
ಕೊಚ್ಚಿ: ದೇಶಾದ್ಯಂತ ಜಾತ್ಯತೀತ ಮತಗಳನ್ನು ವಿಭಜಿಸಲು ಸಿಪಿಎಂನ ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಬಣ ಬಿಜೆಪಿಯಿಂದ 100 ಕೋಟಿ ರು. ಹಣ ಪಡೆದಿದೆ ಎಂದು ಸಿಪಿಎಂನ ಮಾಜಿ ಸಂಸದ ಎ.ಪಿ. ಅಬ್ದುಲ್ಲಾಕುಟ್ಟಿಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ನಾಯಕಿಯದ್ದು ಇದೆಂಥಾ ಹೇಳಿಕೆ?
ರಾಜಸ್ಥಾನ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಚಲಾವಣೆಯಾಗುತ್ತಿದ್ದ ಮತಗಳನ್ನು ವಿಭಜನೆ ಮಾಡಿ, ಬಿಜೆಪಿಗೆ ಅನುಕೂಲವನ್ನು ಸಿಪಿಎಂ ನಾಯಕರು ಮಾಡಿಕೊಟ್ಟಿದ್ದಾರೆ. ದೆಹಲಿಯಲ್ಲಿರುವ ನನ್ನ ಹಳೆಯ ಕಾಮ್ರೇಡ್ ಮಿತ್ರರು ಈ ಆಘಾತಕಾರಿ ವಿಷಯವನ್ನು ತಿಳಿಸಿದ್ದಾರೆ ಎಂದು ಕಣ್ಣೂರಿನ ಮಾಜಿ ಸಂಸದರಾಗಿರುವ ಕುಟ್ಟಿಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಲೋಕಸಭೆ ಚುನಾವಣೆ ಗೆಲ್ಲಲು ರೆಡಿಯಾಯ್ತು ಬಿಜೆಪಿ ಮಾಸ್ಟರ್ ಪ್ಲ್ಯಾನ್
ಜೆಪಿಗೆ ಅನುಕೂಲವಾಯಿತು. ಪಿಲಿಬಾಂಗಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಧರ್ಮೇಂದ್ರ ಕುಮಾರ್ ಅವರು ಕಾಂಗ್ರೆಸ್ ಅಭ್ಯರ್ಥಿಯನ್ನು 278 ಮತಗಳ ಅಂತರದಿಂದ ಮಣಿಸಿದ್ದಾರೆ. ಸಿಪಿಎಂ ಅಲ್ಲಿ 2659 ಮತಗಳನ್ನು ಪಡೆದಿದೆ. ಸಿಪಿಎಂ ಅಭ್ಯರ್ಥಿಗೇ ಠೇವಣಿಯೇ ಸಿಕ್ಕಿಲ್ಲ. ಆದರೆ ಬಿಜೆಪಿಗೆ ಅನುಕೂಲ ಮಾಡಿಕೊಟ್ಟಿದೆ. ತನ್ಮೂಲಕ ಕೋಟಿಗಟ್ಟಲೆ ಹಣ ಗಳಿಸಿದೆ ಎಂದು 2009ರಿಂದ ಕಾಂಗ್ರೆಸ್ಸಿನಲ್ಲಿರುವ ಅವರು ದೂರಿದ್ದಾರೆ.
ಸೋಲಿನ ಬೆನ್ನಲ್ಲೇ ಎಚ್ಚೆತ್ತ ಬಿಜೆಪಿ: ಶುರವಾಯ್ತು ಹೊಸ ಅಭಿಯಾನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