
ನವದೆಹಲಿ(ಏ. 03): ಬೆಂಗಳೂರಿನ ಪ್ರತಿಷ್ಠಿತ ಇಂಡಿಯನ್ ಇನ್ಸ್'ಟಿಟ್ಯೂಟ್ ಆಫ್ ಸೈನ್ಸ್ ಶಿಕ್ಷಣ ಸಂಸ್ಥೆಯು ದೇಶದ ನಂಬರ್ ಒನ್ ಯೂನಿವರ್ಸಿಟಿ ಎಂಬ ಹೆಗ್ಗಳಿಗೆ ಪಡೆದಿದೆ. ಇಂದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಬಿಡುಗಡೆ ಮಾಡಿದ ನ್ಯಾಷನಲ್ ರ್ಯಾಂಕಿಂಗ್ ಫ್ರೇಮ್'ವರ್ಕ್ (ಎನ್'ಐಆರ್'ಎಫ್) ಶ್ರೇಯಾಂಕ ಪಟ್ಟಿಯಲ್ಲಿ ಬೆಂಗಳೂರಿನ ಶಿಕ್ಷಣ ಸಂಸ್ಥೆ ಅಗ್ರಸ್ಥಾನ ಪಡೆದಿದೆ. ಬೆಂಗಳೂರಿನ ಜೆಎನ್ ಸೆಂಟರ್ ಫಾರ್ ಅಡ್ವಾನ್'ಸ್ಡ್ ರೀಸರ್ಚ್ ಸಂಸ್ಥೆ ನಾಲ್ಕನೇ ಸ್ಥಾನದಲ್ಲಿರುವುದು ವಿಶೇಷ. ಆದರೆ, ಟಾಪ್ 10 ಪಟ್ಟಿಯಲ್ಲಿ ಇವೆರಡು ಬಿಟ್ಟರೆ ಕರ್ನಾಟಕದ ಬೇರಾವುದೇ ಶಿಕ್ಷಣ ಸಂಸ್ಥೆ ಸ್ಥಾನ ಪಡೆದಿಲ್ಲ. ಕಳೆದ ವರ್ಷದ ಟಾಪ್ 4 ಪಟ್ಟಿಯಲ್ಲಿ ಕರ್ನಾಟಕದ 3 ಶಿಕ್ಷಣ ಸಂಸ್ಥೆಗಳು ಸ್ಥಾನ ಗಿಟ್ಟಿಸಿದ್ದವು. ಐಐಎಸ್'ಸಿ, ಐಐಎಂ ಬೆಂಗಳೂರು ಮತ್ತು ಮಣಿಪಾಲ್ ಕಾಲೇಜ್ ಆಫ್ ಫಾರ್ಮಸ್ಯೂಟಿಕಲ್ ಸೈನ್ಸಸ್ ಸಂಸ್ಥೆಗಳು ಟಾಪ್ ಪಟ್ಟಿಯಲ್ಲಿದ್ದವು.
ದೇಶದ ಟಾಪ್ 10 ಮ್ಯಾನೇಜ್ಮೆಂಟ್ ಇನ್ಸ್'ಟಿಟ್ಯೂಟ್ಸ್ ಪೈಕಿ ಬೆಂಗಳೂರಿನ ಐಐಎಂ ಎರಡನೇ ಸ್ಥಾನ ಪಡೆದಿರುವುದು ಗಮನಾರ್ಹ. ಇನ್ನು, ದೆಹಲಿಯ ಮಿರಾಂಡಾ ಹೌಸ್ ದೇಶದ ನಂಬರ್ ಒನ್ ಕಾಲೇಜು ಎನಿಸಿದೆ. ದೆಹಲಿಯ 6 ಕಾಲೇಜುಗಳು ಟಾಪ್ 10 ಪಟ್ಟಿಯಲ್ಲಿವೆ. ತಮಿಳುನಾಡಿನ 3 ಕಾಲೇಜುಗಳು ಈ ಪಟ್ಟಿಯಲ್ಲಿವೆ.
