
ಬೆಂಗಳೂರು[ ಅ. 04] ಕೇಂದ್ರ ಸರ್ಕಾರ ಶಿವಮೊಗ್ಗ-ಬೆಂಗಳೂರು ಇಂಟರ್ ಸಿಟಿ ರೈಲನ್ನು ತಾಳಗುಪ್ಪದವರೆಗೆ ವಿಸ್ತರಿಸಿದೆ. ಶಿವಮೊಗ್ಗ ಸಂಸದರಾಗಿದ್ದ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಶಿವಮೊಗ್ಗ-ಬೆಂಗಳೂರು ಇಂಟರ್ ಸಿಟಿ ರೈಲನ್ನು ತಾಳಗುಪ್ಪವರೆಗೆ ವಿಸ್ತರಣೆ ಮಾಡಲು ರೈಲ್ವೆ ಸಚಿವರಿಗೆ ಮನವಿ ಮಾಡಿದ್ದರು. ಈಗ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿದ್ದು ಬಿಎಸ್ ವೈ ಸ್ವಾಗತ ಮಾಡಿದ್ದಾರೆ.
ಪ್ರಸ್ತುತ ಶಿವಮೊಗ್ಗ-ಬೆಂಗಳೂರು ನಡುವೆ ಚಲಿಸುತ್ತಿರುವ ಇಂಟರ್ ಸಿಟಿ ರೈಲು ಸಂಖ್ಯೆ 20651 ಮತ್ತು 20652 ಗಳನ್ನು ತಾಳಗುಪ್ಪದವರೆಗೆ ವಿಸ್ತರಿರಣೆ ಮಾಡಲಾಗಿದೆ. ಬೆಳಗಿನ ಜಾವ 3.50 ಕ್ಕೆ ತಾಳಗುಪ್ಪದಿಂದ ಹೊರಟು ಬೆಂಗಳೂರಿಗೆ ಬೆಳಗ್ಗೆ 11.35 ಕ್ಕೆ ತಲುಪಲಿದೆ. ಇಲ್ಲಿಂದ ಅಂದರೆ ಬೆಂಗಳೂರಿನಿಂದ ಮಧ್ಯಾಹ್ನ 3 ಗಂಟೆಗೆ ಹೊರಟು ರಾತ್ರಿ 10.15 ಕ್ಕೆ ತಾಳಗುಪ್ಪ ತಲುಪಲಿದೆ.
ಬೆಂಗಳೂರು ಮತ್ತು ಶಿವಮೊಗ್ಗ ಮಧ್ಯೆ ಸೂಪರ್ ಪಾಸ್ಟ್ ಎಕ್ಸ್‌ಪ್ರೆಸ್ ರೈಲಾಗಿ ಚಲಿಸುವ ರೈಲು ಶಿವಮೊಗ್ಗ ಮತ್ತು ತಾಳಗುಪ್ಪ ಮಧ್ಯೆ ಎಕ್ಸ್‌ಪ್ರೆಸ್ ರೈಲಾಗಿ ಬದಲಾಗಲಿದೆ.ಶಿವಮೊಗ್ಗ ತಾಳಗುಪ್ಪ ಮಧ್ಯೆ ಆನಂದಪುರ ಮತ್ತು ಸಾಗರದಲ್ಲಿ ನಿಲುಗಡೆಗೆ ಸೂಚನೆ ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.