ಟ್ರಕ್ಕಿಂಗ್ ಪ್ರಿಯರಿಗೆ ಅರಣ್ಯ ಇಲಾಖೆಯಿಂದ ಸಿಹಿಸುದ್ದಿ

By Suvarna Web DeskFirst Published Aug 18, 2017, 9:44 PM IST
Highlights

ಸಿಲಿಕಾನ್ಸಿಟಿನರುಹೆಚ್ಚಾಗಿಟ್ರಕ್ಕಿಂಗ್ಹೋಗಲುಬಯಸುತ್ತಾರೆ. ಹಿನ್ನೆಲೆಯಲ್ಲಿಬೆಂಗಳೂರುಸುತ್ತಮುತ್ತಟ್ರಕ್ಕಿಂಗ್ಟ್ರ್ಯಾಕ್ಗಳನ್ನುಗುರುತಿಸಲಾಗಿದೆ.

ಬೆಂಗಳೂರು ಸುತ್ತಮುತ್ತ ಟ್ರಕ್ಕಿಂಗ್ ಹೋಗಬೇಕು ಎನ್ನುವರಿಗೆ ಅರಣ್ಯ ಇಲಾಖೆ ಸಿಹಿ ಸುದ್ದಿ ನೀಡಿದೆ. ಹೌದು, ಸಿಲಿಕಾನ್ ಸಿಟಿ ಸುತ್ತ ಮುತ್ತ ಯಾವ್ಯಾವ ಚಾರಣಗಳಿವೆ ಎಂಬುದು ಎಷ್ಟೋ ಪ್ರವಾಸಿಗರಿಗೆ ಗೊತ್ತಿಲ್ಲ. ಇದರ ಜತೆಗೆ ಸರಿಯಾಗಿ ಮಾರ್ಗದರ್ಶಕರಿಲ್ಲದೆ ಪ್ರವಾಸಿಗರು ತೊಂದರೆ  ಅನುಭವಿಸುತ್ತಿದ್ದರು. ಈ ಎಲ್ಲ ಸಮಸ್ಯೆಗಳನ್ನು ನಿವಾರಿಸಲು ಅರಣ್ಯ ಇಲಾಖೆ ಬೆಂಗಳೂರು ಸುತ್ತ ಮುತ್ತಲಿನ  ಏಳು ಚಾರಣಗಳನ್ನು ಗುರಿತಿಸಿದ್ದಲ್ಲದೆ, 30 ಮಾರ್ಗದರ್ಶಕರನ್ನು ನೇಮಕ ಮಾಡಿದೆ.

ಇಂದು ಬೆಂಗಳೂರಿನ ಸುತ್ತಮುತ್ತಲಿನ ಪರಿಸರ ಪಥಗಳಿಗೆ ಅರಣ್ಯ ಸಚಿವ ರಮಾನಾಥ್ ರೈ ಚಾಲನೆ ನೀಡಿದರು. ಇದಕ್ಕೂ ಮೊದಲು ಕೊಡಗು ಜಿಲ್ಲೆಯಲ್ಲಿ ಎಕೋ ಟ್ರೇಲ್ಸ್  ಗೆ ಚಾಲನೆ ನೀಡಲಾಯಿತು.

ಇದಾದ ನಂತರ ಬೆಂಗಳೂರಿನಲ್ಲಿ ಎಕೋ ಟ್ರೇಲ್ಸ್ ಗಳನ್ನು ಗುರುತಿಸಲಾಗಿದೆ. ಬೆಂಗಳೂರು ಸುತ್ತ ಸ್ಕಂದಗಿರಿ, ಅವಲಬೆಟ್ಟ, ಸಾವನದುರ್ಗ, ಬಿದರಕಟ್ಟೆ, ಮಾಕಳಿದುರ್ಗ, ಸಿದ್ದರಬೆಟ್ಟ, ದೇವರಾಯನದುರ್ಗ ದಲ್ಲಿ ಚಾರಣಗಳನ್ನು ಗುರುತಿಸಲಾಗಿದೆ. ಸಿಲಿಕಾನ್ ಸಿಟಿ ಜನರು ಹೆಚ್ಚಾಗಿ ಟ್ರಕ್ಕಿಂಗ್ ಹೋಗಲು ಬಯಸುತ್ತಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು  ಸುತ್ತಮುತ್ತ ಟ್ರಕ್ಕಿಂಗ್ ಟ್ರ್ಯಾಕ್ ಗಳನ್ನು ಗುರುತಿಸಲಾಗಿದೆ. ಅರಣ್ಯ ಇಲಾಖೆಯಲ್ಲಿ ಹೆಸರು ನೊಂದಾಯಿಸುವರು myecotrip.com ಭೇಟಿ ನೀಡಿ, 450 ಹಣ ಪಾವತಿಸಿದ್ರೆ ಎಕೋ ಟ್ರೇಲ್ಸ್ ಅನುಭವ ಪಡೆಯಬಹುದು.  ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು  ಅರಣ್ಯ ಸಚಿವ ರಮಾನಾಥ್  ರೈ ಹೇಳಿದ್ದಾರೆ.

click me!