ಕೊಳೆತ ಟೊಮ್ಯಾಟೊ, ಮೊಟ್ಟೆಯಿಂದ ಕಾರು ಟಯರ್ ಉತ್ಪಾದನೆ ಸಾಧ್ಯ!

By Suvarna Web DeskFirst Published Mar 8, 2017, 12:51 PM IST
Highlights

ಕೊಳೆತ ಟೊಮ್ಯಾಟೊ ಸಿಪ್ಪೆ ಮತ್ತು ಮೊಟ್ಟೆ ಚಿಪ್ಪುಗಳನ್ನು ಪರ್ಯಾಯ ರಬ್ಬರ್ ತಯಾರಿಯಲ್ಲಿ ಪೆಟ್ರೋಲಿಯಂ ಆಧಾರಿತ ಭರ್ತಿ ಸಾಧನವಾಗಿ ಬಳಸಿಕೊಳ್ಳಬಹುದು ಎಂಬುದನ್ನು ಪತ್ತೆ ಹಚ್ಚಲಾಗಿದೆ.

ನಮ್ಮಲ್ಲಿ ಯಾರಾದರೂ ಕೆಟ್ಟ ಕೆಲಸಗಳನ್ನು ಮಾಡಿದಾಗ, ಅವರನ್ನು ಅವಮಾನಿಸಲು ಕೊಳೆತ ಟೊಮ್ಯಾಟೊ ಮತ್ತು ಮೊಟ್ಟೆ ಎಸೆಯಬೇಕು ಎಂದು ಆಕ್ರೋಶ ವ್ಯಕ್ತವಾಗುತ್ತದೆ. ಕೆಲವೆಡೆಗಳಲ್ಲಿ ಅದು ನಡೆದೇ ಹೋಗುತ್ತದೆ. ಆದರೆ ಅಮೆರಿಕದ ವಿಜ್ಞಾನಿಗಳು ಕೊಳೆತ ಟೊಮ್ಯಾಟೊ ಸಿಪ್ಪೆ ಮತ್ತು ಮೊಟ್ಟೆ ಚಿಪ್ಪುಗಳನ್ನು ಬಳಸಿ ಟಯರ್ ಉತ್ಪಾದಿಸಬಹುದೆಂಬುದನ್ನು ಸಂಶೋಸಿದ್ದಾರೆ. ಕೊಳೆತ ಟೊಮ್ಯಾಟೊ ಸಿಪ್ಪೆ ಮತ್ತು ಮೊಟ್ಟೆ ಚಿಪ್ಪುಗಳನ್ನು ಪರ್ಯಾಯ ರಬ್ಬರ್ ತಯಾರಿಯಲ್ಲಿ ಪೆಟ್ರೋಲಿಯಂ ಆಧಾರಿತ ಭರ್ತಿ ಸಾಧನವಾಗಿ ಬಳಸಿಕೊಳ್ಳಬಹುದು ಎಂಬುದನ್ನು ಪತ್ತೆ ಹಚ್ಚಲಾಗಿದೆ. ಅಮೆರಿಕದ ಓಹಿಯೊ ವಿಶ್ವವಿದ್ಯಾಲಯದ ಸಂಶೋಧಕರು ಇದನ್ನು ಸಂಶೋಸಿದ್ದಾರೆ. ಟಯರ್ಗಳನ್ನು ಉತ್ಪಾದಿಸಲು ಬಳಸಲಾಗುವ ಪೆಟ್ರೋಲಿಯಂ ಆಧಾರಿತ ಭರ್ತಿ ಸಾಧನಗಳನ್ನು ಆಹಾರ ತ್ಯಾಜ್ಯಗಳಿಂದಲೂ ಉತ್ಪಾದಿಸಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

click me!