ಟಾಪ್ 10 ಯೂನಿವರ್ಸಿಟಿಗಳು (ಒಟ್ಟಾರೆ ಸಾಮಾನ್ಯ ರ್ಯಾಂಕಿಂಗ್)
1) ಐಐಎಸ್'ಸಿ, ಬೆಂಗಳೂರು
2) ಐಐಟಿ, ಚೆನ್ನೈ
3) ಐಐಟಿ, ಬಾಂಬೆ
4) ಐಐಟಿ, ಖರಗ್'ಪುರ್
5) ಐಐಟಿ, ದೆಹಲಿ
6) ಜವಾಹರ್'ಲಾಲ್ ನೆಹರೂ ಯೂನಿವರ್ಸಿಟಿ, ದೆಹಲಿ
7) ಐಐಟಿ, ಕಾನಪುರ್
8) ಐಐಟಿ, ಗುವಾಹಟಿ
9) ಐಐಟಿ, ರೂರ್ಕೀ
10) ಬನಾರಸ್ ಹಿಂದೂ ಯೂನಿವರ್ಸಿಟಿ
ಟಾಪ್ 10 ಯೂನಿವರ್ಸಿಟಿ(100 ವಿವಿಗಳ ಪೈಕಿ)
1) ಐಐಎಸ್'ಸಿ, ಬೆಂಗಳೂರು
2) ಜೆಎನ್'ಯು, ದೆಹಲಿ
3) ಬನಾರಸ್ ಹಿಂದೂ ಯೂನಿವರ್ಸಿಟಿ, ವಾರಾಣಸಿ
4) ಜವಾಹರ್'ಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್'ಸ್ಡ್ ರೀಸರ್ಚ್, ಬೆಂಗಳೂರು
5) ಜಾದವಪುರ್ ಯೂನಿವರ್ಸಿಟಿ, ಕೋಲ್ಕತಾ
6) ಅಣ್ಣಾ ಯೂನಿವರ್ಸಿಟಿ, ಚೆನ್ನೈ
7) ಹೈದರಾಬಾದ್ ಯೂನಿವರ್ಸಿಟಿ, ತೆಲಂಗಾಣ
8) ದೆಹಲಿ ಯೂನಿವರ್ಸಿಟಿ
9) ಅಮೃತಾ ವಿಶ್ವ ವಿದ್ಯಾಪೀಠಂ, ಕೊಯಮತ್ತೂರು
10) ಸಾವಿತ್ರಿಬಾಯಿ ಫುಲೆ ಪುಣೆ ಯೂನಿವರ್ಸಿಟಿ, ಮಹಾರಾಷ್ಟ್ರ
ಟಾಪ್ 10 ಕಾಲೇಜುಗಳು
1) ಮಿರಾಂಡಾ ಹೌಸ್, ದೆಹಲಿ
2) ಲೊಯೋಲಾ ಕಾಲೇಜು, ಮದ್ರಾಸ್
3) ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್, ದೆಹಲಿ
4) ಬಿಷಪ್ ಹೆಬೆರ್ ಕಾಲೇಜು, ತಿರುಚಿರಾಪಳ್ಳಿ
5) ಆತ್ಮಾರಾಮ್ ಸನಾತನ್ ಧರ್ಮ ಕಾಲೇಜು, ದೆಹಲಿ
6) ಸೇಂಟ್ ಕ್ಸೇವಿಯರ್ಸ್ ಕಾಲೇಜು, ಕೋಲ್ಕತಾ
7) ಲೇಡಿ ಶ್ರೀರಾಮ್ ಮಹಿಳಾ ಕಾಲೇಜ್, ದೆಹಲಿ
8) ದಯಾಳ್ ಸಿಂಗ್ ಕಾಲೇಜು, ದೆಹಲಿ
9) ದೀನ್ ದಯಾಳ್ ಉಪಾಧ್ಯಾಯ ಕಾಲೇಜು, ದೆಹಲಿ
10) ವುಮೆನ್ಸ್ ಕ್ರಿಶ್ಚಿಯನ್ ಕಾಲೇಜು, ಮದ್ರಾಸ್
ಟಾಪ್ 10 ಎಂಜಿನಿಯರಿಂಗ್ ಇನ್ಸ್'ಟಿಟ್ಯೂಟ್ಸ್
1) ಐಐಟಿ, ಮದ್ರಾಸ್
2) ಐಐಟಿ, ಬಾಂಬೆ
3) ಐಐಟಿ, ಖರಗ್'ಪುರ್
4) ಐಐಟಿ, ದೆಹಲಿ
5) ಐಐಟಿ, ಕಾನಪುರ್
6) ಐಐಟಿ, ರೂರ್ಕೀ
7) ಐಐಟಿ, ಗುವಾಹಟಿ
8) ಅಣ್ಣಾ ಯೂನಿವರ್ಸಿಟಿ, ಚೆನ್ನೈ
9) ಜಾದವ್'ಪುರ್ ಯೂನಿವರ್ಸಿಟಿ, ಕೋಲ್ಕತಾ
10) ಐಐಟಿ, ಹೈದರಾಬಾದ್
ಟಾಪ್ 10 ಮ್ಯಾನೇಜ್ಮೆಂಟ್ ಇನ್ಸ್'ಟಿಟ್ಯೂಟ್ಸ್
1) ಐಐಎಂ, ಅಹ್ಮದಾಬಾದ್
2) ಐಐಎಂ, ಬೆಂಗಳೂರು
3) ಐಐಎಂ, ಕೋಲ್ಕತಾ
4) ಐಐಎಂ, ಲಕ್ನೋ
5) ಐಐಎಂ, ಕೋಳಿಕೋಡ್
6) ಐಐಟಿ, ದೆಹಲಿ
7) ಐಐಟಿ, ಖರಗ್'ಪುರ್
8) ಐಐಟಿ, ರೂರ್ಕೀ
9) ಜಮ್'ಶೆಡ್'ಪುರ್ ಲೇಬರ್ ರಿಲೇಶನ್ಸ್ ಇನ್ಸ್'ಟಿಟ್ಯೂಟ್, ಜಮ್'ಶೆಡ್'ಪುರ್
10) ಐಐಎಂ, ಇಂದೋರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.