ರಿಪಬ್ಲಿಕ್ ಟಿವಿ - ಸಿ ವೋಟರ್ ಲೋಕಸಭೆಯ ಮಹಾಸಮೀಕ್ಷೆ : ಮತ್ತೇ ಮೋದಿಗೆ ಗೆಲುವು

By Web DeskFirst Published Oct 4, 2018, 10:18 PM IST
Highlights

ಮೋದಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟ 276 ಕ್ಷೇತ್ರಗಳಲ್ಲಿ ಜಯ ಸಾಧಿಸಿ ಮತ್ತೇ ಕೇಂದ್ರದಲ್ಲಿ ಅಧಿಕಾರ ಹಿಡಿದು ಪ್ರಧಾನಿಯಾಗುತ್ತಾರೆ ಎಂದು ಸಮೀಕ್ಷೆ ಹೇಳುತ್ತಿದೆ. ಇನ್ನೂ ಯುಪಿಎ ಮೈತ್ರಿಕೂಟ 112 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಪಕ್ಷೇತರರು 155 ಸ್ಥಾನಗಳಲ್ಲಿ ಗೆದ್ದು ಬೀಗಲಿದ್ದಾರೆ ಎನ್ನುತ್ತಿದೆ ವರದಿ. 

ನವದೆಹಲಿ[ಅ.04]: 2019ರ ಲೋಕಸಭೆ ಚುನಾವಣೆ ಕುರಿತು ಸಿ-ವೋಟರ್, ರಿಪಬ್ಲಿಕ್ ಟಿವಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದು, ಮತ್ತೊಂದು ಬಾರಿಗೆ ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ರಚನೆಯಾಗಲಿದೆ ಎಂದು ಭವಿಷ್ಯ ನುಡಿದಿವೆ.

ಮೋದಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟ 276 ಕ್ಷೇತ್ರಗಳಲ್ಲಿ ಜಯ ಸಾಧಿಸಿ ಮತ್ತೇ ಕೇಂದ್ರದಲ್ಲಿ ಅಧಿಕಾರ ಹಿಡಿದು ಪ್ರಧಾನಿಯಾಗುತ್ತಾರೆ ಎಂದು ಸಮೀಕ್ಷೆ ಹೇಳುತ್ತಿದೆ. ಇನ್ನೂ ಯುಪಿಎ ಮೈತ್ರಿಕೂಟ 112 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಪಕ್ಷೇತರರು 155 ಸ್ಥಾನಗಳಲ್ಲಿ ಗೆದ್ದು ಬೀಗಲಿದ್ದಾರೆ ಎನ್ನುತ್ತಿದೆ ವರದಿ. ಕೇಂದ್ರದಲ್ಲಿ ಮೋದಿಗಿರಿ ಕಟ್ಟಿ ಹಾಕಲು ಮಹಾಘಟಬಂಧನ ರಚನೆಯಾದರೂ ಯಾವುದೇ ಪ್ರಯೋಜನವಾಗುವುದಿಲ್ಲ ಅಂತಿದೆ ಸರ್ವೇ.

ಕರ್ನಾಟಕದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ
ಇನ್ನೂ ಕರ್ನಾಟಕದಲ್ಲಿ ಕಾಂಗ್ರೆಸ್ - ಜೆಡಿಎಸ್ ಸರ್ಕಾರವಿದ್ದರೂ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಮೋದಿ ಮೋಡಿ ಮುಂದುವರಿಯಲಿದೆ. 28 ಸ್ಥಾನಗಳಲ್ಲಿ ಬಿಜೆಪಿ ಕಳೆದ ಬಾರಿಗಿಂತ ಒಂದು ಸ್ಥಾನದಲ್ಲಿ ಹೆಚ್ಚು ಗೆಲ್ಲಲಿದೆ. ಅಂದರೆ 18 ಸ್ಥಾನಗಳಲ್ಲಿ ಬಿಜೆಪಿ ಪ್ರಭುತ್ವ ಸಾಧಿಸಲಿದೆ. ಕಾಂಗ್ರೆಸ್  7, ಜೆಡಿಎಸ್ 3 ಸ್ಥಾನಗಳಲ್ಲಿ ಗೆಲ್ಲಲ್ಲಷ್ಟೇ ಶಕ್ತವಾಗಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.
 

"

"

click me!