ಸ್ಯಾಂಡಲ್‌ವುಡ್ ಟ್ರಬಲ್ ಶೂಟರ್ ಅಂಬರೀಷ್

By Kannadaprabha News  |  First Published Nov 25, 2018, 8:14 AM IST

ಕನ್ನಡ ಚಿತ್ರರಂಗದಲ್ಲಿ ಅದ್ಭುತ ನಟ ಅಂಬರೀಷ್. ಡಾ. ರಾಜ್‌ಕುಮಾರ ನಿಧನದ ನಂತರ ಸ್ಯಾಂಡಲ್‌ವುಡ್‌ಗೆ ಹಿರಿಯಣ್ಣನಂತಿದ್ದರು. ಚಿತ್ರರಂಗದ ಏನೇ ಬಿಕ್ಕಟ್ಟು ಎದುರಾದರೂ ಸಹನೆಯಿಂದ ನಿಭಾಯಿಸುತ್ತಿದ್ದಿದ್ದು ಅವರ ವಿಶೇಷ. ಆದರೆ, ಇತ್ತೀಚೆಗೆ ನಟಿ ಶೃತಿ ಹರಿಹರನ್ ಹಿರಿಯ ನಟ ಅರ್ಜುನ ಸರ್ಜಾ ವಿರುದ್ಧ #MeToo ಆರೋಪ ಮಾಡಿದಾಗ ಮಾತ್ರ ಸಂಧಾನ ಮಾಡುವಲ್ಲಿ ವಿಫಲವಾಗಿದ್ದರು. ಇದರಿಂದ ಅಪಾರವಾಗಿ ನೊಂಡಿದ್ದರು ರೆಬೆಲ್ ಸ್ಟಾರ್.


 ಬೆಂಗಳೂರು: ವರನಟ ಡಾ.ರಾಜ್‌ ಕುಮಾರ್‌ ನಿಧನದ ನಂತರ ಕನ್ನಡ ಚಿತ್ರರಂಗಕ್ಕೆ ಅಂಬರೀಷ್‌ ಹಿರಿಯಣ್ಣನಂತಿದ್ದರು. ಇಡೀ ಚಿತ್ರೋದ್ಯಮಕ್ಕೆ ಸಲಹೆ, ಸೂಚನೆ ನೀಡುತ್ತ ಮಾರ್ಗದರ್ಶಕರಾಗಿ ಗುರುತಿಸಿಕೊಂಡಿದ್ದರು. ಯಾವುದೇ ಸಂಕಷ್ಟದ ಸಂದರ್ಭದಲ್ಲಿ ಇಡೀ ಚಿತ್ರೋದ್ಯಮವೇ ಅವರ ಬಳಿಗೆ ಹೋಗುವುದು ಮಾಮೂಲು ಆಗಿತ್ತು. ಹಾಗಾಗಿಯೇ ರೆಬೆಲ್‌ ಸ್ಟಾರ್‌ ಅಂಬರೀಷ್‌ ಕನ್ನಡ ಚಿತ್ರರಂಗದಲ್ಲಿ ಟ್ರಬಲ್‌ ಶೂಟರ್‌ ಅಂತಲೇ ಹೆಸರಾಗಿದ್ದರು.

Latest Videos

undefined

ರಾಜಕುಮಾರ್‌ ನಿಧನದ ನಂತರವೂ ಚಿತ್ರೋದ್ಯಮ ಹತ್ತಾರು ಸಮಸ್ಯೆಗಳನ್ನು, ಸಂಕಷ್ಟಗಳನ್ನು, ಸವಾಲುಗಳನ್ನು ಎದುರಿಸಿದೆ. ಅದು ಡಬ್ಬಿಂಗ್‌ ವಿಚಾರದಿಂದ ಹಿಡಿದು ಚಿತ್ರೋದ್ಯಮದೊಳಗಿನ ಅಂತರಿಕ ಸಮಸ್ಯೆಗಳ ತನಕವೂ ಹೌದು. ಅಂತಹ ಸಂದರ್ಭಗಳಲ್ಲಿ ಅಂಬರೀಷ್‌ ಮಧ್ಯಸ್ಥಿಕೆಯ ಕಾರಣಕ್ಕೆ ವಿವಾದಗಳು, ಸಮಸ್ಯೆಗಳು, ಜಗಳಗಳು ಮರು ಮಾತಿಲ್ಲದೆ ಇತ್ಯರ್ಥಗೊಂಡಿದ್ದು ಸುಳ್ಳಲ್ಲ. ಅಂಬರೀಷ್‌ ಹಿರಿಯರು, ಅವರ ಮಾತಿಗೆ ಗೌರವ ನೀಡಬೇಕೆನ್ನುವುದಕ್ಕಿಂತ ಅಂಬರೀಷ್‌ ರೆಬೆಲ್‌ ಸ್ವಭಾವದಿಂದಲೇ ನಿರ್ಮಾಪಕರು, ನಿರ್ದೇಶಕರು ಹಾಗೂ ಕಲಾವಿದರು ಅವರು ನೀಡುತ್ತಿದ್ದ ತೀರ್ಪಿಗೆ ಓಕೆ ಎನ್ನುತ್ತಿದ್ದರು. ಹಾಗಾಗಿಯೇ ಅಂಬರೀಷ್‌ ಇದ್ದಲ್ಲಿ ಜಗಳ ಇಲ್ಲ, ವಿವಾದ ಇಲ್ಲ ಎನ್ನುವ ಮಾತು ಚಿತ್ರರಂಗದಲ್ಲಿ ಲೋಕಾರೂಢಿ ಆಗಿತ್ತು.

ಇಷ್ಟಾಗಿಯೂ ಅವರ ಮಧ್ಯಸ್ಥಿತಿಕೆಯ ಮಧ್ಯೆಯೂ ಇತ್ಯರ್ಥವಾಗದೆ ಕೋರ್ಟ್‌ಗೆ ಹೋಗಿದ್ದು ಹಿರಿಯ ನಟ ಅರ್ಜುನ್‌ ಸರ್ಜಾ ಮೇಲೆ ಶ್ರುತಿ ಹರಿಹರನ್‌ ಮಾಡಿದ್ದ ಮೀಟೂ ಆರೋಪ. ಪರಸ್ಪರ ಮಾತುಕತೆಯ ಮೂಲಕವೂ ಇಬ್ಬರೂ ವಿವಾದ ಇತ್ಯರ್ಥಕ್ಕೆ ಒಪ್ಪಿಕೊಳ್ಳದೇ ಇದ್ದಾಗ ‘ನಾನೇನು ಇಲ್ಲಿ ಸುಪ್ರೀಂ ಅಲ್ಲ. ನನಗೂ ವಯಸ್ಸಾಯ್ತು’ ಅಂತ ನಗುತ್ತಲೇ ತಮ್ಮ ಅಸಹಾಯಕತೆ ಹೇಳಿಕೊಂಡಿದ್ದರು ಅಂಬರೀಷ್‌.

ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನ, ಕಂಠೀರವ ಸ್ಟುಡಿಯೋದಲ್ಲಿ ಅಂತಿಮ ಸಂಸ್ಕಾರ

ಸುಮಲತಾ ನೆನಪಿಸಿಕೊಂಡ ಲವ್ ಸ್ಟೋರಿ

click me!