ಶ್ರೀದೇವಿ ಬಗ್ಗೆ ಅಭಿಮಾನಿಗಳಿಗೆ ಆರ್’ಜಿವಿ ಪೇಮಪತ್ರ; ನಿಜಕ್ಕೂ ಸುಖಿಯಾಗಿದ್ದಳಾ ಅತಿ ಲೋಕ ಸುಂದರಿ?

By Suvarna Web DeskFirst Published Mar 1, 2018, 9:50 AM IST
Highlights

ನಿಮ್ಮಂಥ ಲಕ್ಷಾಂತರ ಅಭಿಮಾನಿಗಳಂತೆ ನಾನು ಕೂಡ ಆಕೆಯನ್ನು ಅತ್ಯಂತ  ಸಾರ್ವಕಾಲಿಕ ಸುಂದರ ಮಹಿಳೆ ಎಂದು ನಂಬಿದ್ದೆ. ಆಕೆ ದೇಶದ ಅತಿದೊಡ್ಡ  ಸೂಪರ್ ಸ್ಟಾರ್ ಆಗಿದ್ದಳು. 20 ವರ್ಷ ಕಾಲ ಬೆಳ್ಳಿ ತೆರೆ ಆಳಿದ್ದಳು. ಆದರೆ ಇದು ಕಥೆಯ ಒಂದು ಭಾಗವಷ್ಟೇ. ಶ್ರೀದೇವಿಯ ನಿಧನದಿಂದ ಈಗ ನನಗೆ ಆಘಾತವಾಗಿದೆ. ಜೀವನ ಹಾಗೂ ಸಾವು ಎಂಬುದು ಎಷ್ಟು ಕ್ರೂರಿ, ನಿಗೂಢ ಹಾಗೂ ಅನಿಶ್ಚಿತತೆಯಿಂದ ಕೂಡಿದ್ದು ಎಂಬುದು ನನಗೆ ಪುನಃ ನೆನಪಾಗಿದೆ.

