
ಬೆಂಗಳೂರು(.02): ನೋಟ್ ಬ್ಯಾನ್ ಬಳಿಕ ಮೋದಿಯವರು ನೀಡಿರುವ ಗಡುವು ಮುಗಿದಿದೆ. ಅದರ ಬೆನ್ನಲ್ಲೇ ಹೊಸ ವರ್ಷಕ್ಕೆ ಪ್ರಧಾನಿ ಮೋದಿಯವರು ದೇಶದ ಜನತೆಗೆ ಗಿಫ್ಟ್ ನೀಡಿದ್ದಾರೆ. ಎಟಿಎಂನಲ್ಲಿ ಡ್ರಾ ಮಾಡುತ್ತಿದ್ದ 2500 ಮಿತಿಯನ್ನು 4500ಕ್ಕೆ ಏರಿಕೆ ಮಾಡಿ ಜನರಿಗೆ ಸಂತಸ ನೀಡಿದ್ದಾರೆ. ಆದರೆ ಎಟಿಎಂಗಳಲ್ಲಿ ನಿಜಕ್ಕೂ 4500 ಸಿಗುತ್ತಿದೆಯಾ ಈ ಬಗ್ಗೆ ಇಂದಿನಿಂದ ಸುವರ್ಣನ್ಯೂಸ್ ರಿಯಾಲಿಟಿ ಚೆಕ್ ನಡೆಸುತ್ತಿದೆ.
ವಿಥ್ ಡ್ರಾ ಮಿತಿ ಏರಿಸಿದರೂ ಪ್ರಯೋಜನವಿಲ್ಲ: ಐದು ನೂರು ರೂಪಾಯಿ ನೋಟುಗಳ ಕೊರತೆ
ಎಟಿಎಂನಲ್ಲಿ ಹಣ ವಿಥ್ ಡ್ರಾ ಮಿತಿ 2,500 ರಿಂದ 4,500ಕ್ಕೆ ಏರಿಕೆಯಾಗಿದೆ. ಹೊಸ ವರ್ಷದ ಮೊದಲ ದಿನದಿಂದ ಇದು ಜಾರಿಯಾಗಿದೆ. ಇದನ್ನು ಕೇಳಿದ ಜನ ಖುಷಿ ಪಟ್ಟಿದ್ದರು. ಹೊಸ ವರ್ಷಕ್ಕೆ ಮೋದಿ ಗಿಫ್ಟ್ ಎಂದು ಸಂತಸ ವ್ಯಕ್ತಪಡಿಸಿದ್ದರು. ಆದರೆ ಎಟಿಎಂಗೆ ಹೋದ್ರೆ ಅಲ್ಲಾಗುವುದೇ ಬೇರೆ. ಕೈಗೆ ಸಿಗುವುದು ಕೇವಲ ನಾಲ್ಕು ಸಾವಿರ ಮಾತ್ರ. ಇದಕ್ಕೆ ಕಾರಣ ಚಿಲ್ಲರೆ ಸಮಸ್ಯೆ. ಐದು ನೂರು ರೂಪಾಯಿ ನೋಟಿನ ಕೊರತೆಯಿಂದ ಎಟಿಎಂಗಳಲ್ಲಿ ಸಿಗುವುದು 2 ಸಾವಿರ ಮುಖ ಬೆಲೆಯ ಎರಡು ನೋಟುಗಳು ಮಾತ್ರ. ಕೇಂದ್ರಸರ್ಕಾರ ಆದೇಶದಂತೆ ನಿಜಕ್ಕೂ ATMಗಳಲ್ಲಿ 4500 ರೂಪಾಯಿ ಸಿಗುತ್ತಿದೆಯಾ? ಈ ಬಗ್ಗೆ ಇಂದಿನಿಂದ ಸುವರ್ಣನ್ಯೂಸ್ ವರ್ಷದ ಮೊದಲ ರಿಯಾಲಿಟಿ ಚೆಕ್ ನಡೆಸುತ್ತಿದೆ.
ಎಟಿಎಂಗಳಲ್ಲಿ ಸಿಗೋದು ಬರೀ 4 ಸಾವಿರ ರೂ.
ನೋಟ್ ಬ್ಯಾನ್ ಆಗಿ 50 ದಿನಗಳು ಕಳೆದರೂ ಚಿಲ್ಲರೆ ಸಮಸ್ಯೆ ಬಗೆಹರಿದಿಲ್ಲ. ಐದುನೂರು ರೂಪಾಯಿ ನೋಟುಗಳ ಕೊರತೆ ಇದೆ. ಕೆಲ ಎಟಿಎಂಗಳಲ್ಲಿ ನೋ ಕ್ಯಾಶ್ ಎನ್ನುವ ಬೋರ್ಡ್'ಗಳು ಇನ್ನೂ ರಾರಾಜಿಸುತ್ತಲೇ ಇವೆ. ಆದರೂ ಪರವಾಗಿಲ್ಲ. ಅಡ್ಜೆಸ್ಟ್ ಮಾಡ್ಕೊಳ್ತೀವಿ ಎನ್ನುತ್ತಿದ್ದಾರೆ ಜನ.
ಚಿಲ್ಲರೆ ಸಮಸ್ಯೆ ಬಗೆಹರಿಯೋದು ಯಾವಾಗ?
ಬಹುತೇಕವಾಗಿ ಕ್ಯಾಶ್ಲೆಸ್ ವ್ಯವಹಾರಕ್ಕೆ ಜನ ಹೊಂದಿಕೊಳ್ಳುತ್ತಿದ್ದಾರೆ. ಆದರೂ ಕೆಲವೆಡೆ ಹಣ ಅನಿವಾರ್ಯ. ಮೋದಿಯವರೇನೋ ಎಟಿಂಗಳಲ್ಲಿನ ವಿಥ್ ಡ್ರಾ ಮಿತಿ ಏರಿಸಿದ್ದಾರೆ. ಆದರೆ ಏನು ಪ್ರಯೋಜನ ಐದು ನೂರು ರೂಪಾಯಿಗಳ ಕೊರತೆಯನ್ನೂ ನೀಗಿಸಿ, ಜನರ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಬೇಕಿದೆ. ಈ ಬಗ್ಗೆ ಸುವರ್ಣನ್ಯೂಸ್ ಇಂದಿನಿಂದ ರಿಯಾಲಿಟಿ ಚೆಕ್ ನಡೆಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.