾಜನಗರ: ಚಿನ್ನದ ಆಸೆಗೆ ಗುಡ್ಡವನ್ನೇ ಅಗೆದ ಕಿಡಿಗೇಡಿಗಳು!
India Latest News Live: ಪಂಜಾಬ್‌ನ 3 ಸ್ಥಳಗಳಿನ್ನು ಪವಿತ್ರ ನಗರಿ: ಮದ್ಯ, ಮಾಂಸ ಸೇಲ್‌ ನಿಷೇಧ