
ಬೆಂಗಳೂರು(ಆ.18):ರಾಜ್ಯ ಸರ್ಕಾರದ ಬಹುನೀರಿಕ್ಷಿತಾ ಯೋಜನೆ ಇಂದಿರಾ ಕ್ಯಾಂಟಿನ್ ಊಟ ತಿನ್ನೋದಕ್ಕೆ ಯೋಗ್ಯವಾ, ಸರ್ಕಾರ ನೀಡ್ತಿರೋ ಊಟದ ಗುಣಮಟ್ಟವನ್ನ ಬಿಬಿಎಂಪಿ ಅಧಿಕಾರಿಗಳೇ ಕಳಪೆ ಮಾಡ್ತಿದ್ದಿರಾ, ಸರ್ಕಾರ ನೀಡ್ತಿರೋ ಕಡಿಮೆ ದರ್ಜೆಯ ಊಟವನ್ನು ಬಿಬಿಎಂಪಿ ಅಧಿಕಾರಿಗಳು ಅರಮನೆ ಮೈದಾನದ ಬಯಲಲ್ಲಿ ತಯಾರು ಮಾಡಿರೋ ಅಗತ್ಯತೆಯಾದ್ರು ಏನು, ಈ ಬಗ್ಗೆ ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ ನಡೆಸಿದೆ.
3 ದಿನಗಳ ಹಿಂದೆಯಷ್ಟೇ ರಾಜ್ಯ ಕಾಂಗ್ರೆಸ್ ಸರ್ಕಾರ ಬಹುನಿರೀಕ್ಷಿತ ಯೋಜನೆ ಇಂದಿರಾ ಕ್ಯಾಂಟಿನ್ ಕಾರ್ಯಾರಂಭ ಮಾಡಿದೆ. ಹಸಿವು ಮುಕ್ತ ಕರ್ನಾಟಕ ಎಂಬ ಪರಿಕಲ್ಪನೆಯಲ್ಲಿ ಆರಂಭವಾಗಿರೋ ಈ ಯೋಜನೆಗೆ ಉತ್ತಮ ಪ್ರಶಂಸೆ ಕೂಡ ವ್ಯಕ್ತವಾಗುತ್ತಿದೆ. ಆದರೆ ಇಂದಿರಾ ಕ್ಯಾಂಟಿನ್ಗೆ ಪೂರೈಕೆಯಾಗಬೇಕಿದ್ದ ಊಟವನ್ನ ನಗರದ ಅರಮನೆ ಮೈದಾನದ ಬಯಲಿನಲ್ಲಿ ತಯಾರು ಮಾಡ್ತಿರೋದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಸರ್ಕಾರದ ಈ ಅವ್ಯವಸ್ಥೆ ಯನ್ನು ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ ಮೂಲಕ ಬಯಲು ಮಾಡಿದೆ.
ಬೆಂಗಳೂರಿನಲ್ಲಿ ಕಾರ್ಯರಂಭವಾಗಿರೋ ಇಂದಿರಾ ಕ್ಯಾಂಟಿನ್ಗೆ 7 ಅಡುಗೆ ಮನೆಗಳಿಂದ ಊಟ ಪೂರೈಕೆಯಾಗಬೇಕಿತ್ತು. ಆದ್ರೆ ಯಾವುದೇ ತಯಾರಿಯಿಲ್ಲದ್ದೆ ರಾಜ್ಯ ಸರ್ಕಾರ ಇಂದಿರಾ ಕ್ಯಾಂಟಿನ್ ಯೋಜನೆಯನ್ನ ತರಾತುರಿಯಲ್ಲಿ ಅನುಷ್ಠಾನಕ್ಕೆ ತಂದಿದೆ. ಸಾಲದ್ದಕ್ಕೆ ಅರಮನೆ ಮೈದಾನದ ಬಯಲಿನಲ್ಲಿ ತಯಾರು ಮಾಡಿದ ಊಟವನ್ನೇ ಬಿಬಿಎಂಪಿ ಅಧಿಕಾರಿಗಳು ಇಂದಿರಾ ಕ್ಯಾಂಟಿನ್ಗೆ ಪೂರೈಕೆ ಮಾಡ್ತಿದ್ದಾರೆ.
ರಾಜ್ಯ ಸರ್ಕಾರ ಈ ಎಲ್ಲಾ ಅವ್ಯವಸ್ಥೆಗಳ ಮಧ್ಯೆ ಇಂದಿರಾ ಕ್ಯಾಂಟಿನ್ ಯೋಜನೆಯ ಗುತ್ತಿಗೆಯನ್ನ ಉತ್ತರ ಪ್ರದೇಶ ಮೂಲದ ರಿರ್ಟಾನ್ಸ್ ಕಂಪನಿಗೆ ನೀಡಿದೆ. ಒಂದು ಊಟಕ್ಕೆ ಗುತ್ತಿಗೆ ಪಡೆದ ಕಂಪನಿ 20 ರೂಪಾಯಿ ನಿಗದಿ ಪಡಿಸಿದೆ. ಸಾರ್ವಜನಿಕರಿಂದ 10 ರೂಪಾಯಿ ಮತ್ತು ಬಿಬಿಎಂಪಿ ಯಿಂದ 10 ರೂಪಾಯಿ ಹಣ ವಸೂಲಿ ಮಾಡುತ್ತಿದೆ. ಆದರೂ ಗುಣ ಮಟ್ಟದ ಊಟ ನೀಡುವಲ್ಲಿ ಎಡವುತ್ತಿದೆ ಅನ್ನಿಸುತ್ತಿದೆ ಒಟ್ಟಿನಲ್ಲಿ ಈ ಈ ಸಮಸ್ಯೆಗಳ ಮಧ್ಯೆ ಸಾರ್ವಜನಿಕರು ಇಂದಿರಾ ಕ್ಯಾಂಟಿನ್ ಊಟದ ಬಗ್ಗೆ ಆತಂಕಗೊಂಡಿರೋದಂತೂ ಅಕ್ಷರಶಃ ಸತ್ಯ .
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.