ಬಿಜೆಪಿಯ ಶಾಸಕರಿಗೆ ಈಗ ಹೊಸ ಕೆಲಸ

Published : Oct 17, 2018, 12:20 PM ISTUpdated : Oct 17, 2018, 12:26 PM IST
ಬಿಜೆಪಿಯ  ಶಾಸಕರಿಗೆ ಈಗ ಹೊಸ ಕೆಲಸ

ಸಾರಾಂಶ

ಇದೀಗ ಬಿಜೆಪಿ ಮುಖಂಡರಿಗೆ ಹೊಸ ಕೆಲಸವೊಂದನ್ನು ನೀಡಲಾಗಿದೆ. ತಮ್ಮ ಕ್ಷೇತ್ರಗಳ ಮತದಾರರನ್ನು ಸೆಳೆಯುವ ಸಲುವಾಗಿ 150 ಕಿ.ಮೀ ನಡೆಯುವ ಗುರಿಯನ್ನು ನೀಡಿದೆ. 

ಮುಂಬೈ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150 ನೇ ಜನ್ಮದಿನಾಚರಣೆ ಪ್ರಯುಕ್ತ ಮಹಾರಾಷ್ಟ್ರದ ತನ್ನ 121 ಶಾಸಕರಿಗೆ ಬಿಜೆಪಿ ಹೊಸ ಕೆಲಸವೊಂದನ್ನು ನೀಡಿದೆ. ಮತದಾರರ ಜತೆ ಸಂಪರ್ಕ ಸಾಧಿಸುವ ‘ಸಂಪರ್ಕ ಅಭಿಯಾನ’ದ ಭಾಗವಾಗಿ ಪ್ರತಿಯೊಬ್ಬ ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕನಿಷ್ಠ 150 ಕಿ.ಮೀ.  ನಡೆಯ ಬೇಕು. ಈ ವೇಳೆ ಕನಿಷ್ಠ 150 ಕಾರ್ಯಕರ್ತರು ಶಾಸಕರ ಜತೆ ಯಲ್ಲಿರಬೇಕು. ಅಭಿಯಾನದ ವೇಳೆ ಒಂದು ತಾಸು ಶ್ರಮದಾನ ಮಾಡಬೇಕು ಎಂದು ನಿರ್ದೇಶನ ನೀಡಿದೆ.

ಪಕ್ಷ ಸಂಘಟನೆಗಾಗಿ ಈ ಅಭಿಯಾನ ಈಗಾಗಲೇ ಆರಂಭ ವಾಗಿದೆ. ಗಾಂಧೀಜಿ ಪುಣ್ಯ ತಿಥಿ ದಿನವಾದ ಜ.30 ರೊಳಗೆ ಈ ಅಭಿಯಾನವನ್ನು ಎಲ್ಲ ಶಾಸಕರೂ ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ. ಬಿಜೆಪಿಯ ಈ ಸೂಚನೆಗೆ ಕೆಲವು ಶಾಸಕರ ಆಕ್ಷೇಪವೂ ವ್ಯಕ್ತವಾಗಿದೆ.

ಪಾದಯಾತ್ರೆ ವೇಳೆ  ಪೆಟ್ರೋಲ್ ಬೆಲೆ ಏರಿಕೆ ಪ್ರಶ್ನಿಸಿದರೆ, ಏನು ಮಾಡುವುದು. ಹಲವೆಡೆ ಮಳೆ ಕೊರತೆಯಿಂದ ಜನರು ಬಿತ್ತನೆಯನ್ನೇ ಮಾಡಿಲ್ಲ. ಅಂತಹ ಪ್ರದೇಶಕ್ಕೆ ಹೋಗಿ ಸಮಸ್ಯೆ ಆಲಿಸುವುದಾದರೂ ಹೇಗೆ ಎಂದು ಕೆಲ ಶಾಸಕರು ಪ್ರಶ್ನೆ ಎತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮಲ್ಲಿಕಾರ್ಜುನ ಖರ್ಗೆ ಹಠಾವೋ ಪ್ರಿಯಾಂಕಾ ಗಾಂಧಿ ಲಾವೋ, ಕಾಂಗ್ರೆಸ್ ಅಧ್ಯಕ್ಷ ಬದಲಾವಣೆಗೆ ಹೋರಾಟ
ಅನಾರೋಗ್ಯ ಏನಿದ್ದರೂ ವೀಕ್ ಆಫ್‌ನಲ್ಲೇ ಬರಬೇಕು ಸಿಕ್ ಲೀವ್ ಇಲ್ಲ, ನೋವು ತೋಡಿಕೊಂಡ ಉದ್ಯೋಗಿ