ನಿಮ್ಮಂಥ ಲಕ್ಷಾಂತರ ಅಭಿಮಾನಿಗಳಂತೆ ನಾನು ಕೂಡ ಆಕೆಯನ್ನು ಅತ್ಯಂತ  ಸಾರ್ವಕಾಲಿಕ ಸುಂದರ ಮಹಿಳೆ ಎಂದು ನಂಬಿದ್ದೆ. ಆಕೆ ದೇಶದ ಅತಿದೊಡ್ಡ  ಸೂಪರ್ ಸ್ಟಾರ್ ಆಗಿದ್ದಳು. 20 ವರ್ಷ ಕಾಲ ಬೆಳ್ಳಿ ತೆರೆ ಆಳಿದ್ದಳು. ಆದರೆ ಇದು ಕಥೆಯ ಒಂದು ಭಾಗವಷ್ಟೇ. ಶ್ರೀದೇವಿಯ ನಿಧನದಿಂದ ಈಗ ನನಗೆ ಆಘಾತವಾಗಿದೆ. ಜೀವನ ಹಾಗೂ ಸಾವು ಎಂಬುದು ಎಷ್ಟು ಕ್ರೂರಿ, ನಿಗೂಢ ಹಾಗೂ ಅನಿಶ್ಚಿತತೆಯಿಂದ ಕೂಡಿದ್ದು ಎಂಬುದು ನನಗೆ ಪುನಃ ನೆನಪಾಗಿದೆ.
ಆಕೆಯ ಸಾವಿನ ನಂತರ ಅನೇಕರು ಶ್ರೀದೇವಿಯ ಸಾಧನೆ ಕೊಂಡಾಡಿದ್ದಾರೆ. ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಆಕೆ ಎಷ್ಟು ಶ್ರೇಷ್ಠ ನಟಿ ಎಂದು ಬಣ್ಣಿಸತೊಡಗಿದ್ದಾರೆ. ಇದೆಲ್ಲಕ್ಕಿಂತ ನನಗೆ ಆಕೆ ನನಗೆ ಹೆಚ್ಚಿನವಳು. ಏಕೆಂದರೆ ಆಕೆಯ ಜತೆ ನಾನು ಕ್ಷಣಕ್ಷಣಂ ಹಾಗೂ ಗೋವಿಂದಾ ಗೋವಿಂದಾ ಚಿತ್ರಗಳಲ್ಲಿ ಕೆಲಸ ಮಾಡಿದೆ. ಹೇಗೆ ಸೆಲೆಬ್ರಿಟಿ ವ್ಯಕ್ತಿಯೊಬ್ಬರ ನೈಜ ಬದುಕು ತೆರೆಯ ಮೇಲಿನ ಬದುಕಿಗಿಂತ ಭಿನ್ನ ಎಂಬುದಕ್ಕೆ ಶ್ರೀದೇವಿಯೇ ಉತ್ತಮ ಉದಾಹರಣೆ. ಅನೇಕರ ಪ್ರಕಾರ, ಶ್ರೀದೇವಿಯ ಜೀವನ ಪರಿಪೂರ್ಣವಾಗಿತ್ತು. ಸುಂದರವಾದ ಮುಖ, ಉತ್ತಮ ಪ್ರತಿಭೆ, ಸುಖೀ ಕುಟುಂಬ, ಹೊರನೋಟಕ್ಕೆ ಎಲ್ಲವೂ ಚೆನ್ನಾಗಿ
ಕಾಣುತ್ತಿತ್ತು. ಆದರೆ ಒಳ ನೋಟ ದಿಂದ ಗಮನಿಸಿದಾಗ ಶ್ರೀದೇವಿಯ ಜೀವನ ಚೆನ್ನಾಗಿತ್ತೆ? ಖುಷಿಯಾದ ಜೀವನ ನಡೆಸಿದ್ದಳೆ? ನಾನು ಶ್ರೀದೇವಿಯನ್ನು ಬಹುಕಾಲದಿಂದ ಬಲ್ಲೆ. ತಂದೆಯ ಸಾವಿನವರೆಗೆ ಆಕೆ
ಆಗಸದಲ್ಲಿ ಹಾರಾಡುವ ಸ್ವತಂತ್ರ ಹಕ್ಕಿಯಾಗಿದ್ದಳು. ಆದರೆ ತಂದೆಯ ಸಾವಿನ ನಂತರ ಪಂಜರದೊಳಗಿನ ಹಕ್ಕಿಯಾದಳು. ಶ್ರೀದೇವಿಯ ತಾಯಿ ಮಗಳ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಕಾಳಜಿ ಪ್ರದರ್ಶಿಸಿ ಶ್ರೀದೇವಿಯನ್ನು ಪಂಜರದ ಹಕ್ಕಿ ಮಾಡಿದಳು.

