ಸಿಬಿಐ ತನಿಖೆಗೆ ಬರಲ್ಲ ಎಂದ ನೀರವ್ ಮೋದಿ

Published : Mar 01, 2018, 09:01 AM ISTUpdated : Apr 11, 2018, 12:41 PM IST
ಸಿಬಿಐ ತನಿಖೆಗೆ ಬರಲ್ಲ ಎಂದ ನೀರವ್ ಮೋದಿ

ಸಾರಾಂಶ

ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿ, ಸಿಬಿಐ ತನಿಖೆಗೆ ಹಾಜರಾಗಲು ನಿರಾಕರಿಸಿದ್ದಾರೆ. ತನಿಖೆಗೆ ಹಾಜರಾಗುವಂತೆ ನಿರ್ದೇಶಿಸಿ ನೀರವ್ ಮೋದಿಯ ಅಧಿಕೃತ ಇ-ಮೇಲ್ ಐಡಿಗೆ, ಸಿಬಿಐ ಇ-ಮೇಲ್ ರವಾನಿಸಿತ್ತು. ಅದಕ್ಕೆ ಪ್ರತಿಕ್ರಿಯಿಸಿರುವ ಮೋದಿ, ತಾನು ಯಾವುದೇ  ತಪ್ಪು ಮಾಡಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ನವದೆಹಲಿ (ಮಾ. 01): ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿ, ಸಿಬಿಐ ತನಿಖೆಗೆ ಹಾಜರಾಗಲು ನಿರಾಕರಿಸಿದ್ದಾರೆ. ತನಿಖೆಗೆ ಹಾಜರಾಗುವಂತೆ ನಿರ್ದೇಶಿಸಿ ನೀರವ್ ಮೋದಿಯ ಅಧಿಕೃತ ಇ-ಮೇಲ್ ಐಡಿಗೆ, ಸಿಬಿಐ ಇ-ಮೇಲ್ ರವಾನಿಸಿತ್ತು. ಅದಕ್ಕೆ ಪ್ರತಿಕ್ರಿಯಿಸಿರುವ ಮೋದಿ, ತಾನು ಯಾವುದೇ  ತಪ್ಪು ಮಾಡಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಅಲ್ಲದೆ, ಉದ್ಯಮ ಪ್ರವಾಸಕ್ಕಾಗಿ ವಿದೇಶದಲ್ಲಿರುವುದರಿಂದ, ತನಿಖೆಗೆ ಹಾಜರಾಗಲು  ಸಾಧ್ಯವಿಲ್ಲ ಎಂದೂ ತಿಳಿಸಿದ್ದಾರೆ. ಅದಕ್ಕೆ ಸಿಬಿಐ ಮತ್ತೊಂದು ಇ-ಮೇಲ್ ರವಾನಿಸಿದ್ದು, ತಕ್ಷಣವೇ ಭಾರತದ ರಾಯಭಾರಿ ಕಚೇರಿ
ಯನ್ನು ಭೇಟಿಯಾಗುವಂತೆ ಸೂಚಿಸಿದೆ. ಮುಂದಿನ ವಾರ ಕಡ್ಡಾಯವಾಗಿ ತನಿಖೆಗೆ ಹಾಜರಾಗಬೇಕು. ಇದು ಅನಿವಾರ್ಯ ಎಂದೂ ಅವರಿಗೆ ಸಿಬಿಐ ತಿಳಿಸಿದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಮಿಳುನಾಡಿನಲ್ಲಿ ದಳಪತಿಯೇ ಅಧಿಪತಿ? ಟಿವಿಕೆ ಪಕ್ಷವೇ ಕಿಂಗ್! ಅಧಿಕಾರ ಗದ್ದುಗೆಗೆ ಮ್ಯಾಜಿಕ್ ನಂಬರ್ ಎಷ್ಟು ಬೇಕು?
Election 2026: ದಳಪತಿ ವಿಜಯ್‌, ಮಮತಾ ಬ್ಯಾನರ್ಜಿ, ಪಳನಿಸ್ವಾಮಿ, ಸ್ಟಾಲಿನ್‌ ಜಾತಕ ಹೇಗಿದೆ? ಯಾರು ಗೆಲ್ತಾರೆ?