
ನವದೆಹಲಿ(ಜ.02): ಜಗತ್ತಿನ ಮೊದಲ ಐಷಾರಾಮಿ ಹಡಗು ಎಂದೇ ಪ್ರಸಿದ್ಧಿ ಪಡೆದು ಪ್ರತಿಯೊಬ್ಬನೂ ತನ್ನೆಡೆ ನೋಡುವಂತೆ ಮಾಡಿದ್ದ 'ಟೈಟಾನಿಕ್' ತನ್ನ ಮೊದಲ ಪ್ರಯಾಣದಲ್ಲೇ ದುರಂತ ಕಂಡಿತ್ತು. ಅಪಾರ ಪ್ರಮಾಣದ ಸಾವು ನೋವಿಗೆ ಕಾರಣವಾಗಿದ್ದ ಈ ದುರಂತ ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು. ಬದುಕಿ ಬಂದ ಕೆಲವರು ಸಮುದ್ರಲ್ಲಿ ಹಡಗಿನ ಮಾರ್ಗಕ್ಕೆ ಅಡ್ಡ ಬಂದಿದ್ದ ಹಿಮಬಂಡೆಗಳು ಅಪ್ಪಳಿಸಿ ಈ ಅವಘಡ ಸಂಭವಿಸಿತ್ತು ಎಂದಿದ್ದರು. ಆದರೆ ಇದೀಗ ಟೈಟಾನಿಕ್ ದುರಂತಕ್ಕೆ ಸಂಬಂಧಿಸಿದಂತೆ ಮತ್ತೊಂದು ರಹಸ್ಯ ಬಯಲಾಗಿದೆ.
ಸದ್ಯ ಲಭ್ಯವಾದ ಮಾಹಿತಿ ಅನ್ವಯ ಕೇವಲ ಹಿಮಬಂಡೆಗಳು ಹಡಗಿಗೆ ಅಪ್ಪಳಿಸಿದ್ದರ ಪರಿಣಾಮ ಈ ದುರಂತವಾಗಿದ್ದಲ್ಲ, ಬದಲಾಗಿ ಹಡಗಿನ ಬಾಯ್ಲರ್ ವಿಭಾಗದಲ್ಲಿ ಬೆಂಕಿ ತಗುಲಿದ್ದೂ ಇದಕ್ಕೆ ಕಾರಣವೆಂದು ತಿಳಿದು ಬಂದಿದೆ. ಟೈಟಾನಿಕ್ ಕುರಿತಾದ ಸಾಕ್ಷ್ಯಚಿತ್ರವೊಂದರಲ್ಲಿ ಈ ರಹಸ್ಯ ಬಯಲಾಗಿದೆ. 1921ರಲ್ಲಾದ ಈ ದುರಂತದಲ್ಲಿ 1500ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಬಾಯ್ಲರ್ ವಿಭಾಗದಲ್ಲಿದ್ದ ಕಲ್ಲಿದ್ದಲಿನ ಬಂಕರ್'ನಲ್ಲಿ ನಿರಂತವಾಗಿ ಹೊತ್ತಿಕೊಂಡಿರುತ್ತಿದ್ದ ಬೆಂಕಿ ಯಿಂದಾಗಿ ಹಡಗಿನ ಕೆಳಭಾಗ ತೀರಾ ದುರ್ಬಲಗೊಂಡಿತ್ತು.
ಸಾಕ್ಷ್ಯಚಿತ್ರದಲ್ಲಿ ತೋರಿಸಿರುವ ಈ ವಿಚಾರವನ್ನು ಐರಿಶ್ ಪತ್ರಕರ್ತ ಹಾಗೂ ಲೇಖಕ ಸೆನನ್ ಮೋಲಾನಿ ಎಂಬವರು ಪ್ರತಿಪಾದಿಸಿದ್ದಾರೆ. ಹಡಗು ದಕ್ಷಿಣದ ಕಡೆಗೆ ತೆರಳುವ ಮೊದಲು ತೆಗೆದ ಚಿತ್ರಗಳಲ್ಲಿ ಹಡಗಿನ ತಳಭಾಗದಲ್ಲಿ ಕಪ್ಪು ಗುರುತುಗಳಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ. ಇದೇ ಸಂದರ್ಭದಲ್ಲಿ ಹಡಗಿಗೆ ಹಿಮಬಂಡೆಗಳೂ ಬಂದು ಅಪ್ಪಳಿಸುತ್ತವೆ ಈ ವಿಚಾರ ಪತ್ರಕರ್ತನ ಸಿದ್ಧಾಂತಕ್ಕೆ ಬಲ ನೀಡುವಂತಿದೆ.
ಪತ್ರಕರ್ತ ಮೊಲಾನಿ ಈ ದುರಂತಕ್ಕೆ ಸಂಬಂಧಿಸಿದಂತೆ 30 ವರ್ಷ ಅಧ್ಯಯನ ನಡೆಸಿದ್ದಾರೆ. ಟೈಮ್ಸ್ ಕೂಡಾ ಮೊಲಾನಿಯ ಈ ಮಾತುಗಳನ್ನು ಅನುಮೋದಿಸಿದೆ. ಈ ಕುರಿತಾಗಿ ಮಾತನಾಡಿರುವ ಪತ್ರಕರ್ತ 'ಟೈಟಾನಿಕ್ ನಿರ್ಮಿಸಿದ ಕಂಪೆನಿಯ ಅಧ್ಯಕ್ಷ ಜೆ ಬ್ರೂಸ್ ಇಸ್ಮಾಯ್'ನ್ನು ಹಡಗಿನಲ್ಲಿ ಕೆಲವೇ ಲೈಫ್ ಬೋಟ್'ಗಳನ್ನು ಇರಿಸಿದ್ದಕ್ಕಾಗಿ ಜೀವಮಾನವಿಡೀ ಓರ್ವ ಹೇಡಿ ಎಂದು ಹಿಯಾಳಿಸಿದ್ದರು. ಆದರೆ ಅವರಿಗೆ ಬೆಂಕಿಯ ವಿಚಾರ ತಿಳಿದಿತ್ತು ಆದರೆ ದುರಂತದ ಬಳಿಕ ಈ ಕುರಿತಾಗಿ ಯಾರೂ ಅವರ ಬಳಿ ಈ ಕುರಿತಾಗಿ ಕೇಳಲೇ ಇಲ್ಲ' ಎಂದಿದ್ದಾರೆ.
ಕೃಪೆ: ಲೈವ್ ಇಂಡಿಯಾ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.