ಸೀರೆ ಉಟ್ಟುಕೊಂಡೇ 42 ಕಿ.ಮೀ ಓಡಿದ ಟೆಕಿ!

By Suvarna Web DeskFirst Published Aug 25, 2017, 4:07 PM IST
Highlights

ಹೈದರಾಬಾದಿನ ಟೆಕಿ ಮಹಿಳೆಯೊಬ್ಬರು ಸಿರೆಯುಟ್ಟುಕೊಂಡೇ 42 ಕಿ.ಮೀ ದೂರ ಓಡಿ, ಸೊಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದಾರೆ. ಸಾಫ್ಟ್’ವೇರ್ ದೈತ್ಯ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಐಟಿ ಮ್ಯಾನೇಜರ್ ಆಗಿರುವ ಜಯಂತಿ ಸಂಪತ್ ಕುಮಾರ್ ಸೀರೆಯುಟ್ಟುಕೊಂಡೇ 42 ಕಿ.ಮಿ ಮ್ಯಾರಥನ್ ಓಟವನ್ನು ಕೇವಲ 5 ಗಂಟೆಗಳಲ್ಲಿ ಮುಗಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಹೈದರಾಬಾದ್: ಹೈದರಾಬಾದಿನ ಟೆಕಿ ಮಹಿಳೆಯೊಬ್ಬರು ಸಿರೆಯುಟ್ಟುಕೊಂಡೇ 42 ಕಿ.ಮೀ ದೂರ ಓಡಿ, ಸೊಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದಾರೆ.

ಸಾಫ್ಟ್’ವೇರ್ ದೈತ್ಯ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಐಟಿ ಮ್ಯಾನೇಜರ್ ಆಗಿರುವ ಜಯಂತಿ ಸಂಪತ್ ಕುಮಾರ್ ಸೀರೆಯುಟ್ಟುಕೊಂಡೇ 42 ಕಿ.ಮಿ ಮ್ಯಾರಥನ್ ಓಟವನ್ನು ಕೇವಲ 5 ಗಂಟೆಗಳಲ್ಲಿ ಮುಗಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಏರ್’ಟೆಲ್ ಮ್ಯಾರಥಾನ್ ಓಟದಲ್ಲಿ ಜಯಂತಿ ಸಂಪತ್ ಕುಮಾರ್  ಸೀರೆ ಧರಿಸಿ ಓಡಲು ಒಂದು ಕಾರಣ ಇದೆ. ಅವರು ಧರಿಸಿದ್ದ ಸೀರೆ ಅಂತಿಂತಹದ್ದಲ್ಲ, ಅದು ಕೈಮಗ್ಗದ ಸೀರೆ! ಕೈಮಗ್ಗದ ಉತ್ಪನ್ನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಜಯಂತಿ ಈ ಉಪಾಯ ಹೂಡಿದ್ದಾರೆ.

ಜಗತ್ತಿನಲ್ಲಿ ಅತೀ ಹೆಚ್ಚು ಕೈಮಗ್ಗಗಳನ್ನು ಹೊಂದಿರುವ ದೇಶ ಭಾರತ, ಇದು ಹೆಮ್ಮೆಯ ವಿಷಯ. ಸಾವಿರಾರು ಮಂದಿಗೆ ಉದ್ಯೋಗವನ್ನು ನೀಡುವ ಕೈಮಗ್ಗಗಳು ದುರಾದೃಷ್ಟವಶಾತ್ ಇಂದು ಕಣ್ಮರೆಯಾಗುತ್ತಿವೆ, ನಾವದನ್ನು ಉಳಿಸಬೇಕೆಂದು ಜಯಂತಿ ಅಭಿಪ್ರಾಯಪಡುತ್ತಾರೆ.

ಕೈಮಗ್ಗ ಉತ್ಪನ್ನಗಳನ್ನು ಖರೀದಿಸಿ ಪ್ರೋತ್ಸಾಹಿಸುವ ಕಾರ್ಯದಲ್ಲಿ ಜಯಂತಿ  ಕಳೆದ  ಕೆಲವು ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ. ಅದೇ ಅಲ್ಲದೇ, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಕೂಡಾ ಬೇರೆ ಬೇರೆ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದಾರೆ.

(ಫೋಟೋ ಕೃಪೆ: ಜಯಂತಿ ಸಂಪತ್ ಕುಮಾರ್ ಫೇಸ್ಬುಕ್ ವಾಲ್)

 

click me!