ಅಂದು ನಟರಿಗೆ ಕಪ್ಪುಹಣವನ್ನು ನಗದು ರೂಪದಲ್ಲಿ  ಸಂಭಾವನೆಯಾಗಿ ನೀಡಲಾಗುತ್ತಿತ್ತು. ತೆರಿಗೆ ಇಲಾಖೆ ಭೀತಿ ಕಾರಣ ಶ್ರೀದೇವಿಯ ತಂದೆ ದುಡ್ಡನ್ನು ಸ್ನೇಹಿತರು ಹಾಗೂ ಬಂಧುಗಳಿಗೆ ಇಟ್ಟುಕೊಳ್ಳುವಂತೆ ಕೊಡುತ್ತಿದ್ದರು. ತಂದೆಯ ನಿಧನಾನಂತರ ಈ ಬಂಧುಗಳು ಹಾಗೂ ಸ್ನೇಹಿತರು  ದುಡ್ಡು ಮರಳಿಸದೇ ಕೈಎತ್ತಿದರು. ಈ ನಡುವೆ ತಾಯಿಯು ಅಕ್ರಮ ಆಸ್ತಿಗಳು, ಮತ್ತಿತರ ಕಡೆ ತಪ್ಪಾಗಿ ಶ್ರೀದೇವಿ ದುಡಿದ ದುಡ್ಡು ಹಾಕಿ ಹಾಳು ಮಾಡಿದಳು. ಈ ಎಲ್ಲ ತಪ್ಪುಗಳು ಶ್ರೀದೇವಿಯನ್ನು ದುಡ್ಡಿಲ್ಲದಂತೆ ಮಾಡಿದವು. ಇದೇ ವೇಳೆ ಬೋನಿ ಕಪೂರ್ ಶ್ರೀದೇವಿ ಜೀವನದಲ್ಲಿ ಬಂದರು. ಬೋನಿ ಅವರೇ ಸಾಕಷ್ಟು
ಸಾಲದಲ್ಲಿದ್ದರು. ಈ ಕಷ್ಟದಲ್ಲೂ ಶ್ರೀದೇವಿ ಪಾಲುದಾರಳಾಗಬೇಕಿತ್ತು. ತಾಯಿ ಮಾನಸಿಕ ರೋಗಿ: ಇಷ್ಟು ಕಷ್ಟಗಳ ನಡುವೆಯೇ ತಾಯಿ ಮಾನಸಿಕ ರೋಗಿಯಾದಳು. ತಾಯಿಗೆ ಮಿದುಳಿನ ಸರ್ಜರಿ ಸರಿಯಾಗದೇ ಇದ್ದುದೇ  ಇದಕ್ಕೆ ಕಾರಣವಾಗಿತ್ತು. ಸೋದರಿ ಸರಿತಾ ಅಕ್ಕಪಕ್ಕದ ಮನೆಯವನ ಜತೆ ಓಡಿ ಹೋಗಿ ಮದುವೆಯಾದಳು. ಶ್ರೀದೇವಿ ವಿರುದ್ಧವೇ ಈಕೆಯು, ಅಸ್ವಸ್ಥ ತಾಯಿಯ ಹೆಸರಲ್ಲಿನ ಆಸ್ತಿ ಕಬಳಿಸಿದ್ದಾಳೆ ಎಂದು ಕೇಸು ಜಡಿದಿದ್ದಳು. ಇನ್ನು ಬೋನಿ ಕಪೂರ್‌ಳ ತಾಯಿಯು ಶ್ರೀದೇವಿಯನ್ನು ಮನೆಮುರುಕಿಯಂತೆ  ಕಂಡಳು. ಬೋನಿ ತಾಯಿಯು ಫೈವ್‌ಸ್ಟಾರ್ ಹೋಟೆಲ್ ಒಂದರಲ್ಲಿ ಶ್ರೀದೇವಿಯ ಹೊಟ್ಟೆಗೆ ಗುದ್ದಿ ಹಲ್ಲೆ ನಡೆಸಿದ್ದಳು. ‘ಇಂಗ್ಲಿಷ್ ವಿಂಗ್ಲಿಷ್’ ಸಿನಿಮಾದ ಅವಧಿಯನ್ನು ಬಿಟ್ಟರೆ ಶ್ರೀದೇವಿಗೆ ಉಳಿದ ದಿವಸಗಳು ಸಂಕಷ್ಟದ ಘಳಿಗೆಯಾಗಿದ್ದವು. ಅನಿಶ್ಚಿತತೆಗಳು, ಜೀವನದ ಆಕಸ್ಮಿಕ ತಿರುವುಗಳು, ಭವಿಷ್ಯದ ಆತಂಕ  ಆಕೆಯನ್ನು ಅಧೀರಳನ್ನಾಗಿ ಮಾಡಿದ್ದವು. ಆದರೆ, ವಯಸ್ಸಾಗುವುದು ಎಂದರೆ ಶ್ರೀದೇವಿ ಅಂಜುತ್ತಿದ್ದಳು. ಅನೇಕ ವರ್ಷಗಳಿಂದ ಆಕೆ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಳ್ಳುತ್ತಿದ್ದಳು. ನಾನು ಹೀಗೆಯೇ ಬರೆಯುತ್ತ ಹೋಗಬಹುದು. ಕಣ್ಣೀರು ಹರಿವುದನ್ನು  ತಡೆಯಲಾಗದು.
 

click me!