ಕೈಗಾ ಅಣು ಸ್ಥಾವರ ಸ್ಥಳೀಯ ಜನರ ಆರೋಗ್ಯಕ್ಕೆ ಕಂಟವಾಗಿದೆ. ಈ ಹಿಂದೆಯೂ ಕೂಡ ಈ ಅನುಮಾನ ವ್ಯಕ್ತವಾಗಿತ್ತು. ಏಕೆಂದರೆ ಅಣು ಸ್ಥಾವರದ ವಿಕಿರಣದಿಂದಲೇ ಕ್ಯಾನ್ಸರ್ ಹರಡುತ್ತಿದೆ ಎಂಬ ವಿಷಯ ಈ ಮೊದಲೇ ಬಯಲಾಗಿತ್ತು.
ಕಾರವಾರ (ಜೂ. 22): ಕೈಗಾ ಅಣು ಸ್ಥಾವರ ಸ್ಥಳೀಯ ಜನರ ಆರೋಗ್ಯಕ್ಕೆ ಕಂಟವಾಗಿದೆ. ಈ ಹಿಂದೆಯೂ ಕೂಡ ಈ ಅನುಮಾನ ವ್ಯಕ್ತವಾಗಿತ್ತು. ಏಕೆಂದರೆ ಅಣು ಸ್ಥಾವರದ ವಿಕಿರಣದಿಂದಲೇ ಕ್ಯಾನ್ಸರ್ ಹರಡುತ್ತಿದೆ ಎಂಬ ವಿಷಯ ಈ ಮೊದಲೇ ಬಯಲಾಗಿತ್ತು.
ಕೆಲ ವರ್ಷಗಳಿಂದ ಎನ್;ಜಿಒ ಹಾಗೂ ಪರಿಸರ ಕಾರ್ಯಕರ್ತರು ಈ ಸಂಬಂಧ ಹೋರಾಟ ನಡೆಸುತ್ತಿದ್ದರು. ಟಾಟಾ ಮೊಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಯು 2010-13ರ ಅವಧಿಯಲ್ಲಿ ಕೈಗಾ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅಧ್ಯಯನ ನಡೆಸಿ, ಈಗ ಕ್ಯಾನ್ಸರ್ ಪೀಡಿತರ ದಾಖಲೆಯನ್ನ ಸಿದ್ದಪಡಿಸಿದೆ. ಈ ದಾಖಲೆಯ ಪ್ರತಿ ಈಗ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ. ಆದರೆ, ಜಿಲ್ಲಾ ಆರೋಗ್ಯ ಇಲಾಖೆ ಮಾತ್ರ ತನ್ನ ಬಳಿ ಯಾವುದೇ ದಾಖಲೆ ಇಲ್ಲ ಎಂದು ಹೇಳುತ್ತಿದೆ. ಆದರೆ ಗೋವಾ ಹಾಗೂ ಕರ್ನಾಟಕದ 30ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಪೀಡಿತರು ದಾಖಲಾಗಿದ್ದು, 129 ಪುರುಷರು ಹಾಗೂ 187 ಮಹಿಳಾ ರೋಗಿಗಳ ಮಾಹಿತಿ ರಿಜಿಸ್ಟ್ರರ್ ನಲ್ಲಿ ದಾಖಲಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಮತ್ತು ಕೈಗಾ ಅಧಿಕಾರಿಗಳು ಕೂಡಲೇ ಮಾಹಿತಿ ನೀಡಬೇಕೆಂಬುದು ಸ್ಥಳೀಯರು ಆಗ್ರಹಿಸಿದ್ದಾರೆ.