ಅಂಗವೈಕಲ್ಯವನ್ನೂ ಮೀರಿ ನಿಂತ ಛಲಗಾತಿ ರೇಖಾ

By Suvarna Web DeskFirst Published Apr 29, 2017, 8:49 AM IST
Highlights

ಮಹಿಳೆಯರು ಯಾವುದೇ ಪರಿಸ್ಥಿತಿ ಇದ್ದರೂ ಧೈರ್ಯದಿಂದ ಎದುರಿಸುತ್ತಾರೆ. ಅಂಗ ವೈಫಲ್ಯವಿದ್ದರೂ ಸಹ ನಾವು ಯಾರಿಗಿಂತಲೂ ಕಡಿಮೆ ಇಲ್ಲದಂತೆ ವಿವಿಧ ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಾರೆ. ಅಂತವರಲ್ಲಿ ರೇಖಾ ನಾನು ಯಾರಿಗೇನು ಕಡಿಮೆ ಇಲ್ಲ ಎಂದು ಹಲವಾರು ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.. ಈ ಮಹಿಳಾ ಸಾಧಕಿ ಯಾವ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ ಅಂತ ನೋಡೋಣ ಬನ್ನಿ.

ಹುಟ್ಟಿದ ಎರಡು ವರ್ಷದ ನಂತರ ಮ್ಯುಕೋ ಪಾಲಿ ಸ್ಯಾಕರೈಟೊಸಿಸ್ ಎಂಬ ಕಾಯಿಲೆ ಅಂಟಿಕೊಳ್ಳುತ್ತೆ. ಈ ಕಾಯಿಲೆ ಮೂರು ಕೋಟಿ ಜನರಲ್ಲಿ ಕೇವಲು ಇಬ್ಬರು ಅಥವ ಮೂರು ಜನರಿಗೆ ಮಾತ್ರ ಉಂಟಾಗುತ್ತೆ. ದಿನೆ ದಿನೇ ಇವರ ಬೆಳವಣಿಗೆ ನಿಧಾನವಾಗುತ್ತೆ. ಪ್ರತೀ ದಿನ ಏನಾದ್ರು ಹೊಸ ಕಾಯಿಲೆ ಶುರುವಾಗುತ್ತಿತ್ತು.  ಹೀಗಿರುವಾಗ ತಂದೆ ತಾಯಿಗಾಗಲಿ ವೈದ್ಯರಿಗಾಗಲಿ ಈ ಕಾಯಿಲೆ ಆದ್ರು ಏನು ಇದನ್ನ ಹೇಗೆ ಗುಣಪಡಿಸಿಸುವುದು ಅಂತ ತಿಳಿಯಲಿಲ್ಲ. ಇಷ್ಟೆಲ್ಲಾ ಕುಂದು ಕೊರತೆಗಳಿದ್ದರೂ ರೇಖಾ ಮಾತ್ರ ತಮ್ಮ ಸಾಧನೆಯ ದಾರಿ ಬಿಡಲಿಲ್ಲ. ಚಿಕ್ಕ ವಯಸಿನಿಂದಲೂ ಸ್ಪರ್ಧೆಗಳಲ್ಲಿ ಹಾಡುವುದು, ವಿಜ್ಞಾನದಲ್ಲಿ ವಿಭಾಗದಲ್ಲಿ  ಹೆಚ್ಚು ಅಸಕ್ತಿಯಿಂದ ಹಲವಾರು ಡಿಬೆಟ್ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು.

ಇವರು ಮೊದಲ ಬಾರಿಗೆ ಶಾಲೆಯಲ್ಲಿ ಇದ್ದಾಗ ವಿಜ್ಞಾನ ವಿಭಾಗದಲ್ಲಿ ವಸ್ತು ಪ್ರದರ್ಶನ ಮಾಡಿದ್ದರು. ಇದರಲ್ಲಿ  ಇವರು ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಕೂಡ ಗಳಿಸಿದ್ದಾರೆ. ಆನಂತರ ಇವರ ಸಾಧನಗೆ ಬ್ರೇಕಿಲ್ಲದೆ ತಮ್ಮ ಗುರಿಯತ್ತ ಸಾಗುತ್ತ ಇದ್ದಾರೆ. ಇಂದಿಗೂ ಕೂಡ ಕಲೆ ವಿಭಾಗ ವಿಜ್ಞಾನ ವಿಭಾಗದಲ್ಲಿ ಸಾಧನೆಯ ಹೆಜ್ಜೆ ಇಟ್ಟಿದ್ದಾರೆ.. ಪ್ರಸ್ತುತ ಖಾಸಗೀ ಕಂಪನಿಯಲ್ಲಿ ಇವರು ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ತಮ್ಮ ಅಂಗ ವೈಫಲ್ಯವಿದ್ರು ಸಹ ಹಿಯಾಳಿಸಿದವರಿಗೆ ಮಾತಿನಲ್ಲಿ ಉತ್ತರ ಕೊಡುವುದರ ಬದಲು ಏನಾದ್ರು ಸಾಧನೆ ಮಾಡಿ ಉತ್ತರಿಸುವುದು ಲೇಸು ಎಂದು ನಿರಂತರವಾಗಿ ತಮ್ಮ ಸಾಧನೆಯ ಬೆನ್ನಟ್ಟಿದ್ದಾರೆ ರೇಖಾ. ಅವರ ಛಲವನ್ನ ಮೆಚ್ಚಲೇಬೇಕು. ಇವರಿಗೆ ನಮ್ಮದೊಂದು ಸಲಾಂ!

click me!