
ಬೀದರ್(ಆ. 25): ರಾಜ್ಯದ ಎಲ್ಲೆಡೆಯಂತೆ ಗಡಿ ಜಿಲ್ಲೆಯ ಬೀದರ್'ನಲ್ಲೂ ಇಂದು ಗಣೇಶನ ಹಬ್ಬ ಬಹಳ ಭಕ್ತಿ ಸಡಗರದಿಂದ ನಡೆಯುತ್ತಿದೆ. ಆದರೆ, ಬೀದರ್ ಮತ್ತು ಆಂಧ್ರದ ಮೇದಕ್ ಜಿಲ್ಲೆಯ ಗಡಿಯಲ್ಲಿರುವ ರೇಜಿಂತಲ್ ಎಂಬ ಗ್ರಾಮದಲ್ಲಿರುವ ಸಿದ್ಧಿ ವಿನಾಯಕನ ದರ್ಶನಕ್ಕೆ ದೊಡ್ಡ ಜನಸಾಗರವೇ ಹರಿದುಬರುತ್ತಿದೆ. ಇಲ್ಲಿಯ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಪ್ರತೀ ವರ್ಷವೂ ಬೇರೆ ಬೇರೆ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ.
ರೇಜಿಂತಲ್ ಗಣೇಶ ದೇವಸ್ಥಾನದಲ್ಲಿರುವುದು ಉದ್ಭವ ಮೂರ್ತಿಯಾಗಿದೆ. 215 ವರ್ಷಗಳಿಂದ ಇದು ನಿರಂತರವಾಗಿ ಹಿಗ್ಗುತ್ತಿರುವುದು ವಿಸ್ಮಯ ಮೂಡಿಸಿದೆ. ಅಲ್ಲದೇ, ದಕ್ಷಿಣಾಭಿಮುಖಿಯಾಗಿರುವ ವಿನಾಯಕನ ಮೂರ್ತಿ ಇರುವುದು ದೇಶದಲ್ಲಿ ಇದೊಂದೇ.
ಗಣೇಶ ಚತುರ್ಥಿಯಂದು ಈ ರಜಿಂತಲ್ ಸಿದ್ದಿ ವಿನಾಯಕನಿಗೆ ಮೊದಲು ಪೂಜೆ ಮಾಡಿದರೆ ತಾವು ಅಂದುಕೊಂಡಿರುವ ಕಾರ್ಯ ಸಿದ್ಧಿಯಾಗುತ್ತದೆ ಎಂಬ ನಂಬಿಕೆಯು ಭಕ್ತರಲ್ಲಿದೆ. ಹೀಗಾಗಿ, ಇಲ್ಲಿ ಗಣೇಶ ಹಬ್ಬದಂದು ದೊಡ್ಡ ಜನಸಾಗರವೇ ಹರಿದುಬರುತ್ತದೆ.
ವರದಿ: ಲಿಂಗೇಶ್, ಸುವರ್ಣನ್ಯೂಸ್, ಬೀದರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.