ಭಾರತೀಯ ಅವಿವಾಹಿತೆಯರಲ್ಲಿ ಹೆಚ್ಚಿದೆ ಕಾಂಡೋಮ್ ಬಳಕೆ ಪ್ರಮಾಣ

By Suvarna Web DeskFirst Published Jan 29, 2018, 12:27 PM IST
Highlights

ಇಂದಿನ ದಿನಮಾನಗಳಲ್ಲಿ ಮಹಿಳೆಯರು ಹೆಚ್ಚು ಸುರಕ್ಷಿತ ಲೈಂಗಿಕ ಸಂಪರ್ಕ ಹೊಂದಲು ಬಯಸುತ್ತಿದ್ದಾರೆ. ಆದ್ದರಿಂದ ಭಾರತದ ಹೆಚ್ಚಿನ ಅವಿವಾಹಿತ ಮಹಿಳೆಯರು ಆಧುನಿಕ ಕಾಂಟ್ರಾಸೆಫ್ಟಿವ್ ಮೆಥೆಡ್ ಅನುಸರಿಸುತ್ತಿದ್ದಾರೆ, ಅದರಲ್ಲಿ ಕಾಂಡೋಮ್’ಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದಾರೆ.

ನವದೆಹಲಿ : ಇಂದಿನ ದಿನಮಾನಗಳಲ್ಲಿ ಮಹಿಳೆಯರು ಹೆಚ್ಚು ಸುರಕ್ಷಿತ ಲೈಂಗಿಕ ಸಂಪರ್ಕ ಹೊಂದಲು ಬಯಸುತ್ತಿದ್ದಾರೆ. ಆದ್ದರಿಂದ ಭಾರತದ ಹೆಚ್ಚಿನ ಅವಿವಾಹಿತ ಮಹಿಳೆಯರು ಆಧುನಿಕ ಕಾಂಟ್ರಾಸೆಫ್ಟಿವ್ ಮೆಥೆಡ್ ಅನುಸರಿಸುತ್ತಿದ್ದಾರೆ, ಅದರಲ್ಲಿ ಕಾಂಡೋಮ್’ಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದಾರೆ.

ಪ್ರತೀ ಬಾರಿ ಲೈಂಗಿಕ ಸಂಪರ್ಕವೂ ಕೂಡ ಹೆಚ್ಚು ಸುರಕ್ಷಿತವಾಗಿರಬೇಕು ಎಂದು ಬಯಸುತ್ತಾರೆ ಎನ್ನುವ ವಿಚಾರ ಸಮೀಕ್ಷೆ  ವೇಳೆ ಬಯಲಾಗಿದೆ. 2015-16ನೇ ಸಾಲಿನಲ್ಲಿ ರಾಷ್ಟ್ರೀಯ ಕೌಂಟುಂಬಿಕ ಆರೋಗ್ಯ ಸಮೀಕ್ಷೆಯನ್ನು ನಡೆಸಿದ ವೇಳೆ ಈ ಈ ಮಾಹಿತಿ ಲಭ್ಯವಾಗಿದೆ. ಆರೋಗ್ಯ ಸಚಿವಾಲಯ 20ರಿಂದ 24 ವರ್ಷ ವಯಸ್ಸಿನ ಅವಿವಾವಹಿತ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಸೆಕ್ಸ್ ವೇಳೆ ಕಾಂಡಮ್’ಗಳಿಗೆ ಪ್ರಾಶಸ್ತ್ಯ ನೀಡುತ್ತಾರಂತೆ.  ಅಲ್ಲದೇ ಅತ್ಯಧಿಕ ಸಂಖ್ಯೆಯ ಮಹಿಳೆಯರು ಸಾಂಪ್ರದಾಯಿಕ ವಿಧಾನಗಳನ್ನೇ ಅನುಸರಿಸುತ್ತಿದ್ದಾರೆ ಎನ್ನುವುದು ಕೂಡ ತಿಳಿದು ಬಂದಿದೆ.

ಆಧುನಿಕ  ವಿಧಾನಗಳಲ್ಲಿ ಕಾಂಡೋಮ್, ಮೇಲ್-ಫೀಮೇಲ್  ಸ್ಟೆರಿಲೈಸೇಶನ್, ಪಿಲ್, ಡಯಾಪ್ರಗಮ್ಸ್, ಇಂಟ್ರಾಟೆರೈನ್ ಡಿವೈಸ್ ಸೇರಿದಂತೆ ಅನೇಕ ವಿಧಾನಗಳಿವೆ. ಅಲ್ಲದೇ ಹೆಚ್ಚಿನ ಮಹಿಳೆಯರೇ ಇಂತಹ ವಿಧಾನಗಳನ್ನು ಅನುಸರಿಸುತ್ತಾರೆ. ಇದಕ್ಕೆ ಕಾರಣ ಮಹಿಳೆಯರೇ ಇಂತಹ ವಿಧಾನಗಳನ್ನು ಅನುಸರಿಸಬೇಕು ಎನ್ನುವ ಮನೋಭಾವವನ್ನು ಪುರುಷರು ಹೊಂದಿದ್ದಾರೆ ಎನ್ನಲಾಗಿದೆ.

click me!