ಇಂದು ಕನಸಿನ ಚರ್ಚ್'ಸ್ಟ್ರೀಟ್ ಲೋಕಾರ್ಪಣೆ

By Suvarna Web DeskFirst Published Mar 1, 2018, 9:01 AM IST
Highlights

ದೇಶದಲ್ಲೇ ಮೊದಲ ಬಾರಿಗೆ ಟೆಂಡರ್‌'ಶ್ಯೂರ್ ಮಾದರಿಯಲ್ಲಿ ವೈಟ್‌'ಟಾಪಿಂಗ್ ರಸ್ತೆಯಾಗಿ ಚರ್ಚ್‌ಸ್ಟ್ರೀಟ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ.

ಬೆಂಗಳೂರು(ಮಾ.01): ಓಕಳೀಪುರಂ ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆಯ ಮೊದಲ ಹಂತದ ಮೇಲು ಸೇತುವೆ, ನಗರದ ಪ್ರಮುಖ ವಾಣಿಜ್ಯ ಚಟುವಟಿಕೆ ಪ್ರದೇಶವಾದ ಚರ್ಚ್‌ಸ್ಟ್ರೀಟ್ ಸೇರಿದಂತೆ ನಗರದ ಪ್ರಮುಖ ನಾಲ್ಕು ಯೋಜನೆಗಳು ಇಂದು ಲೋಕಾರ್ಪಣೆಗೊಳ್ಳಲಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಈ ನಾಲ್ಕು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 9.30ಕ್ಕೆ ಓಕಳೀಪುರದ ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆಯ ಮೊದಲ ಹಂತದ ಮೇಲು ಸೇತುವೆಯನ್ನು ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ. ನಂತರ, 10 ಗಂಟೆಗೆ ಫ್ರೀಡಂ ಪಾರ್ಕ್ ಬಳಿ ನಿರ್ಮಿಸಲಾಗಿರುವ ಬಹುಮಹಡಿ ಪಾರ್ಕಿಂಗ್ ಕಟ್ಟಡ ಲೋಕಾರ್ಪಣೆ ಮಾಡುವರು. ಬಳಿಕ ಎಂಜಿ ರಸ್ತೆಯ ಪಾದಚಾರಿ ಮಾರ್ಗದ ಉದ್ಘಾಟನೆ ನಡೆಯಲಿದೆ. ಕೊನೆಯದಾಗಿ ಮುಖ್ಯಮಂತ್ರಿಗಳು ಚರ್ಚ್‌'ಸ್ಟ್ರೀಟ್ ಅನ್ನು ಸಂಚಾರಕ್ಕೆ ಮುಕ್ತಗೊಳಿಸುವರು.

ದೇಶದಲ್ಲೇ ಮೊದಲ ಬಾರಿಗೆ ಟೆಂಡರ್‌'ಶ್ಯೂರ್ ಮಾದರಿಯಲ್ಲಿ ವೈಟ್‌'ಟಾಪಿಂಗ್ ರಸ್ತೆಯಾಗಿ ಚರ್ಚ್‌ಸ್ಟ್ರೀಟ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ.

click me!