ಕಾಂಗ್ರೆಸ್ ಮುಖಂಡಗೂ ತಟ್ಟಿದ #MeToo ಕಳಂಕ : ರಾಜೀನಾಮೆ

By Web DeskFirst Published Oct 17, 2018, 12:32 PM IST
Highlights

ಎಲ್ಲೆಡೆ ಸದ್ದು ಮಾಡುತ್ತಿರುವ ಎಲ್ಲಾ ಕ್ಷೇತ್ರಗಳಿಗೂ ಬಿಸಿ ಮುಟ್ಟಿಸುತ್ತಿರುವ ಮೀ ಟೂ ಅಭಿಯಾನ ಇದೀಗ ರಾಜಕೀಯ ರಂಗವನ್ನೂ ನಡುಗಿಸುತ್ತಿದೆ. ಕಾಂಗ್ರೆಸ್ ಮುಖಂಡನ ಮೇಲೂ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾರೆ. 

ನವದೆಹಲಿ: ಕಾಂಗ್ರೆಸ್‌ನ ಯುವಘಟಕ ಎನ್‌ಎಸ್ ಯುಐನ ಅಧ್ಯಕ್ಷ ಫೈರೋಜ್ ಖಾನ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅವರು ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದು, ಅದನ್ನು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧೀ ಸ್ವೀಕರಿಸಿದ್ದಾರೆ. 

ಫೈರೋಜ್, ತಮ್ಮ ಹಾಗೂ ತಮ್ಮ ಸೋದರಿ ಜೊತೆಗೆ ಇತರೆ ಹಲವು ಕಾಂಗ್ರೆಸ್ ಕಾರ್ಯಕರ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಛತ್ತಿಸ್‌ಗಢದ ಮಹಿಳೆಯೊಬ್ಬರು ಕಳೆದ ಜೂನ್‌ನಲ್ಲಿ ಪಕ್ಷದ ನಾಯಕರಿಗೆ ದೂರು ನೀಡಿದ್ದರು. ಬಳಿಕ ಪೊಲೀಸರ ಬಳಿಯೂ ದೂರು ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಲು ಪಕ್ಷ 3 ಸದಸ್ಯರ ಸಮಿತಿ ರಚಿಸಿತ್ತು. ಸಮಿತಿಯ ವರದಿಗೆ ಮುನ್ನವೇ ಖಾನ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 

ತಮ್ಮ ಮೇಲಿನ ಆರೋಪವನ್ನು ಖಾನ್ ತಳ್ಳಿಹಾಕಿದ್ದರೂ, ತಮ್ಮ ಮೇಲಿನ ಆರೋಪದಿಂದ ಪಕ್ಷಕ್ಕೆ ಕಳಂಕಕ್ಕೆ ತಗುಲುವುದು ಬೇಡ ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

click me!