ಹುತಾತ್ಮರ ಮಕ್ಕಳ ಶಿಕ್ಷಣ, ಉದ್ಯೋಗ ಹೊಣೆ ನಮ್ಮದು : ರಿಲಯನ್ಸ್ ಫೌಂಡೇಶನ್

By Web DeskFirst Published Feb 16, 2019, 2:08 PM IST
Highlights

ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಮಕ್ಕಳ ಶಿಕ್ಷಣ ಮತ್ತು ಉದ್ಯೋಗದ ಜವಾಬ್ದಾರಿ ಹೊರಲು ಮುಂದಾದ ರಿಲಯನ್ಸ್ ಫೌಂಡೇಶನ್  | ನೀತಾ ಅಂಬಾನಿ ನೇತೃತ್ವದ ರಿಲಯನ್ಸ್ ಫೌಂಡೇಶನ್
 

ಮುಂಬೈ:  ಉಗ್ರರ ಅಟ್ಟಹಾಸಕ್ಕೆ ಹುತಾತ್ಮರಾಗಿರುವ CRPFನ 44 ಯೋಧರ ಕುಟುಂಬಕ್ಕೆ ಎಲ್ಲಾ ರೀತಿಯ ನೆರವನ್ನು ನೀಡಲು ಸಿದ್ಧವೆಂದು ರಿಲಯನ್ಸ್ ಫೌಂಡೇಶನ್ ಹೇಳಿದೆ.

ಉಗ್ರರ ಹೇಯ ಕೃತ್ಯವನ್ನು ಕಟುವಾದ ಶಬ್ಧಗಳಿಂದ ಖಂಡಿಸಿರುವ ರಿಲಯನ್ಸ್ ಫೌಂಡೇಶನ್, ಹುತಾತ್ಮ ಯೋಧರ ಮಕ್ಕಳ ಶಿಕ್ಷಣ ಮತ್ತು ನೌಕರಿಯ ಜವಾಬ್ದಾರಿಯನ್ನು ತಾವು ಹೊರಲು ತಯಾರಾಗಿದ್ದೇವೆ ಎಂದು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದೆ.

ಕನ್ನಡಪ್ರಭ ಸುದ್ದಿಗಳನ್ನು ಇಲ್ಲಿ ಓದಿ: http://kpepaper.asianetnews.com/

ಉಗ್ರರ ದಾಳಿಯಲ್ಲಿ ಗಾಯಗೊಂಡಿರುವ ಯೋಧರಿಗೆ ರಿಲಯನ್ಸ್ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಲು ನಾವು ಸಿದ್ಧವೆಂದು ಫೌಂಡೇಶನ್ ಈ ಸಂದರ್ಭದಲ್ಲಿ ಹೇಳಿದೆ. 

ಸೇನೆಯ ಸೇವೆಗಾಗಿ ಸರ್ಕಾರ ವಹಿಸುವ ಯಾವುದೇ ಜವಾಬ್ದಾರಿಯನ್ನು ನಾವು ನಮ್ಮ ಕರ್ತವ್ಯವೆಂದು ಭಾವಿಸಿ, ಅದನ್ನು ನಿರ್ವಹಿಸಲು ಸದಾ ಸಿದ್ಧ

-ರಿಲಯನ್ಸ್ ಫೌಂಡೇಶನ್ 

ಇದನ್ನೂ ಓದಿ: ಯಾವುದೇ ದಾಖಲೆ ಕೇಳದೆ ಹುತಾತ್ಮ ಯೋಧನ ಹಣ ನೀಡಿದ LIC

ನೀತಾ ಅಂಬಾನಿ ನೇತೃತ್ವದ ರಿಲಯನ್ಸ್ ಫೌಂಡೇಶನ್, ರಿಲಯನ್ಸ್  ಇಂಡಸ್ಟ್ರೀಸ್ ಲಿಮಿಟೆಡ್ ಅಂಗಸಂಸ್ಥೆಯಾಗಿದ್ದು, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಆರೋಗ್ಯ ಮುಂತಾದ ಹತ್ತು ಹಲವಾರು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದೆ.       

ಕಳೆದ ಗುರುವಾರ (ಫೆ.14)ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ 44 ಮಂದಿ CRPF ಯೋಧರು ಹುತಾತ್ಮರಾಗಿದ್ದು, 70 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

click me!