
ಬೆಂಗಳೂರು (ಏ.03): ಬ್ಲಾಕ್ ಅಂಡ್ ವೈಟ್ ದಂಧೆಯಲ್ಲಿ ಸಿಕ್ಕಿಬಿದ್ದ ಕಾಂಗ್ರೆಸ್ ಮುಖಂಡ ವೀರಣ್ಣ ಮತ್ತಿಕಟ್ಟಿ ಅಳಿಯ ಮತ್ತು ತಂಡದ ಡೀಲ್ ಕರಾಳ ಸತ್ಯ ಬಯಲಾಗಿದೆ. ಬಂಧಿಸಿ ಬೆಂಡೆತ್ತಿರೋ ಸಿಸಿಬಿ ಪೊಲೀಸರು ಕಪ್ಪು ಕುಳಗಳ ಕೋಟಿ ಕೋಟಿ ವ್ಯವಹಾರ ಜಾಡನ್ನ ಬೇಧಿಸಿದ್ದಾರೆ. ಆರೋಪಿಗಳು ಬಾಯ್ಬಿಟ್ಟ ಎಕ್ಸ್ಕ್ಲೂಸಿವ್ ಮಾಹಿತಿ ಇಲ್ಲಿದೆ.
ಕಾಂಗ್ರೆಸ್ ಮುಖಂಡ ವೀರಣ್ಣ ಮತ್ತಿಕಟ್ಟಿ ಅಳಿಯ ಪ್ರವೀಣ್ ಕುಮಾರ್ ಹಾಗೂ 13 ಮಂದಿ ರಿಯಲ್ ಎಸ್ಟೇಟ್ ಏಜೆಂಟ್ಗಳ ಕಪ್ಪು ದಂಧೆಯ ಮೂಲವನ್ನು ಸಿಸಿಬಿ ಭೇದಿಸಿದ್ದಾರೆ. 10 ಕೋಟಿ ಕ್ಯಾಸ್ ಸಮೇತ ಸಿಕ್ಕಿಬಿದ್ದ ಖದೀಮರು ಬಿಚ್ಚಿಟ್ಟ ಮಾಹಿತಿ ಪೊಲೀಸರನ್ನೇ ಬೆಚ್ಚಿ ಬೀಳಿಸಿವೆ..
ಇದೊಂದು ಅತಿಯಾಸೆ ಗತಿಗೇಡು ಪ್ರಕರಣ. ಹಣ ಬದಲಾವಣೆ ಕೊನೆಯ ಅವಧಿಯಲ್ಲಿ ಕಡಿಮೆ ಕಮಿಷನ್ ಗೆ ಬದಲಾವಣೆ ಮಾಡಬಹುದು ಎಂದು ಆರೋಪಿಗಳು ಕಾಯುತ್ತಿದ್ದರು. ಕೊನೆ ಗಳಿಗೆವರೆಗೂ ಕೆಲ ಆರ್ ಬಿಐಗೆ ಸಂಪರ್ಕ ಮಾಡಿದ್ರು. ಪ್ರವೀಣ್ ಕುಮಾರ್ ಸಂಪೂರ್ಣ ದಂಧೆಯ ಜವಾಬ್ದಾರಿ ನಿರ್ವಹಿಸುತ್ತಿದ್ದ. ಆರೋಪಿಗಳ ಫೋನ್ ಟ್ಯಾಪ್ ಮೂಲಕ ಪೊಲೀಸರು ಜಾಡು ಹಿಡಿದಿದ್ದರು.
ಎಂಎಲ್ಸಿ ಮತ್ತಿಕಟ್ಟಿಗೂ ದಂಧೆಕೋರರಿಗೂ ಮೇಲ್ನೋಟಕ್ಕೆ ಸಂಬಂಧವಿದ್ದಂತೆ ಕಾಣುತ್ತಿಲ್ಲ. ಅಳಿಯ ಮಾಡುತ್ತಿದ್ದ ಈ ಕೆಲಸಗಳು ಮತ್ತಿಕಟ್ಟಿಗೆ ಗೊತ್ತಿರಲಿಲ್ಲವಂತೆ. ಅಳಿಯನ ಮೇಲೆ ಕೇಸ್ ದಾಖಲಾಗುತ್ತಿದೆ ಎಂದು ತಿಳಿದಾಗ ಪೊಲೀಸರಿಗೆ ಹಾಗು ಗೃಹ ಸಚಿವರಿಗೆ ಕರೆ ಅಳಿಯನನ್ನು ಬಿಡುವಂತೆ ಮತ್ತಿಕಟ್ಟಿ ಮನವಿ ಮಾಡಿದ್ದರು ಎನ್ನಲಾಗಿದೆ. ಬಂಧಿತರು ಈ ಹಿಂದೆ ಬ್ಯಾಂಕ್ ಮ್ಯಾನೆಜರ್ಗಳ ಮೂಲಕ ದಂಧೆ ಮಾಡಿದ್ದಾರೆ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ತನಿಖೆ ವೇಳೆ ಪೊಲೀಸರ ಬಳಿ ಅರೋಪಿಗಳ ತಪ್ಪೊಪ್ಪಿಗೆ ನೀಡಿದ್ದಾರೆ. ಅರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಸಿಸಿಬಿ ಅಧಿಕಾರಿಗಳು ಜೈಲಿಗೆ ತೆರಳಿ ವಿಚಾರಣೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.